ಸದಾನಂದ ಶೆಟ್ಟಿಯವರ ಎಲ್ಲೈಸಿ ಸೇವಾ ಕೇಂದ್ರ ಬಿಮ ಕನೆಕ್ಟ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಕಳೆದ ಹಲವು ವರ್ಷಗಳಿಂದ ಸಿಪಿಸಿ ಪ್ಲಾಜ್ಹಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ಟಿ. ಸದಾನಂದ ಶೆಟ್ಟಿಯವರ ಪ್ರೀಮಿಯಂ ಎಲ್‌ಐಸಿ ಅಸೋಸಿಯೇಟ್ ಬಿ ಕನೆಕ್ಸ್ ಎಲ್ಲೈಸಿ ಸೇವಾ ಕೇಂದ್ರ ಸೆ.6ರಂದು ಸ್ಥಳಾಂತರಗೊಂಡು ಎಂ.ಟಿ ರಸ್ತೆಯಲ್ಲಿರುವ ಕಾಮದೇನು ಕಟ್ಟಡದಲ್ಲಿ ಶುಭಾರಂಭಗೊಂಡಿತು.


ಸೇವಾ ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಪ್ಪಿನಂಗಡಿ ಭಟ್ ನರ್ಸಿಂಗ್ ಹೋಮ್‌ನ ಡಾ.ಕೆ.ಜಿ ಭಟ್ ಮಾತನಾಡಿ, ಎಲ್ಲೈಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸದಾನಂದ ಶೆಟ್ಟಿಯವರು ಪ್ರಾರಂಭದಲ್ಲಿ ಬಹಳಷ್ಟು ಶ್ರಮಪಟ್ಟಿದ್ದಾರೆ. ವಿಮೆ, ಉಳಿತಾಯ ಮಾಡುವುದು ಇಷ್ಟವಿಲ್ಲದಿದ್ದರೂ ಸದಾನಂದ ಶೆಟ್ಟಿಯವರು ಮನವೊಳಿಸಿ ವಿಮೆ ಮಾಡಿಸಿದ್ದಾರೆ. ಅಂದು ವಿಮೆ ಮಾಡಿಸಿದವರಿಗೆ ಈಗ ಅದರ ಪ್ರಯೋಜ ಪಡೆಯುತ್ತಿದ್ದಾರೆ. ಜೊತೆಗೆ ಅವರು ಸಾಮಾಜಿಕವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿಮ್ಮ ಸೇವೆ ನಿರಂತರವಾಗಿ ಮುಂದುವರಿಯಲಿ. ಕಟ್ಟಡ ಕಡೆಯ ವ್ಯಕ್ತಿಗೂ ಸೇವೆ ನೀಡುತ್ತಿರುವ ಎಲ್ಲೈಸಿಗಿಂತ ಉತ್ತಮ ಸೇವೆ ನೀಡುವ ಸಂಸ್ಥೆ ಬೇರೊಂದಿಲಲ್ಲ ಎಂದರು.


ಎಲ್ಲೈಸಿ ಪುತ್ತೂರಿನ ಶಾಖಾಧಿಕಾರಿ ಎಚ್ ಉಜ್ವಲ್ ಮಾತನಾಡಿ, ಅಭಿವೃದ್ಧಿ ಅಧಿಕಾರಿಯಾಗಿ ಎಲ್ಲೈಸಿಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಸದಾನಂದ ಶೆಟ್ಟಿಯವರು ತನ್ನ ನಿವೃತ್ತಿ ಬಳಿವೂ ಸಂಸ್ಥೆಯೊಂದಿಗೆ ಉತ್ತಮ ವ್ಯವಹಾರ ನಡೆಸುತ್ತಿದ್ದಾರೆ ಎಂದರು.


ನಿವೃತ್ತ ಹಿರಿಯ ಶಾಖಾಧಿಕಾರಿ ನಾರಾಯಣ ಗೌಡ ಮಾತನಾಡಿ, ಎಲ್ಲೈಸಿಯ 68ನೇ ವಿಮಾ ಸಪ್ತಾಹ ಸಂದರ್ಭದಲ್ಲಿಯೇ ಕಚೇರಿ ಶುಭಾರಂಭಗೊಂಡಿದೆ. ತನ್ನ ಪಾಲಿಸಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಚೇರಿಯನ್ನು ಸ್ಥಳಾಂತರಗೊಳಿಸಿದ್ದಾರೆ. ತನ್ನ ನಿವೃತಿ ನಂತರೂ ಸಂಸ್ಥೆಯ ಮೂಲಕ ತೊಡಗಿಸಿಕೊಂಡಿದ್ದಾರೆ ಎಂದರು.
ಎಲ್ಲೈಸಿಯ ಎಂಡಿಆರ್.ಟಿ ರತ್ನಾಕರ ರೈ ಕೆದಂಬಾಡಿ ಮಾತನಾಡಿ, ನಿವೃತ್ತ ಜೀವನದಲ್ಲಿಯೂ ಉತ್ತಮ ವ್ಯವಹಾರ ನಡೆಸುತ್ತಿರುವ ಸದಾನಂದ ಶೆಟ್ಟಿಯವರ ಹಾದಿ ನಮಗೆಲ್ಲಾ ಮಾರ್ಗದರ್ಶನ. ಲಯನ್ಸ್ ಕ್ಲಬ್‌ನಲ್ಲಿದ್ದು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.


