Puttur ದರ್ಬೆಯಲ್ಲಿ ‘ಟ್ವೆಂಟಿ ಒನ್ ಬೈಟ್ಸ್’ ಕೆಫೆ ಶುಭಾರಂಭ : ‘ಗುಣಮಟ್ಟ ಚೆನ್ನಾಗಿದ್ದರೆ ಉದ್ಯಮದಲ್ಲಿ ಯಶಸ್ಸು ನಿಶ್ಚಿತ’ – ಅಶೋಕ್ ರೈ

0

ಪುತ್ತೂರು: ‘ಟ್ವೆಂಟಿ ಒನ್ ಬೈಟ್ಸ್’ ಕೆಫೆ ((Twenty One Bites Cafe)) ಸೆ. 9ರಂದು ದರ್ಬೆ (Darbe) ಸಂತ ಫಿಲೋಮಿನಾ ಕಾಲೇಜು ಸಮೀಪ ಶುಭಾರಂಭಗೊಂಡಿತು. ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್‌ರವರು ಕೆಫೆಯನ್ನು ಉದ್ಘಾಟಿಸಿ ದುವಾಶೀರ್ವಚನ ನೀಡಿ ಶುಭ ಹಾರೈಸಿದರು.

ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಪುತ್ತೂರು ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು ಅದಕ್ಕೆ ಪೂರಕವಾಗಿ ವಿವಿಧ ಮಳಿಗೆಗಳು, ರೆಸ್ಟೋರೆಂಟ್‌ಗಳಂತಹ ಉದ್ಯಮಗಳು ಇಲ್ಲಿ ಆರಂಭವಾಗುತ್ತಿದೆ ಇದು ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡುತ್ತಿದೆ’ ಎಂದು ಹೇಳಿದರು. ‘ಯಾವುದೇ ಉದ್ಯಮವಾಗಲೀ ನಮ್ಮ ಸೇವೆ, ಗುಣಮಟ್ಟ ಮತ್ತು ಶುಚಿತ್ವ ಇದ್ದಾಗ ಅದು ಯಶಸ್ಸು ಕಾಣುತ್ತದೆ, ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ವ್ಯತ್ಯಾಸ ಉಂಟಾಗಬಾರದು, ಉತ್ತಮ ಗುಣಮಟ್ಟದ ಐಟಂಗಳನ್ನು ಗ್ರಾಹಕರಿಗೆ ನೀಡಿದಾಗ ನಿಮ್ಮ ಕೆಫೆಯನ್ನು ಜನ ಹುಡುಕಿಕೊಂಡು ಬರುತ್ತಾರೆ’ ಎಂದು ಅವರು ಹೇಳಿದರು. ‘ಇಲ್ಲಿ ಶುಭಾರಂಭಗೊಂಡ ‘ಟ್ವೆಂಟಿ ಒನ್ ಬೈಟ್ಸ್ ಕೆಫೆಗೆ ಭವಿಷ್ಯವಿದೆ, ಶ್ರಮಪಟ್ಟು ದುಡಿದರೆ ಯಾವುದೇ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಬಹುದು, ಕೆಫೆಯ ಮಾಲಕರು ಸಂಪೂರ್ಣವಾಗಿ ತಮ್ಮನ್ನು ತಾವು ಈ ಉದ್ಯಮದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಖಚಿತ’ ಎಂದು ಶಾಸಕರು ಹೇಳಿದರು.

ಸೂಪರ್ ಟೇಸ್ಟ್ ಎಂದ ಶಾಸಕರು…

ಪುತ್ತೂರಿನ ಅಭಿವೃದ್ಧಿಗೆ ಮತ್ತೊಂದು ಗರಿ’ – ಎಂ. ಎಸ್. ಮುಹಮ್ಮದ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ, ‘ಉದ್ಯಮಗಳು ಹೆಚ್ಚಾದರೆ ಆ ಪ್ರದೇಶ, ಪೇಟೆ, ತಾಲೂಕು ಅಭಿವೃದ್ಧಿ ಹೊಂದುತ್ತದೆ, ಟ್ವೆಂಟಿ ಒನ್ ಬೈಟ್ಸ್ ಕೆಫೆ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿಗೆ ಮತ್ತೊ0ದು ಗರಿ ಸೇರಿಸಿದ್ದು ಇದು ಇಲ್ಲಿ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ’ ಎಂದು ಹೇಳಿದರು. ‘ಕೆಫೆಯಲ್ಲಿ ವಿವಿಧ ವೆರೈಟಿ ಐಟಂಗಳು, ಫ್ರೆಶ್ ಜ್ಯೂಸ್‌ಗಳು ಲಭ್ಯವಿದ್ದು ಗ್ರಾಹಕರ ಸಹಕಾರ ಇಲ್ಲಿ ಮುಖ್ಯವಾಗಿ ಬೇಕಾಗಿದೆ’ ಎಂದು ಅವರು ಹೇಳಿದರು.

