ತ್ರೋಬಾಲ್ ಪಂದ್ಯಾಟ- ಇಂದ್ರಪ್ರಸ್ಥ ವಿದ್ಯಾಲಯದ 14ರ ವಯೋಮಾನದ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ

0

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸರ್ವೋದಯ ವಿದ್ಯಾಸಂಸ್ಥೆಗಳು ಸುಳ್ಯಪದವು ಇಲ್ಲಿ ಸೆಪ್ಟಂಬರ್ 9 ರಂದು ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

14 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 7ನೇ ತರಗತಿಯ ಶಿಶಿರ್ ಜೆ. ಸಾಲ್ಯಾನ್, ಮುಹಮ್ಮದ್ ಇರಾಝ್, ಸುಜಿತ್, ಸ್ವರ್ಣೇಶ್, ಆಯುಶ್ ಡಿ. ಪೂಜಾರಿ, ವಚನ್ ಕನ್ಯಾನ, ನಿಕೇತನ್ ಸಿ. ಟಿ, ಮೊಹಮ್ಮದ್ ಅಫಾಮ್, ನಿಶ್ವಲ್ ಕೆ. ವಿ, ದಕ್ಷ್, ಮೊಹಮ್ಮದ್ ಮರ್ಝುಕ್, ಮೊಹಮ್ಮದ್ ರೈಫ್, ಕೃಷ್ಣಪ್ರಸಾದ್ ಪ್ರಭು ಭಾಗವಹಿಸಿರುತ್ತಾರೆ. ಶಿಶಿರ್ ಜೆ. ಸಾಲ್ಯಾನ್ ಸವ್ಯಸಾಚಿ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯರಾದ ವಿದ್ಯಾ ಮತ್ತು ಶ್ರೀರಂಜಿನಿ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here