ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.5 ರಂದು ನಡೆಯುವ ಹೊಸ ತೆನೆ ವಿತರಣೆಗಾಗಿ ಸೆ.4 ರಂದು ದೇವಳದ ಮೂಲ ನಾಗ ಸನ್ನಿಧಿಯಲ್ಲಿ ಬೆಳೆದ ಭತ್ತದ ಕದಿರನ್ನು ಕೊಯ್ಯುವ ಮುಹೂರ್ತ ನಡೆಯಿತು.
ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಸಲ್ಲಿಸಿ ತೆನೆಗೆ ಹಾಲೆರೆದು, ತೆನೆ ಕೊಯ್ಯುವ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ ದೇವಳದ ಕಾರ್ಯನಿರ್ವಾಹಣಾಧಿಕಾರಿ ಕೆ ವಿ ಶ್ರೀನಿವಾಸ್, ಸುದೇಶ್ ಚಿಕ್ಕಪುತ್ತೂರು, ನೌಕರರಾದ ಪದ್ಮನಾಭ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.