ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನೂತನ ಗರ್ಭಗೃಹದ ಪಾದುಕಾನ್ಯಾಸ

0

ಆಲಂಕಾರು: ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಇಷ್ಟಿಕಾ ಸ್ಥಾಪನ ಗರ್ಭಪಾತ್ರನ್ಯಾಸ ಮತ್ತು ನೂತನ ಗರ್ಭಗೃಹದ ಪಾದಕಾನ್ಯಾಸ ಆ.21 ಮತ್ತು ಆ.22 ರಂದು ನಡೆಯಿತು.

ಆ.21 ರಂದು ಬುಧವಾರ ಸಾಯಂಕಾಲ ವೇದ ಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವಾಸ್ತುಹೋಮ,ರಕ್ಷೋಘ್ನ ಹೋಮ,ವಾಸ್ತು ಬಲಿ ನೂತನ ಗರ್ಭಗೃಹಕ್ಕೆ ಇಷ್ಟಿಕಾಸನ ಗರ್ಭಪಾತ್ರನ್ಯಾಸ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಆ.22 ರಂದು ಗುರುವಾರ ಬೆಳಿಗ್ಗೆ ಕನ್ಯಾ ಲಗ್ನ ಸುಮುಹೂರ್ತದಲ್ಲಿ ನೂತನ ಗರ್ಭ ಗೃಹದ ಪಾದುಕಾನ್ಯಾಸ,ಬ್ರಹ್ಮರಥ ಕೆತ್ತನೆಯ ಮೂಹೂರ್ತ ನಡೆದು ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೇಮಂತ್ ರೈ ಮನವಳಿಕೆ ಸೇರಿದಂತೆ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರುಗಳು,ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ,ಅರ್ಚಕರು ,ಸಿಬ್ಬಂದಿಗಳು, ಊರ,ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here