ಪುತ್ತೂರು: ಭಾರತೀಯ ಕೃಷಿ ಅನುಸಂಧಾನ ಪರಿಷತ್ – ಕೃಷಿ ವಿಜ್ಞಾನ ಕೇಂದ್ರ (ದಕ್ಷಿಣ ಕನ್ನಡ) ಮಂಗಳೂರು ನಾಮ ನಿರ್ದೇಶಿತ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು, ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ, ಕೋಝಿಕೋಡ್ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷಿ ವಿಜ್ಞಾನ ಕೇಂದ್ರಗಳ ವಲಯ ಕಾರ್ಯಾಗಾರದಲ್ಲಿ ಶ್ರೇಷ್ಠ ಸಾಂಬಾರು ಬೆಳೆ ಉತ್ಪಾದಿಸುವ ಕೃಷಿಕ (ಬೆಸ್ಟ್ ಸ್ಪೈಸ್ ಫಾರ್ಮರ್ ಅವಾರ್ಡ್) ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಈ ಪ್ರಶಸ್ತಿಯನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಕೃಷಿ ವಿಸ್ತರಣಾ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಡಾ.ರಾಜರ್ಷಿ ರಾಯ್ ಬರ್ಮನ್ ಅವರಿಂದ ಸುರೇಶ್ ಬಲ್ನಾಡು ಅವರು ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ಸಾಂಬಾರು ಬೆಳೆ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು, ನಿರ್ದೇಶಕರು, ರಾಷ್ಟ್ರೀಯ ಪ್ರಾಣಿ ಅನುವಂಶಿಕ ಸಂಪನ್ಮೂಲಗಳ ಸಂಸ್ಥೆ, ಬೆಂಗಳೂರು, ಎಂ.ಕೆ. ನಾಯ್ಕ್, ವಿಶ್ರಾಂತ ಕುಲಪತಿ, ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾನಿಲಯ, ಶಿವಮೊಗ್ಗ, ವಿಸ್ತರಣಾ ನಿರ್ದೇಶಕರು, ಕೇರಳ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕಾರ್ಯನಿರ್ವಾಹಕ ನಿರ್ದೇಶಕರು, ನೀರಿನ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣಾ ಕೇಂದ್ರ ಕೋಝಿಕ್ಕೋಡ್ ಕೇರಳ, ನಿರ್ದೇಶಕರು, ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ, ಬೆಂಗಳೂರು ಮತ್ತು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಪೆರುವನ್ನಾಮುಜಿ ಕೋಝಿಕ್ಕೋಡ್ ಮತ್ತು ಡಾ|| ಟಿ.ಜೆ. ರಮೇಶ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಕೋಝಿಕ್ಕೋಡ್ ನಲ್ಲಿ ‘ಬೆಸ್ಟ್ ಸ್ಪೈಸ್ ಫಾರ್ಮರ್ ಅವಾರ್ಡ್’ ಸ್ವೀಕರಿಸಿದ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡು