ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಕೊರತೆ ಇದ್ದು ಅದನ್ನು ಪರಿಹರಿಸಲು ಹೊಸ ಐ ಟಿ ಐ ಸಂಸ್ಥೆಯನ್ನು ಮಂಜೂರುಮಾಡಿ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಅವರು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ದಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಹೊರಭಾಗದಿಂದ ಅನೇಕ ವಿದ್ಯಾರ್ಥಿಗಳು ಕೈಗಾರಿಕ ತರಬೇತಿ ಕೋರ್ಸ್‌ಗಳನ್ನು ವಿದ್ಯಾಭ್ಯಾಸ ಮಾಡಲು ಬರುತ್ತಿರುವುದರಿಂದ ಪ್ರಸ್ತುತ ತಾಲೂಕಿನಲ್ಲಿ ಸರ್ಕಾರಿ ಕೈಗಾರಿಕ ತರಬೇತಿ ಕಾಲೇಜಿನ ಕೊರತೆ ಇರುತ್ತದೆ. ಆದುದರಿಂದ ಕಾಲೇಜು ನಿರ್ಮಾಣಕ್ಕಾಗಿ ಈಗಾಗಲೇ ಕಾಯ್ದಿರಿಸಲಾಗಿರುವ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸ.ನಂ 92/2 ರಲ್ಲಿರುವ 3.10 ಎಕರೆ ಜಮೀನಿನಲ್ಲಿ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲು ಅನುಮತಿಯನ್ನು ನೀಡುವಂತೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ರೂ. 500.00 ಲಕ್ಷಗಳ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಕಾಂಗ್ರೆಸ್ ಮುಖಂಡ ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಸರಕಾರಿ ಐಟಿಐ ಸಂಸ್ಥೆಯ ಕೊರತೆ ಇದೆ ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಪುತ್ತೂರು ತಾಲೂಕು ಸೇರಿದಂತೆ ಹೊರ ಭಾಗದಿಂದಲೂ ಐ ಟಿ ಐ ಗೆ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದು ,ಇದು ಅನೇಕ ವರ್ಷಗಳ ಬೇಡಿಕೆಯಾಗಿದೆ. ಈಗಾಗಲೇ ಕೋಡಿಂಬಾಡಿ ಗ್ರಾಮದಲ್ಲಿ ಜಾಗ ಗುರುತಿಸಲಾಗಿದೆ.ಅನುಮತಿ ಮತ್ತು ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಕೊಡುವ ಭರವಸೆಯನ್ನು ನೀಡಿದ್ದಾರೆ
ಅಶೋಕ್ ರೈ ,ಶಾಸಕರು ಪುತ್ತೂರು