ಆ.26-27: ಪುತ್ತೂರು ಯುವಕ ವೃಂದ, ಕಲ್ಲಾರೆ ಇದರ ವತಿಯಿಂದ 45ನೇ ವರುಷದ ಮೊಸರು ಕುಡಿಕೆ ಸಂಭ್ರಮ

0

ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಲುವಾಗಿ 45ನೇ ವರುಷದ ಮೊಸರು ಕುಡಿಕೆ ಉತ್ಸವ ಆ.26 ಮತ್ತು 27ರಂದು ಇಲ್ಲಿನ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಆವರಣ ಜರುಗಲಿದೆಯೆಂದು ಪುತ್ತೂರು ಯುವಕ ವೃಂದ (ರಿ.) ಕಲ್ಲಾರೆ, ಇದರ ಪ್ರಕಟಣೆ ತಿಳಿಸಿದೆ.

ಅಧ್ಯಕ್ಷತೆಯನ್ನು ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ , ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ, ಕಲ್ಲಾರೆ ಇದರ ಕಾರ್ಯದರ್ಶಿ , ವಿಶ್ವ ಹಿಂದೂ ಪರಿಷತ್ತು ಇದರ ಗೌರವಾಧ್ಯಕ್ಷರೂ ಆದ ಯು.ಪೂವಪ್ಪ ಭಾಗವಹಿಸಲಿದ್ದು , ಬಹುಮಾನ ವಿತರಣೆಯನ್ನು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕಿಶೋರ್ ಕುಮಾರ್ ಬೊಟ್ಯಾಡಿ ನೆರವೇರಿಸಲಿರುವರು.

ಸ್ಪರ್ಧೆಗಳ ವಿವರ…..
ಎನ್.ಗಣಪತಿ ನಾಯಕ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು , ಬೆಳಿಗ್ಗೆ ಗಂಟೆ 6-05ಕ್ಕೆ: ಕ್ರಾಸ್ ಕಂಟ್ರಿ ರೇಸ್ , 10 ರಿಂದ ರಂಗವಲ್ಲಿ ಸ್ಪರ್ಧೆ , ಸಂಗೀತ ಸ್ಪರ್ಧೆ (ಭಕ್ತಿಗೀತೆ). ನಡೆದು ,ಅಪರಾಹ್ನ 1-30 ರಿಂದ ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆ ,ಬಳಿಕ ರಸಪ್ರಶ್ನೆ (Quiz) 3 ರಿಂದ ಗೋಣಿಚೀಲ ಓಟ, ಲಿಂಬೆ ಚಮಚ ಓಟ ಸ್ಪರ್ಧೆ, 4 ರಿಂದ ಸ್ಮರಣ ಶಕ್ತಿ ಹಾಗೂ ಗುಂಡು ಎಸೆತ ಸ್ಪರ್ಧೆಯೂ ಕೂಡ ನಡೆಯಲಿದೆ. ಬಳಿಕ 5 ರಿಂದ ಜಸ್ಟ್ ಮಿನಿಟ್ ಗೇಮ್ ನಂತರ ಸಂಗೀತ ಕುರ್ಚಿ ಹಾಗೂ ಮಡಕೆ ಒಡೆಯೋ ಸ್ಪರ್ಧೆ ನಡೆದು, ರಾತ್ರಿ 8 ಭಜನೆ, ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಆ. 27 ರಂದು ಸಂಜೆ 4 ರಿಂದ ಮೊಸರು ಕುಡಿಕೆ ಕಂಬ ಏರುವುದು, ಶ್ರೀಕೃಷ್ಣನ ವೇಷ ಸ್ಪರ್ಧೆ (3 ವರ್ಷದ ಒಳಗಿನ ಮಕ್ಕಳಿಗೆ) ಹಾಗೂ ಛದ್ಮವೇಷ ಸ್ಪರ್ಧೆ ನಡೆಯಲಿದೆ.
ಬಳಿಕ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 8 ಕ್ಕೆ ಶ್ರೀಕೃಷ್ಣನ ರಥೋತ್ಸವ ಜರುಗಿ , ಸಾಂಸ್ಕೃತಿಕ ಕಾರ್ಯಕ್ರಮ “ನೃತ್ಯ ವೈಭವ-2K24” ನಡೆಯಲಿದೆ.

ಈ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೃತ್ಯ ತಂಡಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಮತ್ತು ಉತ್ತಮ ಪ್ರದರ್ಶನ ನೀಡುವ ನೃತ್ಯ ತಂಡಕ್ಕೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಪ್ರೋತ್ಸಾಹಿಸೋ ಕಾರ್ಯ ನಡೆಯಲಿದ್ದು, ಪ್ರಥಮ ಬಹುಮಾನ: ರೂ. 10 ಸಾವಿರದ ಜೊತೆ ಆಕರ್ಷಕ ಸ್ಮರಣಿಕೆ. ದ್ವಿತೀಯ ಬಹುಮಾನ: ರೂ. 6 ಸಾವಿರ ಆಕರ್ಷಕ ಸ್ಮರಣಿಕೆ ಮತ್ತು ತೃತೀಯ ಬಹುಮಾನ :ರೂ. 4 ಸಾವಿರ ಜೊತೆಗೆ ಆಕರ್ಷಕ ಸ್ಮರಣಿಕೆ ಸಿಗಲಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೊ: 9148523109 ಅಥವಾ 8904808516 ಅಥವಾ 9845633564 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here