ಆ.31: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಮಹಾಸಭೆ

0

ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಆ.31ರಂದು ಪೂರ್ವಾಹ್ನ 10 ಗಂಟೆಗೆ ಸಂಘ ಆಲಂಕಾರಿನಲ್ಲಿರುವ ಕೇಂದ್ರ ಕಚೇರಿಯ ಬೈದಶ್ರೀ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ತಿಳಿಸಿದ್ದಾರೆ.


ಅವರು ಆಲಂಕಾರಿನಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ’ಸುದ್ದಿ’ಯೊಂದಿಗೆ ಮಾತನಾಡಿದರು. ಸರಕಾರದ ಆದೇಶದಂತೆ ಸಂಘವು 18.11.1991ರಂದು ನೋಂದಣಿ ಸಂಖ್ಯೆ 15801/91 ರ ಪ್ರಕಾರ ಸ್ಥಾಪನೆಗೊಂಡು 2005ರ ತನಕ ಮೂರ್ತೆಗಾರಿಕೆ ವ್ಯವಹಾರ ನಡೆಸುತ್ತಾ ಬಂದು, 31.10.2005ರಿಂದ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಾ ವರ್ಷದಿಂದ ವರ್ಷಕ್ಕೆ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಸಂಘವು ಆಲಂಕಾರಿನಲ್ಲಿ ಸ್ವಂತ ನಿವೇಶನದ ಕಟ್ಟಡ ಬೈದಶ್ರೀ ಸಹಕಾರ ಸೌಧದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ ಮತ್ತು ಕೊಯಿಲದಲ್ಲಿ ಬ್ಯಾಂಕಿಂಗ್ ವ್ಯವಹಾರದ ಶಾಖೆಗಳಿವೆ.

89.32 ಲಕ್ಷ ರೂ.ನಿವ್ವಳ ಲಾಭ:
2023-24ನೇ ಸಾಲಿನಲ್ಲಿ ರೂ.115.15 ಕೋಟಿ ಠೇವಣಿ ಸಂಗ್ರಹಿಸಿದ್ದು ವರ್ಷಾಂತ್ಯಕ್ಕೆ ರೂ.30.81 ಕೋಟಿ ಠೇವಣಿ ಹೊಂದಿರುತ್ತದೆ ಮತ್ತು ರೂ.35.81 ಕೋಟಿ ಸಾಲ ವಿತರಿಸಿದ್ದು ರೂ.26.53 ಕೋಟಿ ಹೊರಬಾಕಿ ಸಾಲ ಇದ್ದು ಶೇ.97.85 ಸಾಲ ವಸೂಲಾತಿ ಸಾಧನೆ ಮಾಡಿದೆ. ಒಟ್ಟು 198.26 ಕೋಟಿ ರೂ.ವ್ಯವಹಾರ ನಡೆಸಿ ರೂ.89.32 ಲಕ್ಷ ನಿವ್ವಳ ಲಾಭಗಳಿಸಿದೆ. ವರ್ಷಾಂತ್ಯಕ್ಕೆ ಒಟ್ಟು 33.83 ಕೋಟಿ ರೂ.ದುಡಿಯುವ ಬಂಡವಾಳ ಹೊಂದಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ಕಳೆದ 11 ವರ್ಷಗಳಿಂದ ’ಎ’ ವರ್ಗೀಕರಣದಲ್ಲಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.

