ಮಾಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾಗಿ ನಾರಾಯಣ ಆಚಾರ್ಯ ಮಳಿ

0

ಕಾವು: ಮಾಡ್ನೂರು ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತ ನಾರಾಯಣ ಆಚಾರ್ಯ ಮಳಿಯವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರುರವರು ಪದಾಧಿಕಾರಿಗಳ ಘೋಷಣೆ ಮಾಡಿದರು.


ನಾರಾಯಣ ಆಚಾರ್ಯ ಮಳಿರವರ ಪರಿಚಯ:
ಮಾಡ್ನೂರು ಗ್ರಾಮದ ಮಳಿ ನಿವಾಸಿ ಜನಾರ್ಧನ ಆಚಾರ್ಯ ಮತ್ತು ಪ್ರೇಮಾವತಿಯವರ ಪುತ್ರನಾಗಿರುವ ನಾರಾಯಣ ಆಚಾರ್ಯ ಮಳಿಯವರು ಬಿ.ಎ ಪದವಿಧರರಾಗಿದ್ದು, ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ 4ನೇ ಡ್ಯಾನ್ ಪಡೆದಿರುತ್ತಾರೆ.


ಕರಾಟೆ ಶಿಕ್ಷಕ:
ವೃತ್ತಿಯಲ್ಲಿ ಕರಾಟೆ ಶಿಕ್ಷಕರಾಗಿರುವ ನಾರಾಯಣ ಆಚಾರ್ಯ ಮಳಿಯವರು ತಾಲೂಕಿನ 18 ಶಾಲೆಗಳಲ್ಲಿ ಸುಮಾರು 800ಕ್ಕೂ ಅಧಿಕ ಮಕ್ಕಳಿಗೆ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ.


ಆರ್‌ಎಸ್‌ಎಸ್ ಕಾರ್ಯಕರ್ತ:
ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿದ್ದ ನಾರಾಯಣ ಆಚಾರ್ಯ ಮಳಿಯವರು ಆರ್‌ಎಸ್‌ಎಸ್‌ನಲ್ಲಿ ಪ್ರಥಮ ವರ್ಷದ ಓಟಿಸಿಯನ್ನು ಪೂರೈಸಿರುತ್ತಾರೆ.


ಅಯೋಧ್ಯೆ ಕರಸೇವಕ:
ವಿಶ್ವಹಿಂದೂ ಪರಿಷತ್ ಮತ್ತು ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ನಾರಾಯಣ ಆಚಾರ್ಯ ಮಳಿಯವರು 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಕರಸೇವಕರಾಗಿ ಸಕ್ರಿಯವಾಗಿ ಭಾಗವಹಿಸಿದ್ದರು.


ಬಿಜೆಪಿಯ ಹಿರಿಯ ಕಾರ್ಯಕರ್ತ:
ಸುಮಾರು 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿರುವ ನಾರಾಯಣ ಆಚಾರ್ಯ ಮಳಿಯವರು ಹಲವು ಬಾರಿ ತನ್ನ ವಾರ್ಡ್‌ನಲ್ಲು ಬೂತ್ ಅಧ್ಯಕ್ಷನಾಗಿ, ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿ ಹಿರಿಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.


ಧಾರ್ಮಿಕ ಮತ್ತು ಸಾಮಾಜಿಕ ಸೇವೆ:
ಕಾವು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಕಳೆದ 41 ವರ್ಷಗಳಿಂದ ಸದಸ್ಯನಾಗಿರುವ ನಾರಾಯಣ ಆಚಾರ್ಯರವರು ಶ್ರೀ ಮಹಾಗಣಪತಿ ಭಜನಾ ಸಂಘದ ಸದಸ್ಯನಾಗಿಯೂ ಸಕ್ರಿಯರಾಗಿದ್ದಾರೆ. ಕಾವು ಗೆಳೆಯವರ ಬಳಗದಲ್ಲಿ ಸುಮಾರು 35 ವರ್ಷಗಳಿಂದ ಸಕ್ರಿಯ ಸದಸ್ಯನಾಗಿ ಪ್ರಸ್ತುತ ಗೌರವಾಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಕಾವು ಜಾತ್ರೋತ್ಸವದ ಪ್ರಥಮ ದಿನದಂದು ಗೆಳೆಯರ ಬಳಗದಿಂದ ತುಳು ನಾಟಕ, ಅಷ್ಠಮಿಯ ಕ್ರೀಡಾಕೂಟದ ಸಂದರ್ಭದಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ ಆಯೋಜನೆಯಲ್ಲಿ ನಾರಾಯಣ ಆಚಾರ್ಯರವರು ಮುಂದಾಳತ್ವ ವಹಿಸುತ್ತಿದ್ದಾರೆ.


ಕೂಡುವಳಿಕೆ ಮೊಕ್ತೇಸರರು:
ನಾರಾಯಣ ಆಚಾರ್ಯರವರು ಕಾವು ವಿಶ್ವಕರ್ಮ ಕೂಡುವಳಿಕೆಯ ಮೊಕ್ತೇಸರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here