ಪುಣಚ: ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘದ ಮಹಾಸಭೆ -ರೂ.271ಕೋಟಿ ವ್ಯವಹಾರ, ರೂ. 2.49ಕೋಟಿ ಲಾಭ, ಶೇ.10 ಡಿವಿಡೆಂಡ್

0

ಪುಣಚ:ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.271,35,11,156.04 ವ್ಯವಹಾರ ನಡೆಸಿ ರೂ. 2,49,27,343.24 ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10ಡಿವಿಡೆಂಡ್ ವಿತರಿಸಲಾಗುವುದು. ಅತೀ ಹೆಚ್ಚು ನಿವ್ವಳ ಲಾಭ ಗಳಿಕೆಯಲ್ಲಿ ಸಂಘವು ತಾಲೂಕಿನಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಸಂಘದ ಅಧ್ಯಕ್ಷ ಜನಾರ್ಧನ ಭಟ್ ಅಮೈ ವಾರ್ಷಿಕ ಮಹಾಸಭೆಯಲ್ಲಿ ಹೇಳಿದರು.

ಸಭೆಯು ಸೆ.1ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವರದಿ ವರ್ಷಾಂತ್ಯಕ್ಕೆ ಸಂಘವು 5,639 ಸದಸ್ಯರಿಂದ ರೂ.5,60,96,640 ಪಾಲು ಬಂಡವಾಳ, ರೂ.55,14,81,515.28 ವಿವಿಧ ರೂಪದ ಠೇವಣಾತಿಗಳನ್ನು ಹೊಂದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಾಲಗಳಲ್ಲಿ ಯಾವುದೇ ವಾಯಿದೆ ದಾಟಿದ ಸಾಲಗಳಿಲ್ಲ. ರೂ.54,85,82,779 ಸದಸ್ಯರಿಗೆ ವಿವಿಧ ರೂಪದಲ್ಲಿ ನೀಡದ ಸಾಲಗಳಿವೆ. ಈ ಪೈಕಿ ರೂ.79,04,203 ಸುಸ್ತಿಯಾಗಿದೆ. ಸಾಲ ವಸೂಲಾತಿಯಲ್ಲಿ ಶೇ.98.11ರಷ್ಟು ಪ್ರಗತಿ ಸಾಧಿಸಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ. ಆಡಿಟ್ ವಗೀಕರಣದಲ್ಲಿ ಸಂಘವು `ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘದ ಸಾಧನಾ ಬೆಳವಣಿಗೆಗೆ ದ.ಕ. ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರೋತ್ಸಾಹ ಪ್ರಶಸ್ತಿ ಪಡೆಯುತ್ತಾ ಬಂದಿದೆ ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಪೂಜಾರಿ ವಾರ್ಷಿಕ ವರದಿ, ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು. ಸದಸ್ಯರಾದ ದೇವಿಪ್ರಸಾದ್ ಕೆ, ರಾಜೀವ ಭಂಡಾರಿ, ಶ್ರೀಧರ ಶೆಟ್ಟಿ, ಶ್ರೀಕೃಷ್ಣ ಪ್ರಸಾದ್ ಭಟ್, ಜಯಂತ ನಾಯಕ್, ರಾಮಚಂದ್ರ ಉಳಯ, ಉದಯಕುಮಾರ್, ರಾಮಕೃಷ್ಣ ಬಿ, ವಿಶ್ವನಾಥ ರೈ, ಪ್ರವೀಣ ಸರಳಾಯ ಮುಂತಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.


ಗೌರವ ಪುರಸ್ಕಾರ:
ಸಂಘದ ಹಿರಿಯ ಸದಸ್ಯರಾದ ಶಂಭು ಶಾಸ್ತ್ರಿ ಮಲೆತ್ತಡ್ಕ, ಅಬ್ದುಲ್ಲ ಹಾಜಿ ಕುಟ್ಟಿತ್ತಡ್ಕ, ಫಿಲೋಮಿನಾ ಡಿ ಸೋಜಾ ದೇವರಗುಂಡಿ, ವಿಷ್ಣು ಆಚಾರ್ಯ ಕೇಪು, ನಾರಾಯಣ ನಾಯ್ಕ ಪಟ್ಟುಮೂಲೆ ರವರಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.


