ನಿಡ್ಪಳ್ಳಿ: ಜೈ ಯುವಶಕ್ತಿ ಯುವಕ ಮಂಡಲ ತಂಬುತ್ತಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಆ.26ರಂದು ಕರ್ನಪ್ಪಾಡಿ ಕೋಟಿ ಚೆನ್ನಯ ಬ್ರಹ್ಮಬೈದರ್ಕಳ ಗರಡಿ ವಠಾರದಲ್ಲಿ ನಡೆಯಿತು.
ಬೆಳಿಗ್ಗೆ ಮ್ಯಾರಥಾನ್ ಗೆ ಚಾಲನೆ ನೀಡುವ ಮೂಲಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ವಿಷ್ಣು ಭಟ್ ಮುಂಡೂರು ಮಾತನಾಡಿ ಶ್ರೀಕೃಷ್ಣನ ಬಾಲ್ಯ ಮತ್ತು ಲೀಲೆ ಬಗ್ಗೆ ವಿವರಿಸಿದರು.ಪಾಣಾಜೆ ಸಿ.ಎ ಬ್ಯಾಂಕ್ ನಿಡ್ಪಳ್ಳಿ ಶಾಖೆಯ ಸಿಬ್ಬಂದಿ ಸಂದೇಶ್ ಬಿ, ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಕುಸುಮಾವತಿ ಎ.ವಿ, ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಸೇರ್ತಾಜೆ, ಹಾರಾಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಜನಾರ್ಧನ ದುರ್ಗ, ಕರ್ನಪ್ಪಾಡಿ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಕಪ್ಪ ಪೂಜಾರಿ ಕರ್ನಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಸುರೇಶ್ ಕಾನ ಅಧ್ಯಕ್ಷತೆ ವಹಿಸಿದ್ದರು.
- ಸನ್ಮಾನ ಸಮಾರಂಭ: ಗ್ರಾಮದ ನಿಷ್ಟಾವಂತ ಕೂಲಿ ಕಾರ್ಮಿಕ ಕುಂಞಣ್ಣ ನಾಯ್ಕ ಮಾಯಿಲಕೋಟೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯುವಕ ಮಂಡಲದ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸುಸಂದರ್ಭದಲ್ಲಿ ಯುವಕ ಮಂಡಲದ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ರುಕ್ಮಿಣಿ ಕಾನ ಇವರನ್ನೂ ಸನ್ಮಾನಿಸಲಾಯಿತು. ಸರಕಾರಿ ಶಾಲೆಯಲ್ಲಿ ಕಲಿತ 2023-24ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರಥಮ್ ನುಳಿಯಾಲು ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹರ್ಷಿತ್ ಮಾಯಿಲಕೋಟೆ ಇವರನ್ನು ಗೌರವಿಸಲಾಯಿತು. ಕಳೆದ ಹತ್ತು ವರ್ಷಗಳಿಂದ ಅಡ್ಡ ಕಂಬ ಸ್ಪರ್ಧೆಯ ಕಂಬವನ್ನು ತಯಾರಿಸುತ್ತಾ ಬರುತ್ತಿರುವ ಕೃಷ್ಣಪ್ಪ ಪೂಜಾರಿ ಕಾನ, ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಐತ್ತಪ್ಪ ನಾಯ್ಕ ಬೇರಿಕೆ ಇವರನ್ನು ಗೌರವಿಸಲಾಯಿತು.
- ದತ್ತಿನಿಧಿ ಸ್ಥಾಪಕರಿಗೆ ಗೌರವಾರ್ಪಣೆ:
ಯುವಕ ಮಂಡಲದ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿರುವ ದಿವಂಗತ ದಾಮೋದರ ಭಟ್ ತಂಬುತ್ತಡ್ಕ ಇವರ ಪರವಾಗಿ ಪುತ್ರ ದುರ್ಗಾಪ್ರಸಾದ್ ಭಟ್, ಪ್ರಗತಿಪರ ಕೃಷಿಕ ಸಂಜೀವ ಪೂಜಾರಿ ಕಾನ ಇವರನ್ನು ಗೌರವಿಸಲಾಯಿತು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಾನ್ವಿ ಪ್ರಾರ್ಥಿಸಿ,ಯುವಕ ಮಂಡಲದ ಸದಸ್ಯ ಗಿರೀಶ್ ಗುರಿ ಸ್ವಾಗತಿಸಿದರು.ಮನೀಶ್ ಕರ್ನಪ್ಪಾಡಿ ವಂದಿಸಿದರು.ಸಂತೋಷ್ ಕುಮಾರ್ ಕಾನ, ಮಧು ಸೂಧನ ಕಾನ ಕಾರ್ಯಕ್ರಮ ನಿರೂಪಿಸಿದರು.ನಿತಿನ್ ಕರ್ನಪ್ಪಾಡಿ, ಅಶ್ವಥ್ ಪೂಜಾರಿ , ರಮೇಶ್ ಪೂಜಾರಿ, ಸತೀಶ್ ಬೇರಿಕೆ,ಸಂತೋಷ್, ಸುರೇಶ್.ಬಿ, ನವೀನ ನಾಕಪ್ಪಾಡಿ,ಪ್ರವೀಣ್ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು.ಯುವಕ ಮಂಡಲದ ಸದಸ್ಯರು ಸಹಕರಿಸಿದರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
- ದತ್ತಿನಿಧಿ ಸ್ಥಾಪಕರಿಗೆ ಗೌರವಾರ್ಪಣೆ:
- ವಿವಿಧ ಆಟೋಟ ಸ್ಪರ್ಧೆಗಳು:ವಿಶೇಷ ಆಕರ್ಷಣೆಯಾಗಿ ಅಂಗನವಾಡಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ, ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ ವಿಭಾಗದ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.