ಮಹಾಲಿಂಗೇಶ್ವರ ದೇವಸ್ಥಾನ ವಠಾರದ 58ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನ

0

ವೈಭವದ ಶೋಭಾಯಾತ್ರೆ,ಸ್ತಬ್ಧಚಿತ್ರಗಳ ವಿಶೇಷ ಆಕರ್ಷಣೆ | ನೃತ್ಯ ಭಜನೆ | ಸುಡುಮದ್ದು ಪ್ರದರ್ಶನ

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ ಪುತ್ತೂರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸೆ.7ರಿಂದ ನಾಲ್ಕು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ 58ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.10ರಂದು ರಾತ್ರಿ ಶ್ರೀ ಗಣೇಶನ ವಿಗ್ರಹದ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಶೋಭಾಯಾತ್ರೆಗೆ ಹಲವು ಆಕರ್ಷಕ ಸ್ತಬ್ದ ಚಿತ್ರಗಳು, ಕುಣಿತ ಭಜನೆ, ಗೊಂಬೆ ಕುಣಿತ ಮೆರುಗು ನೀಡಿವೆ.


ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಿಂದ ಶೋಭಾಯಾತ್ರೆಯು ಹೊರಡುವ ಮೊದಲು ಸಮಿತಿಯ ಪ್ರಮುಖರು ದೇವಾಲಯದ ಗಣಪತಿ ಗುಡಿಯಲ್ಲಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಸತ್ಯಧರ್ಮ ನಡೆಯಲ್ಲಿ ಶೋಭಾಯಾತ್ರೆಯು ನಿರ್ವಿಘ್ನವಾಗಿ ನಡೆಯುವಂತೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಗುರುತಂತ್ರಿಯವರು ಶ್ರೀ ಗಣೇಶನ ವಿಗ್ರಹಕ್ಕೆ ಮಂಗಳಾರತಿ ಮಾಡಿ, ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಮಚಂದ್ರ ಕಾಮತ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ನುಳಿಯಾಲು, ವಿಶ್ವನಾಥ ಗೌಡ, ಸಹಜ್ ರೈ ಬಳಜ್ಜ, ಸುಧಿರ್ ಶೆಟ್ಟಿ, ಕೋಶಾಽಕಾರಿ
ಶ್ರೀನಿವಾಸ್ ಮೂಲ್ಯ, ಜೊತೆ ಕಾರ್ಯದರ್ಶಿ ನೀಲಂತ್, ಚಂದ್ರಶೇಖರ್ ಸಹಿತ ಹಲವಾರು ಪ್ರಮುಖರು ತೆಂಗಿನ ಕಾಯಿ ಒಡೆದರು. ಗಣಪತಿ ವಿಗ್ರಹ ಹೊತ್ತ ಮೂಷಿಕ ವಾಹನದಲ್ಲಿ ದಯಾನಂದ ಅವರು ಚಾಲಕರಾಗಿ ಸಹಕರಿಸಿದರು.


ಈ ಸಂದರ್ಭದಲ್ಲಿ ಗಣೇಶನ ವಿಗ್ರಹ ರಚನೆ ಮಾಡಿದ ಶ್ರೀನಿವಾಸ್ ಪೈ, ಮೂಷಿಕವಾಹನ ರಥವನ್ನು ಹೂವಿನಿಂದ ಅಲಂಕರಿಸಿದ ಸುರೇಂದ್ರ ಅಚಾರ್ಯ, ಪ್ರಸಾದ ಪ್ಯಾಕ್, ಅನ್ನಪ್ರಸಾದ ವಿತರಣೆ ಸಹಿತ ಹಲವಾರು ಕಾರ್ಯದಲ್ಲಿ ಹಗಲಿರುಳು ದುಡಿದವರಿಗೆ ತಂತ್ರಿಗಳು ಪ್ರಸಾದ ನೀಡಿದರು.


ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ, ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪುತ್ತೂರು ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಸಂಘಟನಾ ಕಾರ್ಯದರ್ಶಿ ರಮೇಶ್ ಮುಂಡೂರು, ಶೇಖರ್ ಬ್ರಹ್ಮನಗರ, ಗೌರವ ಸಲಹೆಗಾರರಾದ ರಾಜೇಶ್ ಬನ್ನೂರು, ಭಾಮಿ ಜಗದೀಶ್ ಶೆಣೈ, ಚಂದ್ರಶೇಖರ್ ಪರ್ಲಡ್ಕ, ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ್ ಆಚಾರ್ಯ, ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ಕಿರಣ್ ಶಂಕರ್ ಮಲ್ಯ, ಆನಂದ ನೆಕ್ಕರೆ, ಚಂದ್ರಶೇಖರ್ ಎಸ್, ಉದಯ ಹೆಚ್, ಶ್ರೀಧರ್ ಪಟ್ಲ, ದಿನೇಶ್ ಪಂಜಿಗ, ಅಜಿತ್ ರೈ ಹೊಸಮನೆ, ರೂಪೇಶ್ ಕೊಂಬೆಟ್ಟು, ಶೇಖರ್ ಬನ್ನೂರು, ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ಜಯಶ್ರೀ ಎಸ್ ಶೆಟ್ಟಿ, ಗೌರಿ ಬನ್ನೂರು, ಗೋಪಾಲ್ ನಾಯ್ಕ, ಚಂದ್ರಶೇಖರ್ ಪಿ, ಗೋಪಾಲ ನಾಕ್, ಸಚಿನ್ ಶೆಣೈ, ಕರುಣಾಕರ್ ಶೆಟ್ಟಿ, ಉದಯ ಆದರ್ಶ, ನಾರಾಯಣ ಆದರ್ಶ, ನಿತಿನ್ ಆದರ್ಶ, ಶ್ರೀಕಾಂತ್ ಕಂಬಳಕೋಟಿ, ಅಶೋಕ್ ಬ್ರಹ್ಮನಗರ, ಪವನ್ ಕುಮಾರ್, ವಿಶ್ವನಾಥ ಕುಲಾಲ್, ನ್ಯಾಯವಾದಿ ಮಾಧವ ಪೂಜಾರಿ, ಜಯಂತಿ ನಾಯಕ್, ಸ್ಯಾಕ್ಸಾಪೋನ್ ವಾದಕ ಪಿ.ಕೆ.ಗಣೇಶ್, ನಾಗೇಂದ್ರ ಬಾಳಿಗ, ಗಣೇಶ್ ನೈತ್ತಾಡಿ, ಪ್ರಶಾಂತ್ ಕೆಮ್ಮಾಯಿ, ನಾಗೇಶ್ ಟಿ.ಎಸ್, ಯುವರಾಜ್ ಪೆರಿಯತ್ತೋಡಿ ಈ ಸಂದರ್ಭ ಉಪಸ್ಥಿತರಿದ್ದರು. ಶೋಭಾಯಾತ್ರೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವಾರು ಮಂದಿ ಸೇರಿಕೊಂಡರು.
ಶ್ರೀ ಗಣೇಶನ ವಿಗ್ರಹವನ್ನು ಹೊತ್ತ ಮೂಷಿಕ ರಥವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಹೊರಟು, ರೈಲ್ವೇ ನಿಲ್ದಾಣ ರಸ್ತೆಯಾಗಿ ಹಾರಾಡಿಯಿಂದ ಬೊಳುವಾರಿಗೆ ತೆರಳಿ ಅಲ್ಲಿಂದ ವೈವಿಧ್ಯಮಯ ಸ್ತಬ್ದಚಿತ್ರಗಳೊಂದಿಗೆ ಅದ್ಧೂರಿಯ ಶೋಭಾಯಾತ್ರೆ ಪ್ರಾರಂಭಗೊಂಡು ಮುಖ್ಯರಸ್ತೆಯಾಗಿ ದರ್ಬೆಗೆ ತೆರಳಿ ಅಲ್ಲಿಂದ ಪರ್ಲಡ್ಕ, ಎಂ.ಟಿ.ರಸ್ತೆ, ಕೋರ್ಟ್‌ರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿಯ ಬಳಿಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರು ಭಾಗದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿರುವ ಕೆರೆಯಲ್ಲಿಗೆ ತೆರಳಿ ಅಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ತಂಭ ಮಾಡಲಾಯಿತು.

