ಆ.31: ಉಪ ತಹಶೀಲ್ದಾರ್ ರಾಮಣ್ಣ ನಾಯ್ಕ ನಿವೃತ್ತಿ

0

ಪುತ್ತೂರು:ಕಂದಾಯ ಇಲಾಖೆಯ ಪುತ್ತೂರು ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿದ್ದ ಬಿ. ರಾಮಣ್ಣ ನಾಯ್ಕರವರು ಆ.31ರಂದು ನಿವೃತ್ತಿ ಹೊಂದಲಿದ್ದಾರೆ.


ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ದಿ. ಸೇಷಪ್ಪ ನಾಯ್ಕ ಮತ್ತು ಪಾರ್ವತಿ ದಂಪತಿ ಪುತ್ರನಾಗಿರುವ ರಾಮಣ್ಣ ನಾಯ್ಕರವರು 1989ರಲ್ಲಿ ಕಂದಾಯ ಇಲಾಖೆಗೆ ಗ್ರಾಮಕರಣಿಕರಾಗಿ ನೇಮಕಗೊಂಡು ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮ ಕರಣಿಕತಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ನಂತರ ಚಾಮರಾಜನಗರದ ಸಂತೆಮಾರಳ್ಳಿಗೆ ವರ್ಗಾವಣೆಗೊಂಡಿದ್ದರು. 2001ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಪದೋನ್ನತಿ ಪಡೆದು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು. 2011 ಉಪ ತಹಶೀಲ್ದಾರ್ ಆಗಿ ಭಡ್ತಿ ಪಡೆದು ಸುಳ್ಯ, 2016ರಲ್ಲಿ ಬೆಳ್ಳಂಗಡಿ, 2017ರಲ್ಲಿ ಕೊಲ್ಲೆಗಾಲ ಸಹಾಯಕ ಆಯುಕ್ತರ ಕಚೇರಿಯಲ್ಲಿ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ 2019ರಲ್ಲಿ ಉಪ ತಹಶೀಲ್ದಾರ್ ಆಗಿ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಕಂದಾಯ ಇಲಾಖೆಯಲ್ಲಿ ಒಟ್ಟು 35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಪತ್ನಿ ಶಶಿಕಲಾ, ತಾಯಿ ಪಾರ್ವತಿ ಹಾಗೂ ಸಹೋದರರೊಂದಿಗೆ ಈಶ್ವರಮಂಗಲದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here