ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ಪ್ರೀ ಕೆಜಿ ತರಗತಿಯ ನೂತನ ಕಟ್ಟಡದ ಉದ್ಛಾಟನೆ ನಡೆಯಿತು.
ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಅವರು ನೂತನ ಕಟ್ಟಡದ ಆಶೀರ್ವಾದ ವಿಧಿ ನೆರವೇರಿಸಿದರು. ಫಾ.ಅನುಷ್ ಜೇಕಬ್‌ರವರ ನೇತೃತ್ವದಲ್ಲಿ ನೂತನ ಕಟ್ಟಡದ ಉದ್ಘಾಟನಾ ಧಾರ್ಮಿಕ ವಿಧಿ ವಿಧಾನ ನೆರವೇರಿತು. ಗ್ಲಾಸ್ಗೋ ಕ್ನೌನಾಯ ಕೆಥೋಲಿಕ್ ಅಸೋಸಿಯೇಷನ್, ಸ್ಕಾಟ್‌ಲ್ಯಾಂಡ್ ಯು.ಕೆ. ಇವರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಈ ವಿನೂತನ ಕಟ್ಟಡವನ್ನು ಪುಟಾಣಿಗಳಾದ ಶ್ರೀಕೃಷ್ಣ ವೇಷಧಾರಿಯಾಗಿದ್ದ ಲಕ್ಷ್ಯ ಲವೀನ್ ಹಾಗೂ ತನ್ವಿ ಬಾಣಜಾಲು ಉದ್ಘಾಟಿಸಿದರು. ಪ್ರೀ ಕೆಜಿಗೆ ದಾಖಲುಗೊಂಡ ಪುಟಾಣಿಗಳಿಗೆ ಸಿಹಿ ನೀಡಿ ವಿನೂತನ ತರಗತಿ ಕೋಣೆಗೆ ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಪಾಲಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐರಾವತ ಬಸ್ಸಿನ ಮಾದರಿಯ ಕಟ್ಟಡ:
ಪುಟ್ಟ ಮಕ್ಕಳಿಗಾಗಿ ಅತ್ಯಾಕರ್ಷಕ ಐರಾವತ ಬಸ್ಸನ್ನು ಹೋಲುವ ಮಾದರಿಯಲ್ಲಿ ಈ ಕಟ್ಟಡದ ಹೊರನೋಟ ಹೊಂದಿದ್ದು, ಒಳಭಾಗದ ಗೋಡೆಯಲ್ಲಿ ವರ್ಣರಂಜಿತ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳ ಮನೋಲ್ಲಾಸದ ಕಲಿಕೆ ಹಾಗೂ ಮನೆಯ ವಾತಾವರಣವನ್ನು ಸೃಷ್ಠಿಸುವುದಕ್ಕಾಗಿ ವಿವಿಧ ಆಟೋಟ ಉಪಕರಣ ಹಾಗೂ ಟಿ.ವಿ.ಯನ್ನು ಒಳಾಂಗಣದಲ್ಲಿ ಅಳವಡಿಸಲಾಗಿದೆ.