





ಪ್ರಮೋದ್ ಶೆಟ್ಟಿ, ದಿಗಂತ್ , ಪುತ್ತೂರಿನ ವಿಜಯಹರಿ ರೈ ಅಭಿನಯ


ಪುತ್ತೂರು: ಭರತ್ ರಾಜ್ ನಿರ್ದೇಶನ ಹಾಗೂ ರಿಷಬ್ ಶೆಟ್ಟಿ ನಿರ್ಮಾಣದ, ಪ್ರಮೋದ್ ಶೆಟ್ಟಿ, ದಿಗಂತ್, ತೇಜು ಬೆಳವಾಡಿ ಹಾಗೂ ಪುತ್ತೂರಿನ ವಿಜಯಹರಿ ರೈ ಬಳ್ಳಮಜಲು ರವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಲಾಫಿಂಗ್ ಬುದ್ಧ ಕನ್ನಡ ಚಲನಚಿತ್ರ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಆ. 30 ರಿಂದ ಪ್ರತಿದಿನ ಮಧ್ಯಾಹ್ನ 1.45 ಹಾಗೂ ರಾತ್ರಿ 7.30 ಕ್ಕೆ ಪ್ರದರ್ಶನ ಕಾಣಲಿದೆ.






ವಿಜಯಹರಿ ರೈಯವರು ಲಾಫಿಂಗ್ ಬುದ್ಧ ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಚಿತ್ರದ ಆರಂಭದಿಂದ ಕೊನೆಯ ತನಕ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ವಿಜಯಹರಿ ರೈಯವರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ತುಳು ರಂಗಭೂಮಿಯ ಪುತ್ತೂರಿನ ಪ್ರತಿಭೆಗೆ ನಾವೆಲ್ಲ ಪ್ರೋತ್ಸಾಹ ನೀಡೋಣ.








