ಬುರೂಜ್ ಶಾಲೆ: ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ

0

ಮೂಡುಪಡುಕೋಡಿ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಚೆನ್ನೈತ್ತೋಡಿ, ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಿಲಾತಬೆಟ್ಟು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಪ್ರಾಥಮಿಕ ವಿಭಾಗಕ್ಕೆ ಸಮಗ್ರ ಪ್ರಶಸ್ತಿ ದೊರಕಿದೆ. ಕನ್ನಡ ಕಂಠಪಾಠ ಮತ್ತು ಧಾರ್ಮಿಕ ಪಠಣ ಅರೇಬಿಕ್ ಈ ಎರಡು ಸ್ಪರ್ಧೆಯಲ್ಲಿ ಆಸೀಂ ರಿಹಾನ್ ಪ್ರಥಮ ಸ್ಥಾನ, ಇಂಗ್ಲೀಷ್ ಕಂಠಪಾಠ ರಿಝಾ ಫಾತಿಮಾ, ರವೂಫ್ ಪ್ರಥಮ ಸ್ಥಾನ, ಹಿಂದಿ ಕಂಠಪಾಠ ಫಾತಿಮಾ ವಫಾ ಪ್ರಥಮ ಸ್ಥಾನ, ಭಕ್ತಿ ಗೀತೆಯಲ್ಲಿ ವಿಕಾಸ್ ದ್ವಿತೀಯ ಸ್ಥಾನ, ಮಿಮಿಕ್ರಿಯಲ್ಲಿ ಧ್ಯಾನ್ ಶೆಟ್ಟಿ ತೃತೀಯ ಸ್ಥಾನ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ದೇಶ ಭಕ್ತಿ ಗೀತೆಯಲ್ಲಿ ಹಾರ್ದಿಕ್ ಪ್ರಥಮ, ಕನ್ನಡ ಕಂಠಪಾಠದಲ್ಲಿ ಫಾತಿಮಾ ಫರ್ಹಾ ತೃತೀಯ ಸ್ಥಾನ ಪಡೆದಿದ್ದಾರೆ. ಇವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

LEAVE A REPLY

Please enter your comment!
Please enter your name here