ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ, ಆಕರ್ಷಕ ಶೋಭಾಯಾತ್ರೆ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ರಾಮಗಿರಿ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆದ 43 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.9 ರಂದು ಶ್ರೀ ಗಣೇಶ ವಿಗ್ರಹದ ಜಲಸ್ಥಂಭನದೊಂದಿಗೆ ಸಂಪನ್ನಗೊಂಡಿತು. ಸೆ.7ರಿಂದ 9ರ ತನಕ ಮೂರು ದಿನಗಳ ಕಾಲ ಭಜನಾ ಮಂದಿರದ ಸಭಾ ಭವನದಲ್ಲಿರುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶ ಪೀಠದಲ್ಲಿ ಅರ್ಚಕ ಪ್ರಕಾಶ ನಕ್ಷತ್ರಿತ್ತಾಯ ನೇತೃತ್ವದಲ್ಲಿ ಪೂಜೆ ಪುನಸ್ಕಾರಗಳನ್ನು ಸ್ವೀಕರಿಸಿದ ಗಣೇಶನ ಜಲಸ್ಥಂಭನದ ಆಕರ್ಷಕ ಮೆರವಣಿಗೆ ಸೆ.9 ರಂದು ರಾತ್ರಿ ನಡೆಯಿತು.

ಸಂಜೆ ಭಜನಾ ಮಂದಿರದಿಂದ ಹೊರಟ ಶ್ರೀ ಗಣೇಶ ವಿಗ್ರಹದ ಮರೆವಣಿಗೆಯು ಕುಂಬ್ರ ಅಶ್ವತ್ಥಕಟ್ಟೆಯ ಬಳಿ ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶ ವಿಗ್ರಹದ ಜೊತೆ ಸೇರಿ ಎರಡು ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರಿಯಡ್ಕ ಗ್ರಾಮದ ಶೇಖಮಲೆ ಪುಣ್ಯನದಿಯಲ್ಲಿ ವೈಧಿಕ ವಿಧಿ ವಿಧಾನಗಳೊಂದಿಗೆ ಜಲಸ್ಥಂಭನ ಮಾಡಲಾಯಿತು.


ಶ್ರೀ ಗಣೇಶ ವಿಗ್ರಹದ ಆಕರ್ಷಕ ಶೋಭಾಯಾತ್ರೆ
ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶನ ವಿಗ್ರಹದ ಮೆರವಣಿಗೆಯು ಆಕರ್ಷವಾಗಿ ನಡೆಯಿತು. ಮೆರವಣಿಗೆಯಲ್ಲಿ ವಿಶೇಷವಾಗಿ ಭಾರತಮಾತೆಯ ಟ್ಯಾಬ್ಲೋ, ಕುಂಬ್ರ ಶ್ರೀರಾಮ ಭಜನಾ ತಂಡದವರಿಂದ ಕುಣಿತ ಭಜನೆ ನೋಡುಗರನ್ನು ಭಕ್ತಿಸಾಗರದಲ್ಲಿ ಮುಳುಗಿಸಿತು. ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕರಿಂದ ಕುಂಬ್ರ ಕಟ್ಟೆಯ ಬಳಿ ಡಿಜೆ ಏರ್ಪಡಿಸಲಾಗಿತ್ತು. ಸಾವಿರಕ್ಕೂ ಅಧಿಕ ಮಂದಿ ಶೋಭಾಯತ್ರೆಯಲ್ಲಿ ಪಾಲ್ಗೊಂಡು ಶ್ರೀಗಣೇಶ ದೇವರ ಕೃಪೆಗೆ ಪಾತ್ರರಾದರು.


4 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ
ಮೂರು ದಿನಗಳ ಕಾಲ ಭಕ್ತಾಧಿಗಳಿಗೆ ವಿಶೇಷ ಅನ್ನಸಂತರ್ಪಣೆ ನಡೆಯಿತು. ಪ್ರತಿದಿನ ಮಧ್ಯಾಹ್ನ ಪಾಯಸದೊಂದಿಗೆ ಅನ್ನಪ್ರಸಾದವನ್ನು ಭಕ್ತರು ಸ್ವೀಕರಿಸಿದರು. ಮೂರು ದಿನಗಳಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.


