ಗಲ್ಫ್ ರಾಷ್ಟ್ರಗಳಲ್ಲಿ ಲುಲು ಹೈಪರ್ ಮಾರ್ಕೆಟ್‌ನಲ್ಲಿ ಸಾವಿರಾರು ಉದ್ಯೋಗವಕಾಶ-ಸೆ.23-25:ಮಂಗಳೂರಿನಲ್ಲಿ ಲುಲು ಗ್ರೂಪ್‌ರವರಿಂದ ಸಂದರ್ಶನ ಪ್ರಕ್ರಿಯೆ

0

ಪುತ್ತೂರು: ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಹಾಗೂ ಏಷ್ಯಾದ ಅತೀ ದೊಡ್ಡ ಹೈಪರ್ ಮಾರ್ಕೆಟ್ ಸಂಸ್ಥೆಯಾಗಿರುವ ಲುಲು ಇಂಟರ್‌ನ್ಯಾಷನಲ್ ಸಂಸ್ಥೆಯು ಗಲ್ಫ್ ರಾಷ್ಟ್ರಗಳಾದ ದುಬೈ, ಅಬುದಾಬಿ, ಕುವೈಟ್, ಮಸ್ಕತ್, ಬಹರೈನ್, ಸೌದಿ ಅರೇಬಿಯಾ ಇಲ್ಲಿನ ಲುಲು ಹೈಪರ್ ಮಾರ್ಕೆಟ್‌ನಲ್ಲಿ ಉದ್ಯೋಗವಕಾಶ ಹೊಂದಿದ್ದು, ಮಂಗಳೂರಿನ ವಾಲೆನ್ಸಿಯಾದಲ್ಲಿನ ಫೆರ್ನಾಂಡೀಸ್ ಅಸೋಸಿಯೇಟ್ಸ್ ಗ್ರೂಪ್‌ನ ಕಛೇರಿಯಲ್ಲಿ ಯುವಕ-ಯುವತಿಯರಿಗೆ ಸೆ.23-25ರಂದು ಬೆಳಿಗ್ಗೆ ಸಂದರ್ಶನ ನಡೆಯಲಿದೆ.


ಈಗಾಗಲೇ ಫೆರ್ನಾಂಡೀಸ್ ಅಸೋಸಿಯೇಟ್ಸ್ ಸಂಸ್ಥೆಯು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ-ವಿಟ್ಲ, ಕಡಬ ತಾಲೂಕಿನಿಂದ ಸುಮಾರು 300ಕ್ಕೂ ಮಿಕ್ಕಿ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿನ ಲುಲು ಹೈಪರ್ ಮಾರ್ಕೆಟ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ. ಇದೀಗ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ಬೇಡಿಕೆಯಿದ್ದು ಯುವಕ-ಯುವತಿಯರಿಗೆ ಉದ್ಯೋಗವಕಾಶಕ್ಕಾಗಿ ಫೆರ್ನಾಂಡೀಸ್ ಗ್ರೂಪ್ ಹಾತೊರೆಯುತ್ತಿದೆ. ಕುವೈಟ್, ಯುಎಇ, ಕತಾರ್, ಬಹರೈನ್, ಮಸ್ಕತ್, ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳನ್ನು ಒಳಗೊಂಡಂತೆ ಏಷ್ಯಾದ್ಯಂತ ಇರುವ ಲುಲು ಸಂಸ್ಥೆ ಪ್ರಮುಖ ರಿಟೇಲ್ ಉದ್ಯಮ ಸಂಸ್ಥೆಯಾಗಿದೆ. ಸೇಲ್ಸ್, ಕೌಂಟರ್ ಸೇಲ್ಸ್, ಮತ್ತು ಕ್ಯಾಶಿಯರ್ ಜೊತೆಗೆ ವಿವಿಧ ಹುದ್ದೆಗಳು ಸಂಸ್ಥೆಯಲ್ಲಿದೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನೌಕರರಾಗಿ ಅನುಭವವಿರುವ ವೃತ್ತಿಪರರು ಮತ್ತು ಅನುಭವವಿಲ್ಲದವರು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಕನಿಷ್ಟ ವಿದ್ಯಾರ್ಹತೆ ಎಸೆಸ್ಸೆಲ್ಸಿ. ಹುದ್ದೆಗಳಿಗೆ ವೇತನ ಶ್ರೇಣಿಯು 1200 ಯುಎಇ ಧಿರಾಮ್ ಗಳಿಂದ 1400 ದಿರಾಮ್ ತನಕ ಮತ್ತು 200 ದಿರಾಮ್ ಆಹಾರ ಭತ್ಯೆ ದೊರೆಯಲಿದೆ. ವಸತಿ, ವೀಸಾ, ವಿಮಾನ ಟಿಕೆಟ್ ವ್ಯವಸ್ಥೆಗಳನ್ನು ಸಂಸ್ಥೆಯು ನೋಡಿಕೊಳ್ಳುತ್ತಿದ್ದು ಸಾವಿರಾರು ಉದ್ಯೋಗವಕಾಶಗಳಿವೆ. ಆಭ್ಯರ್ಥಿಗಳು 20 ರಿಂದ 28 ವರ್ಷದವರಾಗಿದ್ದು ಆಂಗ್ಲ/ಹಿಂದಿ ಭಾಷೆಯಲ್ಲಿ ಉತ್ತಮ ಸಂವಹನ ಹೊಂದಬೇಕಾಗಿದೆ.


ಸಂದರ್ಶನ:
ಫೆರ್ನಾಂಡಿಸ್ ಗ್ರೂಪ್, ಮೆಟ್ರೊ ಪ್ಲಾಜಾ, 3ನೇ ಮಹಡಿ, ಆಕ್ಸಿಸ್ ಬ್ಯಾಂಕಿನ ಮೇಲಿನ ಮಹಡಿ, ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ, ವಾಲೆನ್ಸಿಯಾ, ಮಂಗಳೂರು ಇಲ್ಲಿ ಸಂದರ್ಶನ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ:9686675464, 9686528447, 9686440571, 9686675465, 8904178833
ನಂಬರಿಗೆ ಸಂಪರ್ಕಿಸಬಹುದು ಎಂದು ಫೆರ್ನಾಂಡೀಸ್ ಗ್ರೂಪ್ ಸಂಸ್ಥೆಯ ಪ್ರವರ್ತಕ ವಿಲ್ಸನ್ ಫೆರ್ನಾಂಡೀಸ್ ಮಂಗಳೂರುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಸೆ.23-25ರಂದು ಸಂದರ್ಶನ..
ದ.ಕ ಜಿಲ್ಲೆಯ ಯುವಕ-ಯುವತಿಯರು ಸಂಸ್ಥೆಯಿಂದ ಈಗಾಗಲೇ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಗಳಿಗೆ ತೊಡಗಿದ್ದು, ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಇದೀಗ ಫೆರ್ನಾಂಡೀಸ್ ಅಸೋಸಿಯೇಟ್ಸ್ ಸಂಸ್ಥೆಯು ಯುವ ಸಮೂಹಕ್ಕೆ ಮತ್ತೊಮ್ಮೆ ಭವಿಷ್ಯದ ಅವಕಾಶವನ್ನು ನೀಡುತ್ತಿದ್ದು ಸೆ.23-25ರಂದು ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here