ಪುತ್ತೂರು: ಪುತ್ತೂರು-ಉಪ್ಪಿನಂಗಡಿ ನಡುವಣ ಬೇರಿಕೆ ಬಸ್ಸು ತಂಗುದಾಣದ ಎದುರುಗಡೆಯ ಎವ್ಲಿನ್ ಗ್ಯಾಲರಿ ಕಾಂಪ್ಲೆಕ್ಸ್‌ನಲ್ಲಿ ಎಂಬಲ್ಲಿ ವಿದ್ಯುತ್ ಚಾಲಿತ(ಇಲೆಕ್ಟ್ರಿಕಲ್) ದ್ವಿಚಕ್ರ ವಾಹನಗಳ ಮಾರಾಟ ಮಳಿಗೆಯ ಬೃಹತ್ ಶೋರೂಂ ಸೆ.5ರಂದು ಲೋಕಾರ್ಪಣೆಗೊಂಡಿತು.
ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜರವರು ನೂತನ ಶೋರೂಂಗೆ ಪವಿತ್ರ ಜಲ ಸಿಂಪಡಿಸಿ, ಪವಿತ್ರ ಬೈಬಲ್ ವಾಚಿಸಿ ಆಶೀರ್ವಚಿಸಿ ಬಳಿಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಜಗತ್ತು ಶರವೇಗದಲ್ಲಿ ಮುಂದುವರೆಯುವಾಗ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಅವಿಷ್ಕಾರಗಳೂ ನಡೆಯುತ್ತಿರುತ್ತದೆ. ಮಾನವನಿಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲು ವಾಹನದ ಅಗತ್ಯತೆ ಖಂಡಿತಾ ಇದೆ. ಇಲ್ಲಿವರೆಗೆ ಪೆಟ್ರೋಲ್ ವಾಹನಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಇದೀಗ ವಿದ್ಯುತ್ ಚಾಲಿತ ವಾಹನಗಳು ಕಾಲಿಟ್ಟಿದ್ದು ಇದು ಮಾನವನ ದೈನಂದಿನ ಜೀವನದ ಕಡಿಮೆ ಖರ್ಚಿಗೆ ಬಹಳ ಉಪಕಾರಿ ಎನಿಸಿದೆ. ಪ್ರವೀಣ್‌ರವರು ಆರಂಭಿಸಿದ ಈ ನೂತನ ಉದ್ಯಮಕ್ಕೆ ದೇವರು ಆಶೀರ್ವದಿಸಲಿ ಎಂದು ಹೇಳಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ಕ್ರಿಶ್ಚಿಯನ್ಸ್ ಯೂನಿಯನ್ ಅಧ್ಯಕ್ಷ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ಮಾಲಕ ವಲೇರಿಯನ್ ಡಾಯಸ್, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಮ್ಯಾಕ್ಸಿಂ ಲೋಬೊ ಬಿಳಿಯೂರು, ೩೪ ನೆಕ್ಕಿಲಾಡಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಅಜೀಜ್ ಬಸ್ತಿಕ್ಕಾರ್, ಸಿಪ್ರಿಯನ್ ವೇಗಸ್ ಬೇರಿಕೆ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು. ಮೆಲಿಟ ಪ್ರಿನ್ಸಿಯ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ಶೋರೂಂ ಮಾಲಕ ಪ್ರವೀಣ್ ಲೋಬೊ ಹಾಗೂ ಮೇಬಲ್ ವನಿತ ಲೋಬೊ ಬಿಳಿಯೂರುರವರು ಸ್ವಾಗತಿಸಿ, ಸಂಸ್ಥೆಯ ಯಶಸ್ಸಿಗೆ ಸಹಕಾರ ಕೋರಿದರು.
ಉದ್ಘಾಟನಾ ಪ್ರಯುಕ್ತ ರೂ.10 ಸಾವಿರ ರಿಯಾಯಿತಿ ಕೊಡುಗೆ..
ಶೋರೂಂನಲ್ಲಿ ಒಂಭತ್ತು ಮಾಡೆಲ್‌ಗಳ, ವಿವಿಧ ವಿನ್ಯಾಸದ ಆಕರ್ಷಕ ದ್ವಿಚಕ್ರ ವಾಹನಗಳಿವೆ. ಇದರಲ್ಲಿ ನಾಲ್ಕು ವಿಧದ ವಾಹನಗಳು ಹೈ-ಸ್ಪೀಡ್ ವಾಹನಗಳು, ಐದು ಲೋ-ಸ್ಪೀಡ್ ವಾಹನಗಳಾಗಿವೆ ಜೊತೆಗೆ ಸ್ಪೋರ್ಟ್ಸ್ ಬೈಕ್ ಕೂಡ ಲಭ್ಯವಿದೆ. ಈ ಪ್ರತಿಯೊಂದು ವಾಹನಗಳ ಮೇಲೆ ಶೋರೂಂ ಉದ್ಘಾಟನಾ ಪ್ರಯುಕ್ತ ರೂ.10 ಸಾವಿರ ರಿಯಾಯಿತಿ ಕೊಡುಗೆ ಲಭ್ಯವಿದೆ ಎಂದು ಮಾಲಕ ಪ್ರವೀಣ್ ಲೋಬೋ ಬಿಳಿಯೂರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.