ಕಡಬ ಪಾಲೋಳಿ ಸೇತುವೆ ಸಂಚಾರಕ್ಕೆ ಮುಕ್ತ

0

ಕಡಬ: ಕುಮಾರಧಾರಾ ನದಿಗೆ ಪಿಜಕ್ಕಳ ಸಮೀಪದ ಪಾಲೋಳಿ ಎಂಬಲ್ಲಿ ನಿರ್ಮಿಸಲಾಗಿದ್ದ ಸರ್ವಋತು ಸೇತುವೆಯು ಇಂದು ಸಂಚಾರಕ್ಕೆ‌ ಮುಕ್ತಗೊಂಡಿದೆ.

19.68 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ 175 ಮೀಟರ್ ಉದ್ದ 12 ಮೀಟರ್ ಅಗಲದ ಸೇತುವೆಯನ್ನು ಸುಳ್ಯ ಶಾಸಕಿ‌ ಭಾಗೀರಥಿ ಮುರುಳ್ಯ ಸಂಚಾರಕ್ಕೆ ಮುಕ್ತಗೊಳಿಸಿದರು. ಅಧಿಕೃತ ಉದ್ಘಾಟನೆ ಇನ್ನಷ್ಟೇ ಆಗಬೇಕಿದೆ. ಈ ಸೇತುವೆಯಿಂದಾಗಿ ಎಡಮಂಗಲ, ಕಾಣಿಯೂರು, ಚಾರ್ವಾಕ ಭಾಗದವರಿಗೆ ಸುಲಭವಾಗಿ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಬಹುದಾಗಿದೆ. ಇದರಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

LEAVE A REPLY

Please enter your comment!
Please enter your name here