ಆ.26: ಪರ್ಪುಂಜದಲ್ಲಿ 20ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ, ವಿವಿಧ ಸ್ಪರ್ಧೆಗಳು

0

ಪುತ್ತೂರು: ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇದರ ಜಂಟಿ ಆಶ್ರಯದಲ್ಲಿ 20ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಅಚರಣೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಆ.26ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸದಾನಂದ ಶೆಟ್ಟಿ ಕೂರೇಲು, ಸುಂದರಿ, ಚನಿಯಪ್ಪ ನಾಯ್ಕ ಗುರುಕುಮೇರು, ಮಿತ್ರದಾಸ ರೈ ಡೆಕ್ಕಳ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸಾಜ ರಾಧಾಕೃಷ್ಣ ಆಳ್ವ, ಅರುಣ್ ಕುಮಾರ್ ಪುತ್ತಿಲ, ಸಹಜ್ ರೈ ಬಳಜ್ಜ, ಪ್ರಕಾಶ್ಚಂದ್ರ ರೈ ಕೈಕಾರ, ದುರ್ಗಾಪ್ರಸಾದ್ ರೈ ಕುಂಬ್ರ, ನಿತೀಶ್ ಕುಮಾರ್ ಶಾಂತಿವನ, ಶಶಿಧರ್ ಎಂ, ಮೋಹನ್‌ದಾಸ್ ರೈ ಕುಂಬ್ರ, ಸಿಶೇ ಕಜೆಮಾರ್, ಹೊನ್ನಪ್ಪ ಗೌಡ ಇಡಿಂಜಿಲ, ನಿಹಾಲ್ ಶೆಟ್ಟಿ, ಹರಿಹರ ಕೋಡಿಬೈಲು, ಹರೀಶ್ ಶಾಂತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

ಸ್ಪರ್ಧೆಗಳು
ಅಷ್ಠಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಪುರುಷರಿಗೆ ಕಂಬ ಏರುವುದು,ಮಡಿಕೆ ಒಡೆಯುವುದು, ಹಗ್ಗ ಜಗ್ಗಟ, ಗೋಣಿ ಚೀಲದ ಓಟ, ಕೋಲು ಓಟ, ವಾಲಿಬಾಲ್, ಮಹಿಳೆಯರಿಗೆ ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು,ಲಕ್ಕಿ ಸರ್ಕಲ್, ಗುಂಡೆಸೆತ, ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಅಲ್ಲದೆ ಹಲವು ಸ್ಪರ್ಧೆಗಳು ಬೆಳಿಗ್ಗೆಯಿಂದ ಸಂಜೆ ತನಕ ನಿರಂತರವಾಗಿ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ನೇಹ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಅಧ್ಯಕ್ಷ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಸ್ನೇಹ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ಪ್ರಮೀಳಾ ಎಸ್, ಕಾರ್ಯದರ್ಶಿ ರೇಖಾ ಎಸ್ ಹಾಗೂ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಳು ಭಕ್ತಿಗೀತೆ ಆಲ್ಬಂ ಸಾಂಗ್ ಬಿಡುಗಡೆ
ರಾಜೇಶ್ ರೈ ಪರ್ಪುಂಜ ನಿರ್ಮಾಣದಲ್ಲಿ ಸ್ಮೃತಿ ಪಲ್ಲತ್ತಾರು ಗಾಯನದಲ್ಲಿ ಮೂಡಿಬಂದಿರುವ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಕ್ಷೇತ್ರದ ವಿಶೇಷತೆಯನ್ನೊಳಗೊಂಡ ‘ಅಮರ್ ವೀರೆರ್’ ಕೋಟಿ ಚೆನ್ನಯೆರ್ ಎನ್ನುವ ತುಳು ಭಕ್ತಿಗೀತೆ ಆಲ್ಬಂ ಸಾಂಗ್ ಈ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ.

LEAVE A REPLY

Please enter your comment!
Please enter your name here