ಪ್ರತಿಭಾ ಪುರಸ್ಕಾರ:
ಮಹಾಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ತರಗತಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಗುವುದು. ಎಸ್‌ಎಸ್‌ಎಲ್‌ಸಿ ಯಲ್ಲಿ ಕ್ನಾನಾಯ ಜ್ಯೋತಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 616 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ರಿದ್ದಿ ಶೆಟ್ಟಿ, ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಪ್ರೌಡಶಾಲೆಯ 614 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಸಾನ್ವಿ ಜೆ ರೈ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಆತೂರು ಆಯಿಶಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಪೈಕಿ 584 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಅಫ್ರಿದಾ ಮತ್ತು 585 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಫಾತಿಮಾ ಆಸ್ನಾ, ಕಲಾ ವಿಭಾಗದಲ್ಲಿ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದ 584 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಅಭಿಲಾಶಾ ಪಿ.ಡಿ, ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಪಿಯುಸಿ ಕಲಾ ವಿಭಾಗದಲ್ಲಿ 560 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ರವಿಕುಮಾರ್, ಪಿಯುಸಿ ವಾಣಿಜ್ಯ ವಿಭಾಗದಲ್ಲಿ 585 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಸಮೀಕ್ಷಾ, ಪಿಯುಸಿ ವಿಜ್ಞಾನ ವಿಭಾಗದಲ್ಲಿ 584 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಜೀವನ್ ಎಸ್, 579 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಸಾಕ್ಶಾ ಎ , ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪೈಕಿ ಕಲಾಪದವಿಯಲ್ಲಿ ಶೇ 84.73 ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಚೈತನ್ಯ ಮತ್ತು ಶೇ 83.93 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ವರ್ಷಿಣಿ ಬಿ, ವಾಣಿಜ್ಯ ಪದವಿಯಲ್ಲಿ ಶೇ 90.57 ಅಂಕಪಡೆದು ಪ್ರಥಮ ಸ್ಥಾನ ಪಡೆದ ಚೇತನಾ ಬಿ ಎಸ್, ಮತ್ತು ಶೇ 89.93 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದ ಶ್ರದ್ದಾ ಯು ಎಸ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿವೇತನ:
ಸಂಘದ ಸದಸ್ಯರ ಮಕ್ಕಳ ಪೈಕಿ ಪ್ರತಿಭಾನ್ವಿತರಿಗೆ, ಮೂರ್ತೆದಾರ ಸದಸ್ಯರ ಮಕ್ಕಳಿಗೆ, ಸರಕಾರಿ ಪ್ರೌಢಶಾಲೆ ಮತ್ತು ಕಾಲೇಜುನಲ್ಲಿ ವ್ಯಾಸಂಗ ಮಾಡಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.


ದತ್ತಿನಿಧಿ ವಿದ್ಯಾರ್ಥಿವೇತನ:
ದಿ,ನೈಯ್ಯಲ್ಗ ಗಿರಿಯಪ್ಪ ಪೂಜಾರಿ ಸ್ಮರಣಾರ್ಥ, ದಿ. ನೈಯ್ಯಲ್ಗ ದೇರಣ್ಣ ಪೂಜಾರಿ ಮತ್ತು ದಿ. ಪದ್ಮಾವತಿ ಸ್ಮರಣಾರ್ಥ, ದಿ ಗುಡ್ಡಪ್ಪ ಪೂಜಾರಿ ಕೇರ್ಪುಡೆ ಸ್ಮರಣಾರ್ಥ, ದಿ.ಗುಡ್ದಪ್ಪ ಪೂಜಾರಿ ಮತ್ತು ದಿ. ಶಾಂಭವಿ ಬದಿಬಾಗಿಲು ಸ್ಮರಣಾರ್ಥ, ದಿ. ಚಂದ್ರಶೇಖರ ಆಲಂಕಾರು ಸ್ಮರಣಾರ್ಥ, ದಿ ಬಟ್ಲಡ್ಕ ಮೋನಪ್ಪ ಪೂಜಾರಿ ಮತ್ತು ದಿ ಮುತ್ತಕ್ಕ ಸ್ಮರಣಾರ್ಥ ಸಂಘದ ಸದಸ್ಯರು ಇಟ್ಟಿರುವ ದತ್ತಿನಿಧಿ ಠೇವಣಿ ಬಡ್ಡಿಯಿಂದ ಸಂಘದ ಕಾರ್ಯವ್ಯಾಪ್ತಿಯ ಅರ್ಹ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.


ಸನ್ಮಾನ:
ಸಂಘದ ಹಿರಿಯ ಮೂರ್ತೆದಾರರ ನೆಲೆಯಲ್ಲಿ ಬಾಲಕೃಷ್ಣ ಪೂಜಾರಿ ನೆಕ್ಕಿಲಾಡಿ ಇವರನ್ನು ಸನ್ಮಾನಿಸಲಾಗುವುದು ಎಂದು ಅಧ್ಯಕ್ಷರಾದ ಎನ್ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಹೇಳಿದರು.
ಸಂಘದ ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ಕದ್ರ, ನಿರ್ದೇಶಕರಾದ ಜಯಕರ ಪೂಜಾರಿ ಕಲ್ಲೇರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್‌ಕುಮಾರ್ ಅಗತ್ತಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here