ವಿಟ್ಲ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ವಿದ್ಯಾಭಿವರ್ಧಕ ಸಂಘ (ರಿ) ಮಾಣಿ, ಲಯನ್ಸ್ ಕ್ಲಬ್ ಮಾಣಿ, ಕರ್ನಾಟಕ ಪ್ರೌಢಶಾಲೆ ಮಾಣಿ, ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವುಗಳ ಸಹಭಾಗಿತ್ವದಲ್ಲಿ ಕಲ್ಲಡ್ಕ ವಲಯ ಮಟ್ಟದ ಪ್ರೌಢ ಶಾಲಾ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟ ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ನಡೆಯಿತು.
ಬಾಲವಿಕಾಸ ವಿದ್ಯಾಸಂಸ್ಥೆಯ ಸಂಚಾಲಕರಾದ ಜೆ. ಪ್ರಹ್ಲಾದ್ ಶೆಟ್ಟಿ ದೀಪ ಉದ್ಘಾಟಿಸಿ ಶುಭ ಹಾರೈಸಿದರು. ನಿವೃತ್ತ ದೈಹಿಕ ಶಿಕ್ಷಕರಾದ ಗಂಗಾಧರ್ ರೈ ತೆಂಗಿನಕಾಯಿ ಹೊಡೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಾಮಕಿಶನ್ ರೈ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಭಿವರ್ಧಕ ಸಂಘ (ರಿ) ಮಾಣಿ ಇದರ ಅಧ್ಯಕ್ಷರಾದ ರೊ.ಕಿರಣ್ ಹೆಗ್ಡೆ, ಉಪಾಧ್ಯಕ್ಷರಾದ ಹಬೀಬ್, ಕಾರ್ಯದರ್ಶಿ, ಶಾಲಾ ಸಂಚಾಲಕ ಇಬ್ರಾಹಿಂ, ಗ್ರಾ. ಪಂ. ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ಮತ್ತು ಬಾಲಕೃಷ್ಣ ಆಳ್ವ ಕೊಡಾಜೆ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಹರೀಶ್, ಕ್ಲಬ್ ಸದಸ್ಯರಾದ ಕೂಸಪ್ಪ ಪೂಜಾರಿ, ರತ್ನಾಕರ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರಾದ ಬಿ.ಕೆ. ಭಂಡಾರಿ, ಸ.ಪ್ರೌಶಾಲೆ ಶಂಬೂರಿನ ಮುಖ್ಯ ಶಿಕ್ಷಕ ಕಮಲಾಕ್ಷ, ಸ.ಪ್ರೌ.ಶಾಲೆ ಕಡೇಶಿವಾಲಯದ ಮುಖ್ಯ ಶಿಕ್ಷಕ ಲೋಕಾನಂದ ಎಸ್, ಕೆದಿಲ ಸಿ.ಆರ್.ಪಿ. ಸುಧಾಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಬಾಲಕರ ವಿಭಾಗದಲ್ಲಿ ಬಾಲವಿಕಾಸ ಪ್ರಥಮ, ಜೆಮ್ ಪಬ್ಲಿಕ್ ಕಲ್ಲಡ್ಕ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸ. ಪ್ರೌ. ಶಾಲೆ ಶಂಬೂರು ಪ್ರಥಮ, ಸ. ಪ್ರೌ. ಶಾಲೆ ಕಡೇಶಿವಾಲಯ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದೆ.
ಸಮರೋಪ ಸಮಾರಂಭದಲ್ಲಿ ಗ್ರಾ. ಪಂ. ಉಪಾಧ್ಯಕ್ಷೆ ಸುಜಾತ ಹಾಗೂ ಮಾಣಿ – ಬಾಳ್ತಿಲ ಸಿ.ಆರ್.ಪಿ. ಸತೀಶ್ ರಾವ್ ವಿಜೇತರಿಗೆ ಬಹುಮಾನ ವಿತರಿಸಿದರು.
ಶಾಲಾ ಮುಖ್ಯ ಶಿಕ್ಷಕರಾದ ಎಸ್. ಚೆನ್ನಪ್ಪ ಗೌಡ ಮತ್ತು ಸಹಶಿಕ್ಷಕಿ ಸವಿತಾ ಸ್ವಾಗತಿಸಿ, ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ಸಾರಿಕಾ ಮತ್ತು ಸಹಶಿಕ್ಷಕಿ ಜೀವಿತ ವಂದಿಸಿ ಹಿಂದಿ ಶಿಕ್ಷಕರಾದ ಜಯರಾಮ್ ಕಾಂಚನ ಮತ್ತು ಹಿರಿಯ ಶಿಕ್ಷಕಿ ಶ್ಯಾಮಲಾ ಕೆ. ನಿರೂಪಿಸಿದರು.