ಪ್ರಾಥಮಿಕ ಶಾಲಾ ವಿಭಾಗದ ಮಾಣಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ-ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

0

ವಿಟ್ಲ:  ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಸ.ಹಿ.ಪ್ರಾ.ಶಾಲೆ ಬಾಳ್ತಿಲ ಇದರ ಸಹಯೋಗದಲ್ಲಿ ಮಾಣಿ ಕ್ಲಸ್ಟರ್ ಮಟ್ಟದ, ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡ್ಯಾರನ್ ಲಸ್ರಾದೊ(3ನೇ ತರಗತಿ) ಛದ್ಮವೇಷದಲ್ಲಿ  ಬಿ ಕೆ ಜೋಷಿಕಾ ( 3ನೇ ತರಗತಿ)ದೇಶ ಭಕ್ತಿಗೀತೆಯಲ್ಲಿ,  ವಿನ್ಯ ಡಿ ಶೆಟ್ಟಿ(4ನೇ ತರಗತಿ)ಭಕ್ತಿಗೀತೆ ಹಾಗೂ ಅಭಿನಯಗೀತೆಯಲ್ಲಿ,  ದಿಶಾ(4ನೇ ತರಗತಿ) ಇಂಗ್ಲಿಷ್ ಕಂಠಪಾಠ ಹಾಗೂ ಕಥೆ ಹೇಳುವುದರಲ್ಲಿ, ವೈಷ್ಣವಿ ಎಸ್ ತುಂಗ(6ನೇ ತರಗತಿ)ಕವನ ವಾಚನ ಹಾಗೂ ಧಾರ್ಮಿಕ ಪಠಣ ಸಂಸ್ಕೃತದಲ್ಲಿ,  ಅಕ್ಷರ ಜೆ ಶೆಟ್ಟಿ(7ನೇ ತರಗತಿ)ಇಂಗ್ಲಿಷ್ ಕಂಠಪಾಠ ಹಾಗೂ ಚಿತ್ರಕಲೆಯಲ್ಲಿ,  ತನುಶ್ರೀ ಎಸ್ ( 7ನೇ ತರಗತಿ)ಕನ್ನಡ ಕಂಠಪಾಠದಲ್ಲಿ, ಹಸ್ತ ಜಿ (7ನೇ ತರಗತಿ) ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

 ನೈನಿಕ ಯಂ ವೈ (3ನೇ ತರಗತಿ)ಕ್ಲೇ ಮಾಡೆಲಿಂಗ್ ನಲ್ಲಿ,  ನತಾಶ ಜೆ (6ನೇ ತರಗತಿ)ಕಥೆ ಹೇಳುವುದರಲ್ಲಿ,  ಪ್ರತೀತ ಡಿ(6ನೇ ತರಗತಿ)ಕ್ಲೇ ಮಾಡೆಲಿಂಗ್ ನಲ್ಲಿ,  ಫಾತಿಮಾ ಉಜ್ಮಾ (7ನೇ ತರಗತಿ) ಹಿಂದಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

 ಐಶಾನಿ ಕೆ ಹೆಚ್ ( 4ನೇ ತರಗತಿ)ಚಿತ್ರಕಲೆಯಲ್ಲಿ, ಪಾವನ ಏ ಬಿ (4ನೇ ತರಗತಿ)ಕನ್ನಡ ಕಂಠಪಾಠದಲ್ಲಿ,  ಕೆ ನಿಧ ಫಾತಿಮಾ(7ನೇ ತರಗತಿ)ಧಾರ್ಮಿಕ ಪಠಣ ಅರೇಬಿಕ್ ನಲ್ಲಿ, ಆದ್ಯ ಎಸ್ ( 5ನೇ ತರಗತಿ) ದೇಶ ಭಕ್ತಿಗೀತೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಥಮ ಸ್ಥಾನವನ್ನು ಪಡೆದ 12 ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ  ಆಯ್ಕೆಗೊಂಡಿರುತ್ತಾರೆ.

LEAVE A REPLY

Please enter your comment!
Please enter your name here