ಹೊಸ ಟ್ರಾಫಿಕ್ ಇ -ಚಲನ್ ವಂಚನಾ ಜಾಲ-ವಂಚಕರ ಬಲೆಗೆ ಬಿದ್ದು ಸಾವಿರಾರು ರೂಪಾಯಿ ಕಳೆದುಕೊಂಡ ಉಪ್ಪಿನಂಗಡಿಯ ವ್ಯಕ್ತಿ

0

ಪುತ್ತೂರು: ಟ್ರಾಫಿಕ್ ಇ -ಚಲನ್ ಪಾವತಿಗಾಗಿ ವ್ಯಕ್ತಿಗಳು ದುರುದ್ದೇಶಪೂರಿತ ನೈಜವಾಗಿ ಕಾಣುವಂತಹ ಲಿಂಕ್ ಅನ್ನು ಕ್ಲಿಕ್ ಮಾಡುವ ಸಂದೇಶದ ಹೊಸ ರೀತಿಯ ಹಗರಣದ ವಿಧಾನ ಆರಂಭಗೊಂಡಿದ್ದು, ಈ ವಂಚನೆಗೆ ಒಳಗಾಗಿ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾರೆ.


ವಂಚನೆಯ ಸಂದೇಶವನ್ನು ನೈಜವಾಗಿ ಕಾಣುವ ರೀತಿಯಲ್ಲಿ ರಚಿಸಲಾಗಿದ್ದು, ವಂಚನೆಯ ಸಂದೇಶವು ಈ ರೀತಿಯಾಗಿ ಓದುತ್ತದೆ. ’ ನಿಮ್ಮ ಚಲನ್ ಸಂಖ್ಯೆ.. ವಾಹನ ಸಂಖ್ಯೆಗಾಗಿ …. ಚಲನ್ ಮೊತ್ತವನ್ನು ರೂ.500 ರಂತೆ ಹೊಂದಿದ್ದು, ಇ-ಚಲನ್ ಆನ್‌ಲೈನ್ ಪಾವತಿಗಾಗಿ https://echallan.ksp.gov.in ಫ್ರೋಮ್ ಕರ್ನಾಟಕ ಸ್ಟೇಟ್ ಪೊಲೀಸ್ ಭೇಟಿ ನೀಡಿ ಹಣ ಪಾವತಿ ಮಾಡುವಂತೆ ತಿಳಿಸಲಾಗಿದೆ. ಒಮ್ಮೆ ನೀವು ಇ -ಚಲನ್ ಪಾವತಿಸಲು ಈ ಪಾವತಿ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಟ್ರಾಫಿಕ್ ಇ -ಚಲನ್ ಅನ್ನು ಹೊರಹಾಕುವ ಪ್ರಯತ್ನದಲ್ಲಿ ನೀವು ಪೊಲೀಸರ ಬದಲಿಗೆ ಸೈಬರ್ ಅಪರಾಧಿಗಳಿಗೆ ಪಾವತಿಸುತ್ತೀರಿ. ಇದನ್ನೇ ಉಪ್ಪಿನಂಗಡಿಯ ವ್ಯಕ್ತಿಯೂ ಮಾಡಿದ್ದಾರೆ. ತಾನು ಲಿಂಕ್ ಒತ್ತಿದ ತಕ್ಷಣ ರೂ.12ಸಾವಿರ ಕಳೆದು ಕೊಂಡಿದ್ದಾರೆ. ಇದೀಗ ಆತ ಪೊಲೀಸರ ಮೊರೆ ಹೋಗಿದ್ದು. ಪೊಲೀಸರು ಈ ಕುರಿತು ಸಾರ್ವಜನಿಕರು ಜಾಗೃತರಾಗಿ ನಕಲಿ ವೆಬ್‌ಸೈಟ್‌ನ ಕುರಿತು ಅರಿವು ಮಾಡಿಕೊಳ್ಳುವುದು ಅಗತ್ಯವಿದೆ ಎಂದಿದ್ದಾರೆ.

Dear RAJESH This is Notice U/s 133 IMV ACT against reg no: KA21Y7260 for the traffic violation Triple Riding  on 2024-08-23 16:13:56.469 at Bannur Cavery Circle towords santemella  pls pay the fine Rs500 to avoid legal action. Pay online via: https://echallan.ksp.gov.in From Karnataka State Police ಎಂದು ಬಂದ ಸಂದೇಶವಾಗಿತ್ತು.

LEAVE A REPLY

Please enter your comment!
Please enter your name here