ಮಕ್ಕಳು, ಮಹಿಳೆಯರ ಸಿದ್ದ ಉಡುಪುಗಳ ಮಳಿಗೆ ಫ್ಯಾಶನ್ ಝೋನ್ ಶುಭಾರಂಭ

0

ಪುತ್ತೂರು:ಕಳೆದ ಹಲವು ವರ್ಷಗಳಿಂದ ದರ್ಬೆಯಲ್ಲಿ ವ್ಯವಹರಿಸುತ್ತಿರುವ ಪುರುಷರ ಸಿದ್ದ ಉಡುಪುಗಳು ಮಳಿಗೆ ಫ್ಯಾಶನ್ ಝೋನ್‌ನ ಸಹ ಸಂಸ್ಥೆ ಮಕ್ಕಳ ಮತ್ತು ಮಹಿಳೆಯರ ಸಿದ್ದ ಉಡುಪುಗಳ ಮಳಿಗೆ ಫ್ಯಾಶನ್ ಝೋನ್ ಸೆ.9ರಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಕೇಶವಶ್ರೀ ಶಾಫಿಂಗ್ ಸೆಂಟರ್‌ನಲ್ಲಿ ಶುಭಾರಂಭಗೊಂಡಿತು.


ಮಳಿಗೆಯನ್ನು ಉದ್ಘಾಟಿಸಿದ ಅಶೋಕ್ ಕುಮಾರ್ ರೈ ಮಾತನಾಡಿ, ಜೀವನದಲ್ಲಿ ಯುವಕರು ಮುಂದೆ ಬರಬೇಕು. ಉದ್ಯಮದಲ್ಲಿ ಪಾಲುದಾರರಾಗಬೇಕು. ವಿದ್ಯಾಸಂಸ್ಥೆ ಬೆಳೆದಂತೆ ಉದ್ಯಮವೂ ಬೆಳೆಯಲಿದೆ. ಉದ್ಯಮ ಬೆಳೆದಂತೆ ಯುವಕರಿಗೆ ಉದ್ಯೋಗವೂ ಲಭಿಸಲಿದೆ. ಗ್ರಾಹಕರಿಗೆ ಉತ್ತಮ ಸ್ಪಂಧನೆ ನೀಡಿದಾಗ ಉದ್ಯಮ ಬೆಳೆಯಲಿದೆ ಎಂದರು. ಯುವಕರಿಂದ ಇನ್ನೊಂದು ದೊಡ್ಡ ಸಂಸ್ಥೆ ಉದ್ಘಾಟನೆಗೊಂಡಿದ್ದು ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.


ದೀಪ ಬೆಳಗಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಮಾತನಾಡಿ, ಉದ್ಯಮ ಎಂಬುದು ಮರವಿದ್ದಂತೆ. ಮರವನ್ನು ಬೆಳೆಸಿದಾಗ ಅದು ಹೆಮ್ಮರವಾಗಿ ಬೆಳೆದು ನೆರಳು ನೀಡುವಂತೆ ಗ್ರಾಹಕರು ವ್ಯಾಪಾರ ಮಾಡಿದಾಗ ಉದ್ಯಮವು ಮರದಂತೆ ಬೆಳೆದು ಉದ್ಯೋಗ ನೀಡಿದಾದ ಹಲವು ಮಂದಿಯ ಬಾಳಿಗೆ ನೆರಳಾಗುತ್ತದೆ. ಇಲ್ಲಿ ಪ್ರಾರಂಭಗೊಂಡ ಮಳಿಗೆ ರಾಜ್ಯ ಮಟ್ಟದಲ್ಲಿ ಬೆಳೆಯಲಿ. ಸಾವಿರಾರು ಮಂದಿಗೆ ನೆರಳು ನೀಡಲಿ ಎಂದರು.