ಕುಂಬ್ರ ಶ್ರೀಗಣೇಶನ ದರ್ಶನ ಪಡೆದ ಸಂಸದ,ಶಾಸಕರು,ಗಣ್ಯರು
ಕುಂಬ್ರ ಶ್ರೀ ಗಣೇಶೋತ್ಸವಕ್ಕೆ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರಿನ ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಜಿಲ್ಲಾಧ್ಯಕ್ಷ ಪ್ರಸನ್ನ ಮಾರ್ತ, ವಿದ್ಯಾ ಗೌರಿ, ಕೃಷ್ಣ ಪ್ರಸಾದ್ ಆಳ್ವ ಸೇರಿದಂತೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು ಶ್ರೀ ಗಣೇಶನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಪ್ರಧಾನ ಕಾರ್ಯದರ್ಶಿ ನೇಮರಾಜ ರೈ ಕುರಿಕ್ಕಾರ, ಉಪಾಧ್ಯಕ್ಷ ರತನ್ ರೈ ಕುಂಬ್ರ, ಕೋಶಾಧಿಕಾರಿ ರಾಜ್‌ಪ್ರಕಾಶ್ ರೈ ಕುಂಬ್ರ, ಜತೆ ಕಾರ್ಯದಶಿ ಆಶಾಲತಾ ಎಂ.ರೈ, ಗೌರವ ಲೆಕ್ಕಪರಿಶೋಧಕ ಚಂದ್ರಕಾಂತ ಶಾಂತಿವನ, ಶ್ರೀಗಣೇಶೋತ್ಸವ ಸಮಿತಿ ಸಂಚಾಲಕ ರಾಜೇಶ್ ರೈ ಪರ್ಪುಂಜ, ಸಲಹಾ ಸಮಿತಿಯ ಕುಂಬ್ರ ದುರ್ಗಾಪ್ರಸಾದ್ ರೈ, ಸುಂದರ ರೈ ಮಂದಾರ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಂಚಾಲಕ ಪದ್ಮನಾಭ ರೈ ಅರೆಪ್ಪಾಡಿ, ಅರ್ಧ ಏಕಾಹ ಭಜನೆಯ ಅರುಣ್ ರೈ ಬಿಜಳ, ಕನ್ಯಾ ಸಂಕ್ರಮಣದ ಉಮೇಶ್ ಕುಮಾರ್ ಬರಮೇಲು, ಶ್ರೀಕೃಷ್ಣ ಜನ್ಮಾಷ್ಠಮಿಯ ಉದಯ ಮಡಿವಾಳ, ಯಕ್ಷಗಾನ ಸಂಚಾಲಕ ಅಂಕಿತ್ ರೈ ಕುಯ್ಯಾರು, ಆಯುಧ ಪೂಜೆಯ ಚಿರಾಗ್ ರೈ ಬೆದ್ರುಮಾರ್,ಕಾರ್ಯಕಾರಿ ಸಮಿತಿಯ ಎಸ್.ಮಾಧವ ರೈ ಕುಂಬ್ರ, ಪುರಂದರ ಶೆಟ್ಟಿ ಮುಡಾಲ, ವಿಶ್ವನಾಥ ರೈ ಕೋಡಿಬೈಲು,ಪುರಂದರ ರೈ ಕುಯ್ಯಾರು, ಮೇಘರಾಜ ರೈ ಮುಡಾಲ, ಆದರ್ಶ ಶೆಟ್ಟಿ ನಿರಾಲ, ರಾಜ್‌ಮೋಹನ್ ರೈ ನಿರಾಳ, ದಿವಾಕರ ಶೆಟ್ಟಿ ಕುಂಬ್ರ, ಜಗನ್ನಾಥ ಪೂಜಾರಿ ಮುಡಾಲ, ಸಂದೇಶ್ ಶೆಟ್ಟಿ ಕುಂಬ್ರ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದಲ್ಲದೆ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ರೇಖಾ, ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ ಮುಡಾಲ,ಶಾರದಾ, ಸುಂದರಿ, ಮಾಜಿ ಸದಸ್ಯೆ ಉಷಾ ನಾರಾಯಣ್, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಸೇರಿದಂತೆ ಹಲವು ಮಂದಿ ಉಪಸ್ಥಿತಿದ್ದರು.

LEAVE A REPLY

Please enter your comment!
Please enter your name here