ಶುಚಿ ಮತ್ತು ರುಚಿಗೆ ಆದ್ಯತೆ
ದರ್ಬೆಯಲ್ಲಿ ನಾವು ಪ್ರಾರಂಭಿಸಿರುವ ಟ್ವೆಂಟಿ ಒನ್ ಬೈಟ್ಸ್ ಕೆಫೆಯಲ್ಲಿ ಫ್ರೆಶ್ ಜ್ಯೂಸ್, ಬರ್ಗರ್, ಸ್ಯಾಂಡ್‌ವಿಚ್,  ಪಿಝಾ, ಕ್ಲಬ್ ಸ್ಯಾಂಡ್ವಿಚಸ್, ಪಾಸ್ತಾ, ಫ್ರೈಡ್ ರೈಸ್, ಮೋಮೋಸ್ ಸೇರಿದಂತೆ ಹಲವು ವೆರೈಟಿ ಐಟಂಗಳು ಲಭ್ಯವಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸ್ವಾದಿಷ್ಟಕರವಾದ ವಿವಿಧ ಬಗೆಯ ಐಟಂಗಳನ್ನು ನಾವು ನೀಡಲಿದ್ದೇವೆ. ಗುಣಮಟ್ಟದ ಐಟಂಗಳನ್ನು ಮಾತ್ರ ಗ್ರಾಹಕರಿಗೆ ನೀಡಲಿದ್ದು ಕೆಫೆಯಲ್ಲಿ ಶುಚಿ ಮತ್ತು ರುಚಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉತ್ತಮ ಸೇವೆ ಕೂಡಾ ನಮ್ಮ ಕೆಫೆಯಲ್ಲಿ ಲಭಿಸಲಿದ್ದು ಗ್ರಾಹಕ ಬಂಧುಗಳು ನಮ್ಮ ಕೆಫೆಗೆ ಭೇಟಿ ನೀಡಿ ಪ್ರೋತ್ಸಾಹ ನೀಡಬೇಕೆಂದು ಕೆಫೆಯ ಪಾಲುದಾರರು ತಿಳಿಸಿದ್ದಾರೆ.

ಪುತ್ತೂರು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ, ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ಅಝಾದ, ರಫೀಕ್ ದರ್ಬೆ, ಬೈತಡ್ಕ ಜುಮಾ ಮಸೀದಿಯ ಅಧ್ಯಕ್ಷ ಬಿ.ಪಿ ಇಸ್ಮಾಯಿಲ್ ಹಾಜಿ ಬೈತಡ್ಕ, ಬೆಂಗಳೂರು ಮುಸ್ಲಿಂ ಜಮಾಅತ್‌ನ ಕೋಶಾಧಿಕಾರಿ ಬಿ.ಪಿ ಅಬ್ದುಲ್ ಹಮೀದ್ ಹಾಜಿ ಬೈತಡ್ಕ, ಬಿ.ಪಿ ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ, ಅಬ್ದುಲ್ಲ ಕುಂಞಿ ಮುಸ್ಲಿಯಾರ್ ಬೈತಡ್ಕ, ಉಮರ್ ಸಖಾಫಿ, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ನಾಯಕ ಝೈನುದ್ದೀನ್ ಹಾಜಿ ಮುಕ್ವೆ, ನಗರಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಉಮರ್ ಹಾಜಿ ಮುಕ್ವೆ, ಇಂಜಿನಿಯರ್ ಹಾಜಿ ಆಲಿಕುಂಞಿ ಕೊರಿಂಗಿಲ, ಯುಕೆ ಉಸ್ಮಾನ್ ಹಾಜಿ, ಯುಕೆ ಉಮರಬ್ಬ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ ವ್ಯವಸ್ಥಾಪಕ ಮುಸ್ತಫಾ ಸಅದಿಯವರು ಅತಿಥಿಗಳನ್ನು ಸ್ವಾಗತಿಸಿದರು. ಟ್ವೆಂಟಿ ಒನ್ ಬೈಟ್ಸ್ ಕೆಫೆಯ ಮಾಲಕರಾದ ಮೊಹಮ್ಮದ್ ಫವಾಝ್, ಮೊಹಮ್ಮದ್ ಸುಹೈಲ್ ಹಾಗೂ ಅಹ್ಮದ್ ಸಯೀದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here