ನೆಲ್ಯಾಡಿ University Collegeನಲ್ಲಿ ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ’ ತರಬೇತಿ ಕಾರ್ಯಕ್ರಮ

0

ನೆಲ್ಯಾಡಿ: ಇಲ್ಲಿರುವ ವಿಶ್ವವಿದ್ಯಾಲಯ ಕಾಲೇಜ್‌ (University College)ನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಸಂಸ್ಥೆಯ ಕೌನ್ಸಿಲರ್ ಕಂ ಟ್ರೈನರ್, ಮಂಜೂಷ ಇವರಿಂದ ವಿದ್ಯಾರ್ಥಿಗಳಿಗೆ ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನʼ ತರಬೇತು ಕಾರ್ಯಕ್ರಮ ಆ.29ರಂದು ನಡೆಯಿತು. ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ನೋಂದಣಿ ಮಾಡಿಸುವುದರ ಮೂಲಕ ಉದ್ಯೋಗ ಕಾರ್ಡ್ ನೀಡಿ ಅದರ ಉಪಯುಕ್ತತೆ ಹಾಗೂ ಬಳಸುವಿಕೆಯ ಕುರಿತಂತೆ ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಒದಗಿಸುವುದರೊಂದಿಗೆ, ಹೇಗೆ ಸಂದರ್ಶನ ಎದುರಿಸುವುದು ಎಂಬುದರ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡುವುದರೊಂದಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಸೀತಾರಾಮ ಪಿ ಮುಖ್ಯಸ್ಥರು, ಇತಿಹಾಸ ವಿಭಾಗ ಸ್ವಾಗತಿಸಿದರು. ಪಾವನ ರೈ ಉಪನ್ಯಾಸಕಿ, ವಾಣಿಜ್ಯ ವಿಭಾಗ ಇವರು ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here