ಉಪ್ಪಿನಂಗಡಿ: ಶಿಕ್ಷಕರ ಕೊರತೆ- ಸೆ.10ರಂದು ಪೋಷಕರಿಂದ ಪ್ರತಿಭಟನೆ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, ಇದನ್ನು ನೀಗಿಸುವವರೆಗೆ ಮಕ್ಕಳನ್ನು ಸೆ.10ರಿಂದಲೇ ಶಾಲೆಗೆ ಕಳುಹಿಸದಿರಲು ಪೋಷಕರು ತೀರ್ಮಾನಿಸಿದ್ದು, ಅಂದು ಶಾಲೆಯ ಬಳಿ ಪೋಷಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.


ಈ ಶಾಲೆಯಲ್ಲಿ 492 ಮಕ್ಕಳು ವಿದ್ಯಾರ್ಜನೆ ನಡೆಸುತ್ತಿದ್ದು, ಇಲ್ಲಿದ್ದ ಆಂಗ್ಲ ಭಾಷಾ ಶಿಕ್ಷಕರನ್ನು ಪೋಷಕರು ಅಥವಾ ಎಸ್‌ಡಿಎಂಸಿಯವರೊಂದಿಗೆ ಸಮಾಲೋಚನೆ ನಡೆಸದೇ ಅಂತರ್ ಜಿಲ್ಲಾ ನಿಯೋಜನೆ ಮಾಡಲಾಗಿದೆ. ಇಲ್ಲಿ ಈಗ 2 ಶಿಕ್ಷಕರ ಕೊರತೆಯಿದೆ. ಆದ್ದರಿಂದ ನಿಯೋಜನೆಗೊಂಡಿರುವ ಶಿಕ್ಷಕರು ಮರಳಿ ನಮ್ಮ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಹಾಗೂ ಪೋಷಕರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

LEAVE A REPLY

Please enter your comment!
Please enter your name here