ಸಹಾಯಧನದ ಚೆಕ್ ವಿತರಣೆ:
ಸಂಘದ ಸದಸ್ಯರಾದ ಪುರುಷೋತ್ತಮ ಪೂಜಾರಿ ಮೂಡಂಬೈಲು, ದಯಾನಂದ ಮೂಡಂಬೈಲು, ಗಂಗಯ್ಯ ಪೊಯ್ಯಮೂಲೆ, ಕಲಾವತಿ ಕೇಪು, ವೆಂಕಪ್ಪ ನಾಯ್ಕ ಬಡಕ್ಕೋಡಿ, ಗೀತಾ ಕುಕ್ಕೆಬೆಟ್ಟು ರವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಹಾಗೂ ಅಶಕ್ತ ವೃದ್ಧರಾದ ಬಾಬು ನಾಯ್ಕ ನಾರ್ಣಡ್ಕ, ಮೋನಪ್ಪ ಎರ್ಮೆತೊಟ್ಟಿರವರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.


ನಿರ್ದೇಶಕರಾದ ಬಾಲಚಂದ್ರ.ಕೆ, ತಾರಾನಾಥ ಆಳ್ವ, ಜಯರಾಮ ಕಾನ, ಚಂದಪ್ಪ ನಾಯ್ಕ, ವಿಘ್ನೇಶ್ವರ ಭಟ್, ಕಿಶೋರ್ ಕುಮಾರ್, ದಯಾನಂದ ಬಿ, ಪ್ರವೀಣ ಪ್ರಭು, ರಾಧಾಕೃಷ್ಣ, ಶ್ರೀಲತಾ, ಹರಿಣಾಕ್ಷಿ, ಸಂಘದ ಲೆಕ್ಕಾಧಿಕಾರಿ ಪದ್ಮನಾಭ ಗೌಡ, ಅಡ್ಯನಡ್ಕ ಶಾಖಾ ವ್ಯವಸ್ಥಾಪಕ ವೀರಪ್ಪ ಮೂಲ್ಯ, ತೋರಣಕಟ್ಟೆ ಶಾಖಾ ವ್ಯವಸ್ಥಾಪಕ ಶಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮೀಳಾ ಪ್ರಾರ್ಥಿಸಿದರು, ಸಂಘದ ಅಧ್ಯಕ್ಷ ಜನಾರ್ಧನ ಭಟ್ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ ವಂದಿಸಿದರು. ಸಿಬಂದಿಗಳು ಸಹಕರಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣ ಭಟ್ ಬಳಂತಿಮೊಗರುರವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಸಂಘಕ್ಕೆ ನೂತನ ಕಟ್ಟಡ:
ಸದಸ್ಯರ ಸಹಕಾರ, ಪ್ರೋತ್ಸಾಹದಿಂದ ಸಂಘವು ತ್ವರಿತ ಗತಿಯಲ್ಲಿ ಸೇವೆಯನ್ನು ನೀಡುತ್ತಾ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. ಸಂಘ ಅಭಿವೃದ್ಧಿಯಲ್ಲಿ ಸಹಕರಿಸಿದವರಿಗೆಲ್ಲರಿಗೂ ಕೃತಜ್ಞತೆಗಳು. ಸಂಘದ ಮೂಲಕ ಸದಸ್ಯರಿಗೆ ಚಿಕಿತ್ಸಾ ವೆಚ್ಚಕ್ಕಾಗಿ ಸಂಘದಿಂದ ಸಹಾಯಧನ, ಅಶಕ್ತ ನಿಧಿಯಿಂದ ಅಶಕ್ತ ವೃದ್ಧರಿಗೆ ಸಹಾಯಧನ ನೀಡುತ್ತಾ ಬಂದಿದೆ. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಜಾಗ ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ಕಟ್ಟಡ ನಿರ್ಮಾಣ ಹಾಗೂ ಸಂಘದ ಎಲ್ಲಾ ರೀತಿಯ ಬೆಳವಣಿಗೆಯಲ್ಲಿ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸುವಂತೆ ಅಧ್ಯಕ್ಷ ಜನಾರ್ದನ ಭಟ್ ಅಮೈ ವಿನಂತಿಸಿದರು.

LEAVE A REPLY

Please enter your comment!
Please enter your name here