ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಸೆ.6 ರಂದು ಹಸಿರು ಹೊರೆಕಾಣಿಕೆ ಸಮರ್ಪಣೆ,ಸಂಜೆ ಶ್ರೀ ದುರ್ಗಾಪೂಜೆ,ರಾತ್ರಿ ಕುಟುಂಬೋತ್ಸವ – ಸೆ.7ರಂದು ಶ್ರೀ ಗಣೇಶೋತ್ಸವ 

ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶ್ರೀ ದುರ್ಗಾಪೂಜೆ ಸೆ.6 ಮತ್ತು ಸೆ.7ರಂದು ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಆಶೀರ್ವಾದಗಳೊಂದಿಗೆ ನಡೆಯಲಿದೆ.

ಸೆ.6ರಂದು ಬೆಳಿಗ್ಗೆ 10ಕ್ಕೆ ಹಸಿರು ಹೊರೆಕಾಣಿಕೆ, ಸಂಜೆ 6.30ಕ್ಕೆ ಶ್ರೀ ದುರ್ಗಾಪೂಜೆ, ಅನ್ನಸಂತರ್ಪಣೆ,, ರಾತ್ರಿ 8ರಿಂದ ವಿ.ಜೆ.ವಿಖ್ಯಾತ್ ಸುಳ್ಯ ಸಾರಥ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ಹಾಗೂ ದಂಪತಿಗಳಿಗೆ ವಿಶೇಷ ಮನೋರಂಜನಾ ಆಟಗಳು ಹಾಗೂ ಉಡುಗೊರೆಯೊಂದಿಗೆ ಕುಟುಂಬೋತ್ಸವ ನಡೆಯಲಿದೆ.

ಸೆ.7ರಂದು ಬೆಳಿಗ್ಗೆ 8.30ಕ್ಕೆ ಗಣಪತಿ ವಿಗ್ರಹ ಪ್ರತಿಷ್ಟೆ,ಬಳಿಕ ಆಟೋಟ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ 10ರಿಂದ ಗಣಪತಿ ಹವನ,ಭಜನಾಮೃತ,ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 4 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ಕೋಡಿಂಬಾಡಿ ವಹಿಸುವರು.

ಅತಿಥಿಗಳಾಗಿ ಮುಂಡೂರು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಎನ್‌.ಎಸ್‌.ಡಿ. ಸರ್ವೆದೋಳಗುತ್ತು,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ,ಉದ್ಯಮಿ ದೇವಣ್ಣ ರೈ ಆನಾಜೆ,ದೇವಸ್ಥಾನದ ಆಡಳಿತಾಧಿಕಾರಿ ಉಮೇಶ್ ಕಾವಡಿ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಕೆಯ್ಯೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಮೊಕ್ತೇಸರ ಮೋಹನ್‌ ರೈ ಓಲೆಮುಂಡೋವು,ಆನಂದ ಪೂಜಾರಿ ಸರ್ವೆದೋಳಗುತ್ತು,ಉದ್ಯಮಿ ವಿಜಯ ಕುಮಾರ್ ರೈ ಸರ್ವೆ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಸರಕಾರದಿಂದ ನೇಮಕಗೊಂಡ ಶಿವನಾಥ ರೈ ಮೇಗಿನಗುತ್ತು ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಸಂಜೆ ಸರ್ವೆಯ ಮುಖ್ಯರಸ್ತೆಯಲ್ಲಿ ವಿವಿಧ ವೇಷ ಭೂಷಣಗಳೊಂದಿಗೆ ಚೆಂಡೆ ವಾದನ. ಸ್ಯಾಕ್ಸೋಫೋನ್ ವಾದನ ಗೊಂಬೆ ಕುಣಿತ, ಕುಣಿತ ಭಜನೆ ಮರಾಟಿ ಯುವ ವೇದಿಕೆ ಭಜನಾ ತಂಡ ಕೊಂಬೆಟ್ಟು ಪುತ್ತೂರು, ಮಕ್ಕಳ ಕುಣಿತಾ ಭಜನಾ ತಂಡ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನ ಸರ್ವೆ, ರಾಮ ಪರಂಟೋಲು ಮತ್ತು ಬಳಗದವರಿಂದ ಹುಲಿ ಕುಣಿತ ಹಾಗೂ ಸುಡ್ಡುಮದ್ದು ಪ್ರದರ್ಶನದೊಂದಿಗೆ ಶೋಭಾಯಾತ್ರೆ ಹೊರಟು ಸರ್ವೆ ಗೌರಿ ಹೊಳೆಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು,ಅಧ್ಯಕ್ಷ ವಿನಯ ಕುಮಾರ್ ರೈ ಸರ್ವೆ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here