ಪುತ್ತೂರು:ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲದ ರಚನೆ ಹಾಗೂ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ವಿದ್ಯಾರ್ಥಿ ನಾಯಕರು ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಪ್ರಾಂಶುಪಾಲ ರಂಝೀ ಮುಹಮ್ಮದ್ ಹಾಗೂ ಅರೇಬಿಕ್ ವಿಭಾಗದ ಮುಖ್ಯಸ್ಥ ರಶೀದ್ ಸಖಾಫಿ ನಾಯಕರಿಗೆ ಶುಭ ಹಾರೈಸಿದರು. ನಂತರ ಶಾಲಾ ವಿದ್ಯಾರ್ಥಿ ನಾಯಕರಿಗೆ, ಶಾಲಾ ವಿದ್ಯಾರ್ಥಿ ತಂಡದ ನಾಯಕರಿಗೆ ಮತ್ತು ಶಾಲಾ ತರಗತಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ನೀಡಿ ಗೌರವಿಸಲಾಯಿತು. ನಂತರ ಅಕಾಡೆಮಿಕ್ ಕೋಆರ್ಡಿನೇಟರ್ ಶ್ರೀಮತಿ ಅರ್ಪಿತ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ಶಾಲಾ ಚುನಾವಣಾ ಆಯುಕ್ತರಾದ ಶ್ರೀಮತಿ ಪವಿತ್ರ ಭಾಷಣ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ನಾಯಕನಾಗಿ ಮುಹಮ್ಮದ್ ಸುಹಾನ್, ಶಾಲಾ ನಾಯಕಿಯಾಗಿ ರಿಫಾ ಫಾತಿಮಾ, ಶಾಲಾ ಉಪನಾಯಕರಾಗಿ ನಿಶಾನುಲ್ ಹನೀಫ್, ಉಪನಾಯಕಿಯಾಗಿ ಶಝಾ ಫಾತಿಮಾ, ಶಾಲಾ ಆರೋಗ್ಯ ಮತ್ತು ಶಿಸ್ತಿನ ನಾಯಕನಾಗಿ ಅಬೂಬಕ್ಕರ್ ಶಾರಿಕ್ ಮತ್ತು ನಾಯಕಿಯಾಗಿ ಫಾತಿಮತ್ ಶಹನಾಝ್, ಸಾಂಸ್ಕೃತಿಕ ನಾಯಕನಾಗಿ ಮುಹಮ್ಮದ್ ಅಫ್ರಾಝ್ ಮತ್ತು ನಾಯಕಿಯಾಗಿ ಶಫ್ನಾಝ್, ಶಾಲಾ ಕ್ರೀಡಾ ನಾಯಕನಾಗಿ ಇಹ್ಸಾನ್ ಬಿನ್ ಇಬ್ರಾಹಿಂ ಹಾಗೂ ನಾಯಕಿಯಾಗಿ ನಾಝಿಮ ಆಯ್ಕೆಯಾದರು. ವಿದ್ಯಾರ್ಥಿ ತಂಡಗಳಾದ ಎಮರಾಲ್ಡ್ ತಂಡದ ನಾಯಕಿಯಾಗಿ ರೀಮಾ ಶಮ್ರೀನ್ ಉಪ ನಾಯಕನಾಗಿ ಮುಹಮ್ಮದ್ ಶಯಾನ್, ನೆಕರ್ ತಂಡದ ನಾಯಕನಾಗಿ ಅಜೀಂ ಅಹ್ಮದ್ ಉಪ ನಾಯಕಿಯಾಗಿ ಫಾತಿಮತ್ ಶಮ್ಲಾ, ಎಲೆಕ್ಟ್ರಂ ತಂಡದ ನಾಯಕನಾಗಿ ಮುಹಮ್ಮದ್ ಬದ್ರುಲ್ ಕಮಲ್ ಉಪ ನಾಯಕಿಯಾಗಿ ಅನಂ ಫಾತಿಮಾ, ಡೈಮಂಡ್ ತಂಡದ ನಾಯಕಿಯಾಗಿ ಆಯಿಷಾ ರಿಫಾ ಉಪನಾಯಕನಾಗಿ ಮುಹಮ್ಮದ್ ಮುನವ್ವರ್ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗದ ಎಲ್ಲಾ ಸದಸ್ಯರು ವಿದ್ಯಾರ್ಥಿಗಳು ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಇನಾ ಫಾತಿಮಾ ಸ್ವಾಗತಿಸಿದರು. ಫಾತಿಮಾ ಅನೀಸ ವಂದಿಸಿದರು. ವಿದ್ಯಾರ್ಥಿನಿಯರಾದ ಅಮ್ನ ಫಾತಿಮಾ ಹಾಗೂ ಫಾತಿಮಾ ರಿಹಾ ಕಾರ್ಯಕ್ರಮ ನಿರೂಪಿಸಿದರು.