ಪುತ್ತೂರು:ಕಳೆದ 29 ತಿಂಗಳುಗಳಿಂದ ಉಚಿತ ವೈದ್ಯಕೀಯ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ದೇವಸ್ಥಾನದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 30ನೇ ಉಚಿತ ವೈದ್ಯಕೀಯ ಶಿಬಿರವು ಸೆ.1ರಂದು ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರೊಂದಿಗೆ ನಡೆಯುವ ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಎಲುಬು ಮತ್ತು ಕೀಲು ತಪಾಸಣೆ, ಇ.ಓ.ಖಿ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಔಷಧಿಗಳು ದೊರೆಯಲಿದೆ. ವೈದ್ಯಕೀಯ ತಜ್ಷ ವೈದ್ಯರಾದ ಡಾ.ಸುರೇಶ್ ಕೆ ಪುತ್ತೂರಾಯ, ಎಲುಬು ಮತ್ತು ಕೀಲು ತಜ್ಞ ವೈದ್ಯ ಡಾ. ಸಚಿನ್ ಶಂಕರ್ ಹಾರಕೆರೆ, ಶ್ವಾಸಕೋಶ ತಜ್ಞ ವೈದ್ಯ ಡಾ. ಪ್ರೀತಿರಾಜ್ ಬಲ್ಲಾಳ್, ಇಎನ್ಟಿ ತಜ್ಷ ವೈದ್ಯೆ ಡಾ. ಅರ್ಚನಾ, ಆಯುರ್ವೇದ ತಜ್ಞ ವೈದ್ಯರಾದ ಡಾ. ಸಾಯಿ ಪ್ರಕಾಶ್, ಡಾ. ರವಿ ನಾರಾಯಣ, ಡಾ. ಶ್ರಾವ್ಯ, ಡಾ. ಶ್ರೀಜಾ, ಡಾ. ದೀಪ್ತಿ, ಡಾ. ಶ್ರೀಜಾ ರೈಯವರು ಆಗಮಿಸಿ ಶಿಬಿರದಲ್ಲಿ ತಪಾಸಣೆ ನಡೆಸಲಿದ್ದಾರೆ. ಭಕ್ತಾದಿಗಳು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆರೋಗ್ಯ ರಕ್ಷಾ ಸಮಿತಿ ಪ್ರಕಟಣೆ ತಿಳಿಸಿದೆ.