ಉಪ್ಪಿನಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ 45ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ.೨೭ರಂದು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬೆಳಗ್ಗೆ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಶ್ರೀ ಶಾರದಾ ವನಿತಾ ಭಜನಾ ಮಂಡಳಿಯಿಂದ ಭಜನಾ ಸೇವೆ, ಆಟೋಟ ಸ್ಪರ್ಧೆಗಳು, ಅಡ್ಡ ಜಾರುಕಂಬ ಸ್ಪರ್ಧೆ, ಮುದ್ದು ಮಕ್ಕಳ ಕೃಷ್ಣ ವೇಷದ ಸ್ಪರ್ಧೆಗಳು ನಡೆದವು. ಬಳಿಕ ಅನ್ನಸಂತರ್ಪಣೆ ನಡೆದು, ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಬಳಿಕ ಶ್ರೀ ದೇವಾಲಯದಿಂದ ರಥಬೀದಿ, ಗಾಂಧಿಪಾರ್ಕ್, ರಾಷ್ಟ್ರೀಯ ಹೆದ್ದಾರಿ, ಮಾದರಿ ಶಾಲಾ ಮಾರ್ಗವಾಗಿ ದೇವಾಲಯದ ತನಕ ಶೋಭಾಯಾತ್ರೆ ನಡೆಯಿತು. ಈ ಸಂದರ್ಭ ಅಲ್ಲಲ್ಲಿ ಕಟ್ಟಲಾಗಿದ್ದ ಅಟ್ಟಿ ಮಡಿಕೆಯನ್ನು ಹಾಗೂ ಮೊಸರು ಕುಡಿಕೆಗಳನ್ನು ಪಿರಮಿಡ್ ರಚಿಸಿ ಒಡೆಯಲಾಯಿತು. ಮೆರವಣಿಗೆಯುದ್ದಕ್ಕೂ ಕೀಲು ಕುದುರೆ, ಮುದ್ದು ಬಾಲಕೃಷ್ಣ, ರಾಧಾ ವೇಷಧಾರಿಗಳು ನಾಸಿಕ್ ಬ್ಯಾಂಡ್ ಸೆಟ್, ಚೆಂಡೆ ವಾದನ, ಕುಣಿತ ಭಜನಾ ತಂಡಗಳು ಸಾಥ್ ನೀಡಿದವು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಸುರೇಶ್ ಅತ್ರೆಮಜಲು, ಕಾರ್ಯದರ್ಶಿ ವಿದ್ಯಾಧರ ಜೈನ್, ಗೌರವಾಧ್ಯಕ್ಷ ಎನ್. ಯಶವಂತ ಪೈ, ಕೋಶಾಧಿಕಾರಿ ಲೊಕೇಶ್ ಜೈನ್, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಂಗ್ವೆ, ಜೊತೆ ಕಾರ್ಯದರ್ಶಿಗಳಾದ ಧನಂಜಯ ನಟ್ಟಿಬೈಲು, ಸಂತೋಷ್ ಅಡೆಕ್ಕಲ್, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಪ್ರಮುಖರಾದ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಡಾ. ರಾಜಾರಾಮ್ ಕೆ.ಬಿ., ಉಷಾ ಚಂದ್ರ ಮುಳಿಯ, ಸುದರ್ಶನ್, ಸಾಜ ರಾಧಾಕೃಷ್ಣ ಆಳ್ವ, ಎನ್. ಉಮೇಶ್ ಶೆಣೈ, ಹರೀಶ್ ನಾಯಕ್ ನಟ್ಟಿಬೈಲ್, ರವಿನಂದನ್ ಹೆಗ್ಡೆ, ನಾಗೇಶ್ ಪ್ರಭು, ಹರೀಶ್ ಬಂಡಾರಿ, ಚಂದ್ರಶೇಖರ ಮಡಿವಾಳ, ಲೊಕೇಶ್ ಬೆತ್ತೋಡಿ, ಕಿಶೋರ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.