ಎಲ್ಲೈಸಿಯ ನಿವೃತ್ತ ಅಭಿವೃದ್ಧಿ ಅಧಿಕಾರಿ, ಸೇವಾ ಕೇಂದ್ರದ ಮುಖ್ಯಸ್ಥರಾಗಿರುವ ಸದಾನಂದ ಶೆಟ್ಟಿ ಮಾತನಾಡಿ, ಕಠಿಣ ಪರಿಶ್ರಮ, ಉತ್ತಮ ಅಧ್ಯಯನ ಇದ್ದಾಗ ಯಶಸ್ಸು ಖಂಡಿತಾ ಸಾಧ್ಯ. ಸಮಾಜದ ಸ್ವಾಸ್ತ್ಯ ಕಾಪಾಡುವ ಕೆಲಸ ಎಲ್ಲೈಸಿ ಪ್ರತಿನಿಧಿಗಳ ಮೂಲಕ ನಡೆಯುತ್ತಿದ್ದು ಸಿನೇಮಾ ಹಿರೋಗಳಿಗಿಂತ ಎಲ್ಲೈಸಿ ಪ್ರತಿನಿಧಿಗಳಾಗಿದ್ದಾರೆ. ಎಲ್ಲೈಸಿ ಮೂಲಕ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಿದೆ. ಜೀವನದಲ್ಲಿ ಸೋತವರಿಗೆ ಉಪಯೋಗವಾಗುತ್ತಿದ್ದು ನಮ್ಮ ಜೀವ ಉಳಿಸುವ ಮೂಲಕ ಉಳಿದ ಜೀವಗಳನ್ನು ರಕ್ಷಿಸುವ ಕಾರ್ಯವೂ ಎಲ್ಲೈಸಿ ಮೂಲಕ ನಡೆಯುತ್ತಿದೆ. ಯಾವುದೇ ರೀತಿಯ ಲಂಚವಿಲ್ಲದೇ ಉತ್ತಮ ಸೇವೆ ನೀಡುವ ಸಂಸ್ಥೆ ಎಲ್ಲೈಸಿಯಾಗಿದೆ. ಎಲ್ಲೈಸಿಯಲ್ಲಿ ಅನಿರೀಕ್ಷಿತವಾಗಿ ಹುದ್ದೆ ದೊರೆತಿದೆ. ದಕ್ಷಿಣ ಕನ್ನಡಕ್ಕೆ ಒಂದೇ ಹುದ್ದೆ ಇದ್ದು ಮೆರಿಟ್ ಮೇಲೆ ಆಯ್ಕೆಯಾಗಿದ್ದೇನೆ. ನಂತರ ಪ್ರಥಮ ಅವಧಿಯಲ್ಲೇ ಕೋಟಿ ವ್ಯವಹಾರ ನಡೆಸಿ ದಾಖಲೆ ಬರೆದಿದ್ದೇನೆ.
ಉಪ ಶಾಖಾಧಿಕಾರಿ ಎಂ.ಯು ಗುರುರಾಜ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕಾಂಚನ ಸುಂದರ ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್, ಮಾಣಿ ಬಾಲವಿಕಾಸ ಶಾಲಾ ಮುಖ್ಯಗುರು ರವೀಂದ್ರ ರೈ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.


ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಅರವಿಂದ ಭಗವಾನ್ ರೈ, ಸುಂದರ ಗೌಡ, ಪರಿವಾರ ಕ್ರೆಡಿಸ್ ಸೌಹಾರ್ದ ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ., ಖ್ಯಾತ ಚರ್ಮರೋಗ ತಜ್ಞ ಡಾ.ಸಚಿನ್ ಶೆಟ್ಟಿ, ಸದಾನಂದ ಶೆಟ್ಟಿಯವರ ಪತ್ನಿ ಶಕೀಲಾ ಸದಾನಂದ ಶೆಟ್ಟಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಕೋರಿದರು.
ಹರಿಣಿ ಪ್ರಾರ್ಥಿಸಿದರು. ಆನಂದ ರೈ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು. ಪ್ರತಿನಿಧಿ ದಯಾನಂದ ವಂದಿಸಿದರು.

LEAVE A REPLY

Please enter your comment!
Please enter your name here