ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಗಣಪತಿ ಯೋಗ ನಮಸ್ಕಾರ

0

ಆಲಂಕಾರು: ಯೋಗ ಶಿಕ್ಷಣದ ಮೂಲಕ ಸಮಾಜದಲ್ಲಿ ಸಾತ್ವಿಕ ಬದಲಾವಣೆಯನ್ನು ತರುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸಾಮೂಹಿಕ ಗಣಪತಿ ಯೋಗ ನಮಸ್ಕಾರ ಕಾರ್ಯಕ್ರಮ ನಡೆಯಿತು.

ದೀಪ ಪ್ರಜ್ವಲನೆಯನ್ನು ಜಿಲ್ಲಾ ಸಂಚಾಲಕ ನಾರಾಯಣ , ದೇವಸ್ಥಾನದ ಸ್ವಯಂಸೇವಕ ಸಮಿತಿಯ ಶಿವಾನಂದ್ ಸಂಕೇಶ ,ಯೋಗ ಶಿಕ್ಷಕರಾದ ಡಾ ಗೋವಿಂದ ಪ್ರಸಾದ್ ಕಜೆ ,ರವಿಚಂದ್ರ & ದೀಪ್ತಿ ಇವರು ನೆರವೇರಿಸಿ ಶುಭಾಹಾರೈಸಿದರು.


ಕಾರ್ಯಕ್ರಮದ ಭೌಧಿಕ್ ನ್ನು ಯೋಗ ಶಿಕ್ಷಕ ಶೀನಪ್ಪ ನೆರವೇರಿಸಿ,ಯೋಗದ ಮಹತ್ವ ಹಾಗು ಗಣಪತಿಯ ಮಹಿಮೆಯನ್ನು ತಿಳಿಸಿ, ಗಣಪತಿ ಯೋಗ ನಮಸ್ಕಾರದಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿದರು.


ಯೋಗ ಬಂಧುಗಳಾದ ಸುಲತ, ಸುಧಾ ಮತ್ತು ವನಿತ ರವರು ಭಜನೆ, ಸುಪ್ರೀತಾ ಅಮೃತವಚನ, ಹೇಮಾವತಿ ಪಂಚಾಂಗ ಪಠಣವನ್ನು ಪಠಿಸಿದರು. ತಾಲೂಕು ಸಹ ಶಿಕ್ಷಣ ಸಂಚಾಲಕ ಕೃಷ್ಣಪ್ಪ ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ ಮತ್ತು ಯೋಗ ಶಿಕ್ಷಕ ಅಭಿಷೇಕ್ ರವರು ಸಾಮೂಹಿಕ ಗಣಪತಿ ನಮಸ್ಕಾರ .ತಾಲೂಕು ಶಿಕ್ಷಣ ಪ್ರಮುಖರಾದ ಪ್ರದೀಪ್ ಧ್ಯಾನ ಕಾರ್ಯಕ್ರಮವನ್ನು ನೆರವೇರಿಸಿದರು .


ಯೋಗಬಂಧುಗಳಾದ ಶರ್ಮಿಳ, ಶಿವಪ್ರಸಾದ್, ಆಕಾಶ್ ಮತ್ತು ಭಾರತಿ ಯೋಗ ಪ್ರಾತ್ಯಕ್ಷಿಕೆ ನೀಡಿದರು.ಉಪ್ಪಿನಂಗಡಿ ,ಕೊಯಿಲಾ, ಅಲಂಕಾರು, ನೆಲ್ಯಾಡಿಯ ಭಾಗದ ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ರಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಮಾರ್ಗದರ್ಶಕರಾದ ಆನಂದ ಕುಂಟಿನಿ ಸೂಚನೆಗಳನ್ನು, ಗಣೇಶ ರಶ್ಮಿ ವಂದಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಚಿಂತನ ಕೂಟ ಮತ್ತು ಪ್ರಶಿಕ್ಷಣ ಪ್ರಮುಖರಾದ ಹರೀಶ್ ಜಿಲ್ಲಾ ವಿಸ್ತರಣಾ ಪ್ರಮುಖರಾದ ಈಶ್ವರ್ , ಜಿಲ್ಲಾ ಪ್ರಮುಖರು ಮತ್ತು ಉಪ್ಪಿನಂಗಡಿ ನಗರದ ವಿಸ್ತರಣಾ ಪ್ರಮುಖರಾದ ಸಂತೋಷ್ ಕುಮಾರ್ ಎಸ್ ಕೆ ಸೇರಿದಂತೆ 85 ಮಂದಿ ಯೋಗಬಂಧುಗಳು ಯೋಗಭ್ಯಾಸದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here