ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸೂಚನೆಯಂತೆ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿ. ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಹಕಾರದ ಬಗ್ಗೆ ಪ್ರಬಂಧ ಸ್ಪರ್ಧೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಹಕಾರದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಜಿಲ್ಲಾ ಮಟ್ಟದ ಸಹಕಾರ ಪ್ರಬಂಧ ಸ್ಪರ್ಧೆಯು ಸೆ.10ರಂದು ಪುತ್ತೂರು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರ್ರೌಢಶಾಲೆಯಲ್ಲಿ ಪೂರ್ವಾಹ್ನ 10ರಿಂದ 12ರವರೆಗೆ “ಸಹಕಾರ ಚಳವಳಿ ಮತ್ತು ಯುವ ನಾಯಕತ್ವ”(Cooperative movement and Youth leadership) ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದೆ. ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುವ ಪ್ರಥಮ ಮೂರು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಗುವುದು ಹಾಗೂ ಅವರು ರಾಜ್ಯಮಟ್ಟದ ಸ್ಪರ್ಧೆಗಾಗಿ ಅರ್ಹರಾಗುತ್ತಾರೆ.
ನಿಬಂಧನೆಗಳು:
ಒಂದು ಪ್ರೌಢ ಶಾಲೆಯಿಂದ ಒಬ್ಬರು ಅಥವಾ ಇಬ್ಬರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬಹುದು. ಪ್ರಬಂಧ ಸ್ಪರ್ಧೆಗೆ ಭಾಗವಹಿಸುವ ಸ್ಪರ್ಧಿಗಳಿಗೆ ಸ್ಥಳದಲ್ಲಿಯೇ ಪ್ರಯಾಣ ಭತ್ತೆ ನೀಡಲಾಗುವುದು (ಬಸ್ ಟಿಕೆಟ್ ಕೊಡಬೇಕು). ಸ್ಪರ್ಧಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗುವುದು. ಪ್ರಬಂಧ ಬರೆಯಲು ಉತ್ತರ ಪತ್ರಿಕೆಗಳನ್ನು ಸ್ಥಳದಲ್ಲಿಯೇ ನೀಡಲಾಗುವುದು ಪ್ರಬಂಧವನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬರೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9481755188 ಸಂಪರ್ಕಿಸಬಹುದು. ಸ್ಪರ್ಧಾಳುಗಳಿಗೆ ಊಟ ಉಪಹಾರ ವ್ಯವಸ್ಥೆ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ತಾವು ತಮ್ಮ ಒಪ್ಪಿಗೆಯನ್ನು ಮರು ಟಪ್ಪಾಲಿನಲ್ಲಿ, ಈ-ಮೇಲ್ (cooperativeuniondk@gmail.com) ಅಥವಾ ದೂರವಾಣಿ ಸಂಪರ್ಕದ ಮೂಲಕ ತಿಳಿಸಲು ಕೋರಲಾಗಿದೆ.
ಜಿಲ್ಲಾ ಮಟ್ಟದ ಸಹಕಾರ ಚರ್ಚಾ ಸ್ಪರ್ಧೆಯು ಪೂರ್ವಾಹ್ನ 11ರಿಂದ – “ಯುವನಾಯಕತ್ವದಿಂದ ಮಾತ್ರವೇ ಸಹಕಾರಿ ವ್ಯವಸ್ಥೆ ಬಲಾಢ್ಯಗೊಳ್ಳಬಲ್ಲದು” (Young leadership can only strengthen the cooperative movement) ಎಂಬ ವಿಷಯದಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದ ಸಹಕಾರ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರು (ವಿಷಯದ ಪರವಾಗಿ ಒಬ್ಬರು ಮತ್ತು ವಿರೋಧವಾಗಿ ಒಬ್ಬರು) ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹರಾಗುತ್ತಾರೆ.
ಚರ್ಚಾ ಸ್ಪರ್ಧೆಯ ನಿಯಮಗಳು
ಒಂದು ಪದವಿ ಪೂರ್ವ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬಹುದು. (ವಿಷಯದ ಪರವಾಗಿ ಒಬ್ಬರು, ವಿರೋಧವಾಗಿ ಒಬ್ಬರು), ಚರ್ಚಾ ಸ್ಪರ್ಧೆಗೆ ಭಾಗವಹಿಸುವ ಸ್ಪರ್ಧಿಗಳಿಗೆ ಸ್ಥಳದಲ್ಲಿಯೇ ಪ್ರಯಾಣ ಭತ್ತೆ ನೀಡಲಾಗುವುದು (ಬಸ್ ಟಿಕೇಟ್ ಕೊಡಬೇಕು). ಸ್ಪರ್ಧಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗುವುದು. ಒಬ್ಬ ಸ್ಪರ್ಧಿಗೆ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಲು 5 ನಿಮಿಷ ನಿಗದಿ ಮಾಡಲಾಗಿದೆ. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 94817 55188 ಸಂಪರ್ಕಿಸಬಹುದು. ಸ್ಪರ್ಧಾಳುಗಳಿಗೆ ಊಟ ಉಪಹಾರ ವ್ಯವಸ್ಥೆ ಮಾಡಲು ಅನುಕೂಲವಾಗುವ ದೃಷ್ಟಿಯಿಂದ ತಾವು ತಮ್ಮ ಒಪ್ಪಿಗೆಯನ್ನು ಮರು ಟಪ್ಪಾಲಿನಲ್ಲಿ, ಈ-ಮೇಲ್ (cooperativeuniondk@gmail.com) ಅಥವಾ ದೂರವಾಣಿ ಸಂಪರ್ಕದ ಮೂಲಕ ತಿಳಿಸಲು ಕೋರಲಾಗಿದೆ.