ಪುತ್ತೂರು : ಕುಂಟ್ಯಾನ ಶ್ರೀ ಕೃಷ್ಣ ಯುವಕ ಮಂಡಲ , ಸೇಡಿಯಾಪು – ಬನ್ನೂರು, ಇದರ ವತಿಯಿಂದ ಆ. 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕುಂಟ್ಯಾನ ಶ್ರೀ ಸದಾಶಿವ ದೇವಾಲಯದ ವಠಾರದಲ್ಲಿ 20ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಧಾರ್ಮಿಕ , ಸಾಂಸ್ಕೃತಿಕ ಹಾಗೂ ವಿವಿಧ ರೀತಿಯ ಆಟೋಟಾ ಸ್ಪರ್ಧೆಯೊಂದಿಗೆ ಮತ್ತು ಸಾಧಕರಿಗೆ ಸನ್ಮಾನ ಮೂಲಕ ಆಚರಣೆ ಮಾಡಲಾಯಿತು.
ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಭಟ್ ದೀಪ ಪ್ರಜ್ವಲನೆ ಮೂಲಕ ಉತ್ಸವಕ್ಕೆ ಚಾಲನೆ ನೀಡಿ ,ಹಾರೈಸಿದರು. ಆ ಬಳಿಕ ಪುಟಾಣಿಗಳಿಂದ ಪ್ರಾರಂಭವಾಗಿ , ಮಕ್ಕಳು ಹಾಗೂ ಯುವ ಸಮೂಹ ವಿವಿಧ ಬಗೆಯ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿ , ಬಹುಮಾನ ಪಡೆದುಕೊಂಡರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯಿತು. ಅಧ್ಯಕ್ಷತೆಯನ್ನು ಬನ್ನೂರು ಗ್ರಾ.ಪಂ. ಉಪಾಧ್ಯಕ್ಷ ಶೀನಪ್ಪ ಕುಲಾಲ್ ಬದಿಯಡ್ಕ ವಹಿಸಿ ಮಾತಮಾಡಿ , ಶ್ರೀ ಕೃಷ್ಣ ಯುವಕ ಮಂಡಲದ ಕಾರ್ಯವೈಖರಿಗೆ ಎಲ್ಲರ ಪ್ರೀತಿ ಬೆಂಬಲ ಇನ್ನಷ್ಟೂ ಸಿಗಲಿಯೆಂದರು.
ಮುಖ್ಯ ಅತಿಥಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್ ನೀರ್ಪಾಜೆ ಮಾತನಾಡಿ , ಇಂತಹ ಕಾರ್ಯಕ್ರಮ ಮೂಲಕ ಸಮಾಜದ ಎಲ್ಲರಲ್ಲೂ ಮತ್ತಷ್ಟು ಒಗ್ಗಟ್ಟು ಮೂಡವ ಕಾರ್ಯ ನಡೆಯಲು ಸಹಕಾರಿಯೆಂದು ಹೇಳಿದರು. ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸ್ಮಿತಾರವರು ಕೂಡ ಯುವಕ ಮಂಡಲದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ,ಕೊಂಡಾಡಿದರು. ಶ್ರೀಕೃಷ್ಣ ಯುವಕ ಮಂಡಲ ಇದರ ಅಧ್ಯಕ್ಷ ತಿಲಕ್ ವೇದಿಕೆಯಲ್ಲಿ ಇದ್ದರು.

ಬಳಿಕ ವಿವಿಧ ಆಟೋಟಾ ಹಾಗೂ ಇನ್ನಿತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ವೇಳೆ ಯುವಕ ಮಂಡಲದ ಕಾರ್ಯದರ್ಶಿ ಎಂ ಕೆ ಸುಬ್ರಹ್ಮಣಿ ಅಡೆಂಚಿಲಡ್ಕ ,ಗೌರವ ಸಲಹೆಗಾರ ಸುಬ್ರಹ್ಮಣ್ಯ ದಾಸ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಕ್ರೀಡಾ ಪ್ರೇಮಿಗಳು, ಸ್ಥಳೀಯರು ಹಾಜರಿದ್ದರು.ರಮೇಶ್ ಅಡೆಂಚಿಲಡ್ಕ ಸ್ವಾಗತಿಸಿ ,ವಂದಿಸಿದರು.ಸಂತೋಷ್ ಕುಲಾಲ್ ಸೇಡಿಯಾಪು ವಿವಿಧ ರೀತಿಯಲ್ಲಿ ಸಹಕರಿಸಿದರು.
ಪ್ರತಿಭಾ ಪುರಸ್ಕಾರ , ಸನ್ಮಾನ …
ದ್ವಿತೀಯ ಪಿಯುವಿನಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ರಕ್ಷಾ ಅಡೆಂಚಿಲಡ್ಕ ಮತ್ತು ರಾತ್ರಿ ಸಮಯದಲ್ಲೂ ಸಾರ್ವಜನಿಕರ ಕರೆಗೆ ಕೂಡಲೇ ಸ್ಪಂದಿಸಿ , ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ಸರಿಪಡಿಸುವ ಮೂಲಕ ಕರ್ತವ್ಯ ನಿಷ್ಠೆ ಹೊಂದಿರುವ ಸ್ಥಳೀಯ ಪವರ್ ಮ್ಯಾನ್ ರಮೇಶ್ ಪೂಜಾರಿ ಇವರಿಬ್ಬರನ್ನು ಗೌರವಿಸಿ , ಸನ್ಮಾನಿಸಲಾಯಿತು.