ಪಡುಮಲೆ ಶ್ರೀ ಗಣೇಶನ ವೈಭವದ ಶೋಭಾಯಾತ್ರೆ

0

ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ, ಪಡುಮಲೆ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೆ.7 ರಂದು ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು.


ಕಾರ್ಯಕ್ರಮಗಳು:-
ಸೆ.7 ರಂದು ಪೂರ್ವಾಹ್ನ ಗಂಟೆ 8-00ಕ್ಕೆ ಕದಿರು ಪೂಜೆ, ನಡೆಯಿತು. ಬಳಿಕ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಮಹಾಗಣಪತಿ ಹವನ, ನೆರವೇರಿತು.ಮಧ್ಯಾಹ್ನ 12.30ರಿಂದ ದೇವಾಲಯದಲ್ಲಿ ಶ್ರೀ ದೇವರ ಪೂಜೆ, ಶ್ರೀ ಗಣಪತಿ ಮಹಾ ಮಂಗಳಾರತಿ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ಮತ್ತು ಬಳಗದವದಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.


ಸ್ಪರ್ಧೆಗಳು:-
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವುದು ಮತ್ತು ಭಕ್ತಿಗೀತೆ, ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪುನೀತ್ ಆರ್ಕೆಸ್ಟ್ರಾ ಪುತ್ತೂರು ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.


ಅನ್ನದಾನ;-
ದೇವಾಲಯದಲ್ಲಿ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆದು ಸಾವಿರಾರು ಭಕ್ತಾದಿಗಳು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದರು.


ವೈಭವದ ಶೋಭಾಯಾತ್ರೆಗೆ ಚಾಲನೆ;-
ಸಂಜೆ ಶ್ರೀ ಗಣೇಶನಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಪ್ರಗತಿಪರ ಕೃಷಿಕ ಕೃಷ್ಣ ರೈ ಕುದ್ಕಾಡಿ ರವತು ಶ್ರೀ ಗಣಪತಿ ದೇವರ ವೈಭವದ ಶೋಭಾಯಾತ್ರೆಗೆ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.ಶ್ರೀ ಕ್ಷೇತ್ರದಿಂದ ಆರಂಭಗೊಂಡ ಶೋಭಾಯಾತ್ರೆಯು ಕುಣಿತ ಭಜನೆ, ಗೊಂಬೆ ಸಿಂಗಾರಿ ಮೇಳ, ಬ್ಯಾಂಡ್ ವಾದ್ಯ , ಡಿ.ಜೆ. ಇತ್ಯಾದಿ ವೈವಿಧ್ಯಮಯ ಆಕರ್ಷಣೆಗಳೊಂದಿಗೆ ಮೈಂದನಡ್ಕ-ಕ್ಕೊಲ-ಮುಡಿಪಿನಡ್ಕ ರಾಜಭೀದಿಯಲ್ಲಿ ಸಂಚರಿಸಿ , ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲ ಇವರ ಸಹಕಾರದೊಂದಿಗೆ ಪಟ್ಟೆ ಅರೆಪ್ಪಾಡಿ
ಕ್ಷೀರಹೊಳೆಯ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಶ್ರೀ ಗಣಪತಿ ವಿಗ್ರಹ ವಿಸರ್ಜನೆ ಮಾಡಲಾಯಿತು. ಬಳಿಕ ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು ಸುಮಾರು 500 ಹೆಚ್ಚು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.


