ಸರ್ವೆ SGM ಪ್ರೌಢಶಾಲೆಯಲ್ಲಿ ವಿಭಿನ್ನ ಕಲಿಕಾ ವಾತಾವರಣ ಸೃಷ್ಟಿಸುವ ಉದ್ದೇಶ – ಸಹಭಾಗಿತ್ವಕ್ಕೆ ಮನವಿ

0

ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢಶಾಲೆಯಲ್ಲಿ (SGM High School) ಹಿರಿಯ ವಿದ್ಯಾರ್ಥಿ ಹಾಗೂ ಷಣ್ಮುಖ ಯುವಕ ಮಂಡಲದವರನ್ನು ಸೇರಿಸಿಕೊಂಡು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆ ನಡೆಯಿತು. ಮಕ್ಕಳಿಗೆ ಕಲಿಕಾ ಪೂರಕ ವಾತಾವರಣ ಸೃಷ್ಟಿಸಲು ಮತ್ತು ಮಕ್ಕಳಿಗೆ ಏಕಾಗ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ವೆ ಎಸ್.ಜಿ.ಎಂ ಪ್ರೌಢಶಾಲೆಯಲ್ಲಿ ಔಷಧಿ ಸಸ್ಯಗಳು ಮತ್ತು ಹೂದೋಟದ ನಿರ್ಮಿಸಿ ಅದರಲ್ಲಿ ವಾರದಲ್ಲಿಒಂದು ತರಗತಿ ಪಾಠ ಮಾಡುವ ಬಗ್ಗೆ ಶಾಲಾ ಎಸ್‌ಡಿಎಂಸಿ ಚಿಂತನೆ ನಡೆಸಿದ್ದು ಅದಕ್ಕಾಗಿ ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಯುವಕ ಮಂಡಲದ ಸಹಕಾರ ಕೋರಿ ಶಾಲಾ ಶಿಕ್ಷಕರ ಸಹಕಾರದೊಂದಿಗೆ ಎಸ್‌ಡಿಎಂಸಿ ವತಿಯಿಂದ ಮನವಿ ನೀಡಲಾಯಿತು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ ಮತ್ತು ಷಣ್ಮುಖ ಯುವಕ ಮಂಡಲದ ಸದಸ್ಯ ವಸಂತ ಪೂಜಾರಿ ಕೈಪಂಗಳ ದೋಳ ಮನವಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂಸಿ ಸಮನ್ವಯ ವೇದಿಕೆ ದ.ಕ ಜಿಲ್ಲಾ ಉಪಾಧ್ಯಕರು, ಎಸ್‌ಜಿಎಂ ಪ್ರೌಢ ಶಾಲಾ ಎಸ್‌ಡಿಎಂಸಿಡಿ ಅಧ್ಯಕ್ಷರೂ ಆದ ಪ್ರವೀಣ್ ಆಚಾರ್ಯ ನರಿಮೊಗರು, ಸದಸ್ಯರಾದ ಹಮೀದ್ ಮಾಂತೂರು, ಅನುಪಮ ವಿರಮಂಗಲ, ಪ್ರೇಮಾವತಿ, ಸುಮತಿ, ಬೇಬಿ, ಫಾತಿಮಾ ಕೌಸರ್ ಎಂ ವಿದ್ಯಾ, ಚಿತ್ರ, ವಸಂತ ಪೂಜಾರಿ ಕೆ, ಶಶಿಕಲ, ಮುಖ್ಯ ಶಿಕ್ಷಕ ಸೋಮಶೇಖರ್ ಆರ್, ಸಹ ಶಿಕ್ಷಕರಾದ ಮೋಹನ್ ಕುಮಾರ್, ವಿಜಯ ಕುಮಾರ್ ಜೆ.ಆರ್.ಎನ್, ಸುಜಾತ, ಕು.ಮಧುಶ್ರೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here