ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಸಹಾಯಕ ಭದ್ರತಾ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಧನಂಜಯ ನಾಡಾಜೆ ಯವರಿಗೆ ಬೀಳ್ಕೊಡುಗೆ ಸಮಾರಂಭ ಆ.31 ರಂದು ಪುತ್ತೂರು ಮುಕ್ರಂಪಾಡಿಯಲ್ಲಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಛೇರಿಯಲ್ಲಿ ನಡೆಯಿತು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ ಹೊಸ ಪೂಜಾರಿ ಮಾತಾಡಿ ಕಳೆದ 39 ವರ್ಷಗಳಿಂದ ಸೇವೆಸಲ್ಲಿಸಿ ಕಷ್ಟ ಮತ್ತು ಜವಾಬ್ದಾರಿಯ ಭದ್ರತಾ ಹುದ್ದೆಯನ್ನು ಅತೀ ಇಷ್ಟ ಪಟ್ಟು ಯಶಸ್ವಿಯಾಗಿ ನಿರ್ವಹಿಸಿದ್ದೀರಿ ನಿಮ್ಮ ಪ್ರಾಮಾಣಿಕ ಸೇವೆಗೆ ನಾವೆಲ್ಲ ಅಭಾರಿಯಾಗಿದ್ದೇವೆ. ನಿಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದರು.
ಭದ್ರತಾ ಮತ್ತು ಜಾಗೃತಾಧಿಕಾರಿ ಶರತ್ ಎಂ.ಎಲ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಸುಧೀರ್ಘ 39 ವರ್ಷಗಳ ಸೇವೆಯನ್ನು ಮಾಡಿದ್ದೀರಿ ಅದರಲ್ಲೂ ಭದ್ರತಾ ಶಾಖೆಯ ಜವಾಬ್ದಾರಿ ಸುಲಭದ್ದಲ್ಲ ಎಲ್ಲರ ವಿರೋಧ ಕಟ್ಟಿಕೊಂಡು, ಎಷ್ಟೇ ಸವಾಲುಗಳು ಬಂದರೂ ಸಹ ಅಷ್ಟೇ ಕರ್ತವ್ಯ ನಿಷ್ಠೆಯಿಂದ ಸೇವೆಸಲ್ಲಿಸಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದು ಸವಾಲಿನ ಕೆಲಸ ಇದನ್ನು ಅಚ್ಚುಕಟ್ಟಾಗಿ ಮಾಡಿದ್ದೀರಿ ಎಂದರು.
ವಿಭಾಗೀಯ ಸಂಚಲನಾಧಿಕಾರಿ ಜೈ ಶಾಂತ್ ಮತ್ತು ಭದ್ರತಾ ಅಧೀಕ್ಷಕ ಮಧುಸೂಧನ್ ನಾಯ್ಕ್, ಪುತ್ತೂರು ಘಟಕ ದ.ಕ.ರಾ.ಸಾ. ಹವಾಲ್ದಾರ್ ನಾರಾಯಣ ಪೂಜಾರಿ ಸಂದರ್ಭೊಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಧರ್ಮಸ್ಥಳ ಘಟಕದ ಕ.ರಾ.ಸಾ ಹವಲ್ದಾರ್ ನಾಗರಾಜ ಕಾಡಣವರ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಕಾನೂನು ಅಧಿಕಾರಿ ಸೌಮ್ಯ, ಸಹಾಯಕ ಆಡಳಿತಾಧಿಕಾರಿ ರೇವತಿ ಬಂಗೇರ, ಸಹಾಯಕ ಲೆಕ್ಕಾಧಿಕಾರಿ ಆಶಾಲತ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಸಿಕ್ಕಿದೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಂಜಯ ನಾಡಾಜೆ ಯವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಸಿಕ್ಕಿದೆ.ನನ್ನ ಸೇವಾವಧಿಯಲ್ಲಿ ಸಹಕಾರ ನೀಡಿದ ಅಧಿಕಾರಿ ವರ್ಗದವರಿಗೆ, ಸಹೋದ್ಯೋಗಿಗಳಿಗೆ, ಮನೆಯವರಿಗೆ, ಬಂಧು ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದರು.
ಗೌರವಾರ್ಪಣೆ:
ಶಾಲು ಹಾಕಿ,ಪೇಟ ತೊಡಿಸಿ,ಫಲ ಪುಷ್ಪ ನೀಡಿ, ಸ್ಮರಣಿಕೆ ಕೊಟ್ಟು ಧನಂಜಯ ನಾಡಾಜೆಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.