ಮಾಜಿ ಶಾಸಕಿ ಶಕುಂತಳಾ ಟಿ. ಗ್ರಾಹಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣದ ಬಳಿಯಲ್ಲೇ ಮಳಿಗೆ ಪ್ರಾರಂಭಿಸಿದ್ದಾರೆ. ಮಳಿಗೆಯಲ್ಲಿ ಗ್ರಾಹಕರಿಗೆ ತೃಪ್ತಿದಾಯಕವಾಗುವ ರೀತಿಯಲ್ಲಿ ನಗುಮೊಗದ ಉತ್ತಮ ಸೇವೆ ನೀಡುವ ಮೂಲಕ ಹೆಸರು ಗಳಿಸಲಿ. ಹಲವು ಮಂದಿಗೆ ಉದ್ಯೋಗ ದೊರೆಯಲಿ ಎಂದರು.


ಹಿಂದು ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಪ್ರಧಾನಿಯವರ ಯೋಜನೆಯಂತೆ ಆತ್ಮನಿರ್ಬರ, ಸ್ವಾವಲಂಬಿ ಆಧಾರದಲ್ಲಿ ಯುವರಕ ತಂಡ ಎರಡನೇ ಮಳಿಗೆ ಪ್ರಾರಂಭಿಸಿದ್ದಾರೆ. ತಮ್ಮ ಸಾಧನೆಯ ಜೊತೆಗೆ ಗ್ರಾಹಕರ ನಂಬಿಕೆ ವಿಶ್ವಾಸ ಗಳಿಸಿ ಫ್ಯಾಶನ್ ಝೋನ್ ಗ್ರಾಹಕರ ಝೋನ್ ಆಗಲಿ ಎಂದರು.


ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಸ್ವ ಉದ್ಯೋಗದ ಮೂಲಕ ಯುವಕರ ಸಾಧನೆಯ ಪ್ರಯತ್ನದಲ್ಲಿ ಎರಡನೇ ಮಳಿಗೆ ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿ ಪ್ರಾರಂಭಗೊಂಡಿದೆ. ಯುವಕರ ಮೇಲೆ ಬಂದಾಗ ಅಭಿವೃದ್ಧಿ ಸಾಧ್ಯವಿದ್ದು ಅವರಿಗೆ ಸಹಕಾರ ನೀಡಬೇಕು ಎಂದರು.


ಉದ್ಯಮಿ, ವಿಜಯ ಸಾಮ್ರಾಟ್‌ನ ಅಧ್ಯಕ್ಷ ಸಹಜ್ ರೈ ಬಳೆಜ್ಜ ಮಾತನಾಡಿ, ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಪುತ್ತೂರಿನ ಹೃದಯ ಭಾಗದಲ್ಲಿ ಫ್ಯಾಶನ್ ಝೋನ್ ಎರಡನೇ ಮಳಿಗೆ ಉದ್ಘಾಟನೆಗೊಂಡಿದೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.


ಕಟ್ಟಡದ ಮ್ಹಾಲಕ ಅಜಿತ್ ನಾಯಕ್ ಮಾತನಾಡಿ, ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಯುವಕರ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಉದ್ಯಮಿ ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.


ಸನ್ಮಾನ:
ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿ ಹರೀಶ್ ಆರಿಕೋಡಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ವಿ.ಜೆ ವಿಖ್ಯಾತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಾಲುದಾರರಾದ ಸುನಿಲ್ ಹಾಗೂ ಮನೀಶ್ ಅತಿಥಿಗಳನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.


ಶೇ.20 ಡಿಸ್ಕೌಂಟ್
ಶುಭಾರಂಭದ ಅಂಗವಾಗಿ ಮಳಿಗೆಯಲ್ಲಿ ಸೆ.9ರಿಂದ ಪ್ರಾರಂಭಗೊಂಡು ಸೆ.11ರ ತನಕ ಮೆಗಾ ಸೆಲ್ ಆಯೋಜಿಸಲಾಗಿದ್ದು ಎಲ್ಲಾ ರೀತಿಯ ವಸ್ತ್ರಗಳ ಖರೀದಿಗೆ ಶೇ.20ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here