ಪುತ್ತೂರು: ಎಪಿಎಂಸಿ ರಸ್ತೆಯ ಎ ಪಿ ಕಾಂಪ್ಲೆಕ್ಸ್ ಮಾಲಕ ವಲೇರಿಯನ್ ಡಿ ಸೋಜ (88ವ) ರವರು ಆ.28 ರಂದು ನಿಧನರಾದರು.
ಪುತ್ತೂರು ಮಾಜಿ ಪುರಸಭೆಯಲ್ಲಿ ಹಲವಾರು ವರ್ಷಗಳ ಕಾಲ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ.
ಮೃತರು ದೊಡ್ಡ ಮಗ ವಿನ್ಸೆಂಟ್ ಡಿಸೋಜಾ ಹಾಗೂ ಸಣ್ಣ ಮಗ ವಿಜಯ್ ಹಾಗೂ ಹೆಣ್ಣು ಮಕ್ಕಳಾದ ವಿಕ್ಟೋರಿಯಾ ವೀರ ಹಾಗೂ ವೀಣಾ ಹಾಗು ಇನ್ನೋರ್ವ ಪುತ್ರಿಯನ್ನು ಮತ್ತು ಸೊಸೆಯಂದಿರನ್ನು ಅಗಲಿರುತ್ತಾರೆ.
ಇವರ ಅಂತ್ಯ ಸಂಸ್ಕಾರವು ನಾಳೆ 29ರಂದು ಪೂರ್ವಹ್ನ ಗಂಟೆ 10:30ಕ್ಕೆ ವಿಜಯ್ ವಿಹಾರ್ ಎಪಿಎಂಸಿ ರೋಡ್ ಪುತ್ತೂರು ಇಲ್ಲಿಂದ ಹೊರಟು ಏಳ್ಮುಡಿ ಸೆಮಿಟೆರಿಯಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ನಡೆಯಲಿರುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿರುತ್ತದೆ.