ಪುತ್ತೂರು : ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ (Brijesh Chowta) ನೇತೃತ್ವದಲ್ಲಿ ಗುರುವಾರ ರಹಸ್ಯ ಸಭೆ ನಡೆದಿದ್ದು ಕುತೂಹಲ ಮೂಡಿಸಿದೆ.
ಸಂಸದ ಚೌಟ ಅವರು ದಿಢೀರ್ ಪಕ್ಷದ ಕಚೇರಿಗೆ ಆಗಮಿಸಿದ್ದರು. ಈ ಬಗ್ಗೆ ಬಿಜೆಪಿಯ ಮಾಧ್ಯಮ ಗ್ರೂಪ್ ನಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲಾಯಿತು. ಹೀಗಾಗಿ ಪತ್ರಕರ್ತರು ಆಗಮಿಸಿದ್ದರು.
ಸಭೆ ಆರಂಭಗೊಂಡ ಬೆನ್ನಲ್ಲೇ ಸಂಸದ ಬ್ರಿಜೇಶ್ ಚೌಟ ಅವರು ಪತ್ರಕರ್ತರನ್ನು ಗಮನಿಸಿ ಹೊರ ಹೋಗುವಂತೆ ಸೂಚಿಸಿದರು. ಪತ್ರಕರ್ತರು ಹೊರ ಹೋದ ಬಳಿಕ ಸಂಸದ ಚೌಟ ಭಾಷಣ ಆರಂಭಿಸಿದರು. ಸಭೆಯಲ್ಲಿ ಪುತ್ತಿಲ ಪರಿವಾರ, ಬಿಜೆಪಿ ಮುಖಂಡರು ಉಪಸ್ಥಿತರಿದ್ದು ರಹಸ್ಯ ಸಭೆ ಕುತೂಹಲ ಮೂಡಿಸಿದೆ.