ಕಾಣಿಯೂರು: ಶತಮಾನೋತ್ಸವ ಸಂಭ್ರಮದಲ್ಲಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚಾರ್ವಾಕ ಶಾಖಾ ಕಚೇರಿ ಆವರಣದಲ್ಲಿ ಶತಮಾನದ ಸವಿ ನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮವು ಸೆ 3ರಂದು ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಕಾಣಿಯೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ನಿರ್ದೇಶಕರಾದ ಪರಮೇಶ್ವರ ಅನಿಲ, ಅನಂತ ಕುಮಾರ್ ಬೈಲಂಗಡಿ, ವಿಶ್ವನಾಥ ದೇವಿನಗರ, ರಮೇಶ ಉಪ್ಪಡ್ಕ, ಶೀಲಾವತಿ ಮುಗರಂಜ, ರತ್ನಾವತಿ ಮುದುವ, ಲೋಕೇಶ್ ಅತಾಜೆ, ಸುಂದರ ದೇವಸ್ಯ, ದಿವಾಕರ ಮರಕ್ಕಡ, ಪುತ್ತೂರು ಪಿ.ಎಲ್. ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಖಂಡಿಗ, ಸಂಘದ ಮಾಜಿ ಅಧ್ಯಕ್ಷರಾದ ಆನಂದ ಗೌಡ ಮೇಲ್ಮನೆ, ಧರ್ಮೇಂದ್ರ ಗೌಡ ಕಟ್ಟತ್ತಾರು, ನಿವೃತ್ತ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ಕುಸುಮಾಧರ ಇಡ್ಯಡ್ಕ, ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ನಿರ್ದೇಶಕರಾದ ವಸಂತ ದಲಾರಿ, ರಾಮಣ್ಣ ಗೌಡ ಪೊನ್ನೆತ್ತಡಿ, ವಾಸಪ್ಪ ಗೌಡ ಖಂಡಿಗ, ರಾಮಚಂದ್ರ ಕೋಲ್ಪೆ, ರಾಜೀವಿ ಬೊಮ್ಮೊಳಿಗೆ, ಕಾಂತ ಪರವ, ಕಾರ್ಯದರ್ಶಿ ದಮಯಂತಿ ಮುದುವ, ಗ್ರಾ.ಪಂ.ಸದಸ್ಯರಾದ ಸುಲೋಚನಾ ಮಿಯೋಲ್ಪೆ, ತೇಜಕುಮಾರಿ ಉದ್ಲಡ್ಡ, ಕೀರ್ತಿ ಕುಮಾರಿ ಅಂಬುಲ, ದೇವಿಪ್ರಸಾದ್ ದೋಳ್ಪಾಡಿ, ಗ್ರಾ. ಪಂ. ಮಾಜಿ ಸದಸ್ಯರಾದ ವೀರಪ್ಪ ಉದ್ಲಡ್ಡ, ದಯಾನಂದ ಅಂಬುಲ, ಚಾರ್ವಾಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಎಣ್ಮೂರು, ಕಾಣಿಯೂರು ಕಣ್ವರ್ಷಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಾಧವ ಕೊಲ್ಪೆ, ಪುಣ್ಚತ್ತಾರು ಶ್ರೀಹರಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಜನಾರ್ದನ ದೋಳ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.