





ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ಆಶ್ರಯದಲ್ಲಿ ಜೈನ ಭವನದಲ್ಲಿ ಸೆ.8 ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.



ಯುವ ಸಂಗೀತ್ ಕಾರ್ಯಕ್ರಮ ನಡೆದು ಗಾಯನದಲ್ಲಿ ಸುಪ್ರೀತ, ವಯೊಲಿನ್ ನಲ್ಲಿ ಮಹತಿ, ಮೃದಂಗದಲ್ಲಿ ಪವನ್ ಕುಮಾರ್, ಬಳಿಕ ನಡೆದ ಸಂಗೀತ ಕಛೇರಿ ಕಾರ್ಯಕ್ರಮದಲ್ಲಿ ವಿದ್ಯಾನ್ ಜೆ.ಬಿ ಶ್ರುತಿಸಾಗರ್ ಚೆನ್ನೈರವರು ಕೊಳಲು ವಾದನವನ್ನು, ವಯೋಲಿನ್ ನಲ್ಲಿ ವಿದ್ವಾನ್ ಎಲ್.ರಾಮಕೃಷ್ಣನ್ ಚೆನ್ನೈ, ಮೃದಂಗಮ್ ನಲ್ಲಿ ವಿದ್ವಾನ್ ಎನ್.ಸಿ ಭಾರದ್ವಾಜ್ ಚೆನ್ನೈ, ಘಟಂನಲ್ಲಿ ವಿದ್ವಾನ್ ವಾಳಂಪಲ್ಲಿ ಕೃಷ್ಣಕುಮಾರ್ ರವರು ಮನರಂಜನೆ ನೀಡಿದರು. ನೂರಾರು ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಆಗಮಿಸಿ ಸಂಗೀತ ಕಛೇರಿಯ ಕಳೆಯನ್ನು ಹೆಚ್ಚಿಸಿದರು. ಮಹಾಬಲ ಲಲಿತ ಕಲಾ ಸಭಾದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು.