10ಕ್ಕೂ ಮಿಕ್ಕಿ ವೈವಿಧ್ಯಮಯ ಸ್ತಬ್ಧ ಚಿತ್ರ
ಶೋಭಾಯಾತ್ರೆಯಲ್ಲಿ ಕಣ್ಮನ ಸೆಳೆಯುವ 10ಕ್ಕೂ ಮಿಕ್ಕಿ ವೈವಿಧ್ಯಮಯ ಸ್ತಬ್ಧ ಚಿತ್ರಗಳು ಆಕರ್ಷಣೀಯವಾಗಿತ್ತು. ರಾಜ್ಯಪ್ರಶಸ್ತಿ ವಿಜೇತ ಪಿ.ಕೆ ಗಣೇಶ್ ಅವರ ನೇತೃತ್ವದಲ್ಲಿ ಸ್ಯಾಕ್ಸೋಪೋನ್ ವಾದನ ತಂಡ ಶ್ರೀ ಗಣೇಶ ವಿಗ್ರಹದ ಜೊತೆ ಸಾಗಿತ್ತು. ಚೆಂಡೆ ನೃತ್ಯದ ಜೊತೆ ಲೈವ್ ಆಗಿ ವಯೋಲಿನ್ ಸಂಗೀತ ನೃತ್ಯ, ನೃತ್ಯ ಭಜನೆ, ಯುವಕರ ನೃತ್ಯ, ವಿವಿಧ ಧಾರ್ಮಿಕ-ಪೌರಾಣಿಕ ಹಿನ್ನೆಲೆಯ ಕಥೆಯನ್ನು ಸಾರುವ ಸ್ತಬ್ದ ಚಿತ್ರಗಳು ಶೋಭಾಯಾತ್ರೆಗೆ ಮೆರುಗು ನೀಡಿತ್ತು. ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ದಾರಿಯುದ್ದಕ್ಕೂ ಅಲ್ಲಲ್ಲಿ ಜನ ಸಾಲು ಸಾಲಾಗಿ ನಿಂತು ಶೋಭಾಯಾತ್ರೆಯ ದೃಶ್ಯಗಳನ್ನು ಕಣ್ತುಂಬಿಸಿಕೊಂಡರು. ಅಲ್ಲಲ್ಲಿ ವಿಶೇಷ ಸುಡುಮದ್ದು ಪ್ರದರ್ಶನವೂ ನಡೆಯಿತು.

4 ದಿನ 16 ತಂಡಗಳಿಂದ ಭಜನೆ
ಶ್ರೀ ಗಣೇಶೋತ್ಸವ ಸಭಾ ವೇದಿಕೆಯಲ್ಲಿ ನಿತ್ಯ ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದ್ದು, ಸುಮಾರು 16 ಭಜನಾ ತಂಡಗಳು ಭಜನಾ ಕಾರ್ಯಕ್ರಮ ನೀಡಿದರು. ವಜ್ರಮಾತಾ ಮಹಿಳಾ ಭಜನಾ ತಂಡ, ಸಿಂಪಲ್ ಮೆಲೋಡೀಸ್ ಪುತ್ತೂರು, ಮುತ್ತು ಮಾರಿಯಮ್ಮ ಶ್ರೀ ರಾಮಕೃಷ್ಣ ಭಜನಾ ಮಂಡಳಿ ಅರಿಯಡ್ಕ, ಬೆಟ್ಟಂಪಾಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿಯಿಂದ ಕುಣಿತ ಭಜನೆ, ಮಿತ್ರ ಸಮಾಜ ಬೊಳುವಾರು, ಶ್ರೀ ಲಕ್ಷ್ಮೀ ವೆಂಕಟರಮಣ ಭಜಕ ವೃಂದ ಪುತ್ತೂರು, ಶಿವಪಾರ್ವತಿ ಭಜನಾ ಮಂಡಳಿ ಬನ್ನೂರು, ಶ್ರೀ ಲಕ್ಷ್ಮೀವೆಂಕಟರಮಣ ಮಹಿಳಾ ಭಜನಾ ಮಂಡಳಿ ಪುತ್ತೂರು, ಬಲ್ನಾಡು ಶ್ರೀ ಉಳ್ಳಾಲ್ತಿ ಭಜನಾ ತಂಡ, ಈಶಪ್ರಿಯ ಭಜನಾ ಮಂಡಳಿ ಪುತ್ತೂರು, ನಟವರ ಸಂಗೀತ ನೃತ್ಯ ತಂಡ ಉಪ್ಪಿನಂಗಡಿ, ಹರಿಣಿ ಗೌಡ ತಂಡ, ವಿಶ್ವಹಿಂದೂ ಪರಿಷದ್ ಮಾತೃಮಂಡಳಿ ತಂಡ, ಉಪ್ಪಿನಂಗಡಿ ಶಾರದಾ ಭಜನಾ ಮಂಡಳಿ ತಂಡ, ಶ್ರೀ ವೈಷ್ಣವಿ ವೈದೇಹಿ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here