ಪುತ್ತೂರಿನ‌ ಸರ್ವ ಬಂಟರ ಸಂಪೂರ್ಣ ಸಹಕಾರದಿಂದ ಬಂಟೆರೆ ಸೇರಿಗೆ ಯಶಸ್ವಿ – ಕಾವು ಹೇಮನಾಥ ಶೆಟ್ಟಿ

0

ಪುತ್ತೂರು : ಆಟಿಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮದಲ್ಲಿ ವಿಶೇಷ ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ 14 ಸಾಧಕರಿಗೆ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಕಾರ್ಯಕ್ರಮ ಅಭೂತಪೂರ್ವವಾಗಿ ಯಶಸ್ವಿಯಾಯಿತು. ತಾಲೂಕಿನ ಎಲ್ಲಾ ಬಂಟರ ಸಂಪೂರ್ಣ ಸಹಕಾರದಿಂದ ಇದು ಸಾಧ್ಯವಾಯಿತು. ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇದಕ್ಕಾಗಿ ಎಲ್ಲರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಬಂಟರ ಸಂಘದ ಅಧ್ಯಕ್ಷರು ಕಾವು ಹೇಮನಾಥ್ ಶೆಟ್ಟಿ ಯವರು ಹೇಳಿದರು. ಅವರು ಆ.28ರಂದು ಬಂಟರ ಸಂಘದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿ, ‘ಬಂಟ ಜನಗಣತಿ ಕೆಲಸ ನಡೆಯುತ್ತಿದೆ. ಅದನ್ನು ಆದಷ್ಟು ಬೇಗ ಮುಗಿಸಬೇಕು ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು.. ಕಷ್ಟದಲ್ಲಿರುವ ಬಂಟರ ಕೈ ಹಿಡಿದು ಮೇಲೆತ್ತುವ ಪ್ರಯತ್ನ ಮಾಡೋಣವೆಂದರು’.

ಮಾತೃ ಸಂಘದ ತಾಲೂಕು ಸಂಚಾಲಕರು ಕುಂಬ್ರ ದುರ್ಗಾಪ್ರಸಾದ್ ರೈ, ಬಂಟರ‌ ಸಂಘದ ಮಾಜಿ‌ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸಂದರ್ಭೋಚಿತವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ ವರದಿ ವಾಚಿಸಿದರು. ಕೋಶಾಧಿಕಾರಿ ಸಂತೋಷ್ ಕುಮಾರ್ ಸಾಜ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್ಯಕ್ರಮದ ಲೆಕ್ಕವನ್ನು ಸಭೆಗೆ ಮಂಡಿಸಿ ಅನುಮೋದನೆ ಪಡೆದರು. ಮಹಿಳಾ ಬಂಟರ ವಿಭಾಗ ಅಧ್ಯಕ್ಷೆ ಗೀತಾ ಮೋಹನ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟರ ಸಂಘದ ಉಪಾಧ್ಯಕ್ಷರುಗಳಾದ ರಮೇಶ್ ರೈ ಡಿಂಬ್ರಿ, ಜಯಾನಂದ ಬಂಟ್ರಿಯಾಲ್, ಸುಭಾಷ್ ಶೆಟ್ಟಿ ಆರುವಾರು, ಜೊತೆಕಾರ್ಯದರ್ಶಿಗಳಾದ ಹರಿಣಾಕ್ಷಿ ಜೆ ಶೆಟ್ಟಿ, ಸ್ವರ್ಣಲತಾ ಜೆ. ರೈ, ಪುಲಸ್ಯಾ ರೈ, ನಿರ್ದೇಶಕರಾದ, ದಂಬೆಕ್ಕಾನ ಸದಾಶಿವ ರೈ, ಶಶಿಕಿರಣ್ ರೈ ನೂಜಿಬೈಲ್, ರವಿಪ್ರಸಾದ್ ಶೆಟ್ಟಿ ಬನ್ನೂರು, ರಮೇಶ್ ಆಳ್ವ ಅಲೆಪ್ಪಾಡಿ, ಪ್ರಕಾಶ್ ರೈ ಸಾರಕರೆ, ಸತೀಶ್ ರೈ ಕಟ್ಟಾವು, ಸುಧೀರ್ ಶೆಟ್ಟಿ ತೆಂಕಿಲ, ಮಾತೃ ಸಂಘದ ನಿರ್ದೇಶಕರಾದ ಪುರಂದರ ರೈ ಮಿತ್ರಂಪಾಡಿ,ವಾಣಿ ಎಸ್ ಶೆಟ್ಟಿ ನೆಲ್ಯಾಡಿ, ಮಹಿಳಾ ಬಂಟರ ವಿಭಾಗದ ಕಾರ್ಯದರ್ಶಿ ಕುಸುಮ ಪಿ ಶೆಟ್ಟಿ, ಕೋಶಾಧಿಕಾರಿ ಅರುಣಾ ದಿನಕರ್ ರೈ, ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ, ಜೊತೆ ಕಾರ್ಯದರ್ಶಿ ಶುಭ ರೈ, ರವಿಚಂದ್ರ ರೈ,ವಿಶೇಷ ಆಹ್ವಾನಿತರು ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಧಾರ್ಮಿಕ ಸಂಚಾಲಕ ಮನ್ಮಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ನಯನಾ ರೈ ನೆಲ್ಲಿಕಟ್ಟೆ, ವತ್ಸಲಾ ಪದ್ಮನಾಭ ಶೆಟ್ಟಿ, ಧನ್ಯಾ ರೈ, ಶಿಲ್ಪಾ ಹರಿಪ್ರಸಾದ್ ರೈ, ಸೌಮ್ಯ ರೈ, ಮಲ್ಲಿಕಾ ಜೆ ರೈ, ಶಕುಂತಲಾ ಶೆಟ್ಟಿ, ಲಾವಣ್ಯ ನಾಯ್ಕ್, ಜಯಶ್ರೀ ಶೆಟ್ಟಿ, ಸುರೇಖಾ ರೈ, ಪ್ರತಿಮಾ ಯು ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here