ಪರ್ಲಡ್ಕ ವಿವೇಕಾನಂದ ಶಿಶುಮಂದಿರದಲ್ಲಿ ಶಿಕ್ಷಕರ ದಿನಾಚರಣೆ

0

ಪುತ್ತೂರು: ಶಿಶುಮಂದಿರದ ಮಕ್ಕಳಿಗೆ ಪಾಠಮಾಡಲು ಇಲ್ಲಿಯ ಮಾತಾಜಿಯವರಿಗೆ ತುಂಬಾ ತಾಳ್ಮೆ, ಸಹನೆ, ಕೌಶಲ್ಯ ಎಲ್ಲವೂ ಬೇಕು. ಸಣ್ಣ ಮಕ್ಕಳನ್ನು ತಿದ್ದಿ ತೀಡಿ ಅವರಿಗೆ ಶಿಕ್ಷಣವನ್ನು ನೀಡುವುದೆಂದರೆ ಒಂದು ಸವಾಲಿನ ಕೆಲಸ. ಅದನ್ನು ಶಿಶುಮಂದಿರದ ಮಾತಾಜಿಯವರು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದ್ದಾರೆಂದು ಹೇಳಲು ನಮಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದು ವಿವೇಕಾನಂದ ಶಿಶುಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್‌ರವರು ಹೇಳಿದರು.

ಅವರು ವಿವೇಕಾನಂದ ಶಿಶುಮಂದಿರದಲ್ಲಿ ಸೆ.5ರಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶಿಶುಮಂದಿರದ ಮಾತಾಜಿಯವರನ್ನು ಶ್ರೀಕೃಷ್ಣಲೋಕದ ಗೌರವಾಧ್ಯಕ್ಷ ರಾಜಿ ಬಲರಾಮ ಆರ್ಚಾರವರ ಅನುಪಸ್ಥಿತಿಯಲ್ಲಿ ಜಯಶ್ರೀ ರಾಜಗೋಪಾಲ ಭಟ್‌ರವರು ಹಾಗು ಮಾತೃಭಾರತಿಯ ಸದಸ್ಯರು ಮತ್ತು ಆಡಳಿತ ಮಂಡಳಿಯ ಸದಸ್ಯರು ಸೇರಿ ರಾಜ ಬಲರಾಮ ಆಚಾರ್ಯರವರ ಅಪೇಕ್ಷೆಯಂತೆ ಅವರು ವರ್ಷಂಪ್ರತಿ ನೀಡುತ್ತಾ ಬಂದಿರುವಂತೆ ಅವರು ಕೊಟ್ಟಂತಹ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಶಿಶುಮಂದಿರದ ಪಾಲಕರು, ಪುಟಾಣಿಗಳು ಹಾಗೂ ಆಡಳಿತ ಮಂಡಳಿಯ ಕಾರ್ಯದರ್ಶಿ ಅಕ್ಷಯ ಕುಮಾರ್, ಸದಸ್ಯರಾದ ಮಲ್ಲೇಶ್, ಅಶೋಕ್ ಬಲ್ನಾಡ್, ಚಂದ್ರಪ್ರಭಾ ಸತೀಶ್ ಮತ್ತು ಶ್ರೀಕೃಷ್ಣ ಲೋಕದ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಜೊತೆ ಕಾರ್ಯದರ್ಶಿ ರಮ್ಯಾ ಭಟ್, ಕೋಶಾಧಿಕಾರಿ ಕಿಶನ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here