ಕುಣಿತ ಭಜನೆ;-
ಶೋಭಾಯಾತ್ರೆಯಲ್ಲಿ ಸರ್ವಶಕ್ತಿ ಮಕ್ಕಳ ಭಜನಾ ತಂಡ ಹಾಗೂ ರಾಜರಾಜೇಶ್ವರಿ ಮಕ್ಕಳ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಶಾಸಕರ ಭೇಟಿ
ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ ರೈ ಕೋಡಿಂಬಾಡಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರಿಗೆ ಹಾಗೂ ಮಹಾಗಣಪತಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಶಾಸಕ ಅಶೋಕ ರೈ ರವರಿಗೆ ಶಾಲು ಹಾಕಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಕ್ರಮ ಸಕ್ರಮ ಸದಸ್ಯ ಮಹಮ್ಮದ್ ಬಡಗನ್ನೂರು, ಕೃಷ್ಣ ಪ್ರಸಾದ್ ಶೆಟ್ಟಿ ಚೆಲ್ಯಡ್ಕ, ಬಡಗನ್ನೂರು ಗ್ರಾ.ಪಂ ಸದಸ್ಯ ರವಿರಾಜ ರೈ ಸಜಂಕಾಡಿ ಮತ್ತಿತರು ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸತೀಶ್ ರೈ ಕಟ್ಟಾವು , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್, ಚಂದುಕೂಡ್ಲು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ, ಪೇರಾಲು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ, ಉಪಾಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಪಳ್ಳತ್ತಾರು, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ , ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ದಮಯಂತಿ ಕೆಮನಡ್ಕ, ಶ್ರೀಮತಿ ಕನ್ನಡ್ಕ, ಸುಜಾತ ಮೈಂದನಡ್ಕ,ಲಿಂಗಪ್ಪ ಗೌಡ ಮೋಡಿಕೆ , ಗಣೇಶೋತ್ಸವ ಸಮಿತಿ ಸಂಚಾಲಕ ರಘುರಾಮ ಪಾಟಾಳಿ ಶರವು, ಲಿಂಗಪ್ಪ ಗೌಡ ಮೋಡಿಕೆ, ಸುಬ್ಬಯ್ಯ ರೈಹಲಸಿನಡಿ, ಉದಯ ಕುಮಾರ್ ಪಡುಮಲೆ, ಕೃಷ್ಣಪ್ರಸಾದ್ ರೈ ಪಡುಮಲೆ,ಡಾ .ರವೀಶ್ ಪಡುಮಲೆ, ಚಂದ್ರಶೇಖರ ಭಂಡಾರಿ ನಲಿಕೆಮಜಲು ಕಂಬಳ, ಗೌರವ ಸಲಹೆಗಾರ ಚಂದ್ರಶೇಖರ ಆಳ್ವ ಗಿರಿಮನೆ, ಶಿವಪ್ರಸಾದ್ ಪಟ್ಟೆ, ಪುರಂದರ ರೈ ಕುದ್ಕಾಡಿ, ಸುಧಾಕರ ಶೆಟ್ಟಿ ಮಂಗಳಾದೇವಿ, ರಾಮಣ್ಣ ಗೌಡ ಬಸವಹಿತ್ತಿಲು, ಸದಸ್ಯರುಗಳಾದ ರಮೇಶ್‌ ರೈ ಕೊಯಿಲ, ಪ್ರಸನ್ನ ರೈ ಮೇಗಿನಮನೆ, ಪ್ರಕಾಶ್ ರೈ ಕೊಯಿಲ, ರೋಹಿತ್ ಮುಡಿಪಿನಡ್ಕ, ಸುರೇಶ್ ಗೌಡ ಬರೆ, ಉದಯ ಕುಮಾರ್ ಶರವು, ತಿಮ್ಮಪ್ಪ ಪಾಟಾಳಿ, ಸೂರಾಜ್ ರೈ ಮೈಂದನಡ್ಕ ಪುಷ್ಪರಾಜ್ ಆಳ್ವ ಗಿರಿಮನೆ, ಶಿವಕುಮಾರ್ ತುಳಸಿಯಡ್ಕ, ಸಂಜೀವ ಮಡಿವಾಳ ಅಣಿಲೆ, ಪ್ರಣಾಮ್ ರೈ ಕುದ್ಕಾಡಿ, ಸುಧಾಕರ ಈಶಮೂಲೆ, ನಾಗರಾಜ್ ಪಟ್ಟೆ, ಕಿರಣ್ ರೈ ಮೈಂದನಡ್ಕ, ಪ್ರಜ್ವಲ್ ಕುದ್ಕಾಡಿ, ಕಾರ್ತಿಕ್ ಮೈಂದನಡ್ಕ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here