ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಹೊಸತೆನೆ( ಕದಿರು) ಕಟ್ಟುವ ಕಾರ್ಯಕ್ರಮವು ಸೆ.5ರಂದು ನಡೆಯಿತು.
ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆದ ಬಳಿಕ ಪಶ್ಚಿಮ ಭಾಗದ ಪುಷ್ಕರಣಿಯ ಬಳಿಯ ಅಶ್ವತ್ಥಕಟ್ಟೆಯವರೆಗೆ ಉತ್ಸವಮೂರ್ತಿಯೊಂದಿಗೆ ಚೆಂಡೆ , ವಾದ್ಯಘೋಷದೊಂದಿಗೆ ಸಾಗಿ, ಅಲ್ಲಿ ಸಂಗ್ರಹಿಸಿಟ್ಟ ತೆನೆ ಗಳನ್ನು ತಂದು , ಪೂಜೆ ನಡೆದು ದೇಗುಲದ ಗರ್ಭಗುಡಿ , ಪರಿವಾರ ದೇವರ ಗುಡಿಗಳು , ತೀರ್ಥಬಾವಿ , ಉಗ್ರಾಣ, ತುಳಸೀಕಟ್ಟೆ ಇತ್ಯಾದಿಗಳಿಗೆ ಕದಿರನ್ನು ಕಟ್ಟಿದ ಬಳಿಕ ನೆರೆದ ಭಕ್ತರಿಗೆ ಕದಿರನ್ನು ವಿತರಿಸಲಾಯಿತು.
ಈ ಸಂದರ್ಭ ದೇವಳದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಜಾನು ನಾಯ್ಕ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ದಿನೇಶ್ ಪಿ.ವಿ, ಸುದೇಶ್ ಚಿಕ್ಕಪುತ್ತೂರು, ರತ್ನಾಕರ ನಾೖಕ್, ಶ್ರೀಧರ್ ಪಟ್ಲ, ಜೆಸಿಬಿ ಉದ್ಯಮಿ ವಿನಯ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ದೇವಳದ ಹೊರಾಂಗಣದ ಕಟ್ಟೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ತೆನೆ ಪಡೆದುಕೊಂಡರು.