ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನ

0

puttur: ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮ್ಯಾರಥಾನ್ ಏರ್ಪಡಿಸಲಾಗಿತ್ತು. ಭಾಗವಹಿಸಿದ ಸರಿ ಸುಮಾರು 62 ವಿದ್ಯಾರ್ಥಿಗಳಲ್ಲಿ ಹುಡುಗಿಯರ ವಿಭಾಗದಲ್ಲಿ ನಿತ್ಯಶ್ರೀ ದ್ವಿತೀಯ ಬಿ.ಸಿ.ಎ ಪ್ರಥಮ, ಕಾವ್ಯ ದ್ವಿತೀಯ ಬಿ.ಸಿ.ಎ ದ್ವಿತೀಯ ಹಾಗೂ ವಿನುತಾ ದ್ವಿತೀಯ ಬಿ.ಎ ತೃತೀಯ, ಹುಡುಗರ ವಿಭಾಗದಲ್ಲಿ ಚಿಂತನ್ ದ್ವಿತೀಯ ಬಿ.ಎ ಪ್ರಥಮ, ಹರ್ಶನ್ ದ್ವಿತೀಯ ಬಿ.ಸಿ.ಎ ದ್ವಿತೀಯ, ಮಹಮ್ಮದ್ ಆಶಿರ್ ಪ್ರಥಮ ಬಿ.ಕಾಂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.


ಮ್ಯಾರಥಾನ್‌ನನ್ನು ಉದ್ಘಾಟಿಸಿ ಚಾಲನೆ ಕೊಟ್ಟವರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿ, ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. ಹಾಗೂ ಉಪನ್ಯಾಸಕವೃಂದದವರು ಉಪಸ್ಥಿತರಿದ್ದರು. ಈ ಓಟವು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಭರತ್ ಎಮ್.ಎಲ್ ಅವರ ಮಾರ್ಗದರ್ಶನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here