ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘ

0

55.26 ಲಕ್ಷ‌ ರೂ ನಿವ್ವಳ ಲಾಭ: 20ಶೇ. ಡಿವಿಡೆಂಡ್,18 ವರ್ಷಗಳಿಂದಲೂ ಶೇ.100 ಸಾಲ ವಸೂಲಾತಿ

ಉಪ್ಪಿನಂಗಡಿ: ಪೆರ್ನೆ ಮತ್ತು ಬಿಳಿಯೂರು ಗ್ರಾಮ ವ್ಯಾಪ್ತಿಯಲ್ಲಿ ವ್ಯವಹಾರ ಕ್ಷೇತ್ರವನ್ನೊಳಗೊಂಡ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ಎಲ್ಲಾ ವ್ಯವಹಾರಗಳಿಂದ ಒಟ್ಟು 55,26,531.60 ರೂ. ನಿವ್ವಳ ಲಾಭ ಗಳಿಸಿದ್ದು, ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಯಸ್. ತೋಯಜಾಕ್ಷ ಶೆಟ್ಟಿ ಹೇಳಿದರು.


ಸಂಘದ ಕಚೇರಿಯ ಎರಡನೇ ಮಹಡಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಈ ಸಂಘವು ಆರಂಭವಾಗಿ 18 ವರ್ಷವಾಗಿದ್ದು, ಸತತ 18 ವರ್ಷದಿಂದ ಸಂಘವು ಸಾಲ ವಸೂಲಾತಿಯಲ್ಲಿ ಶೇ.100 ಸಾಧನೆ ಮಾಡಿರುತ್ತದೆ. ಈ ಮೂಲಕ ಎರಡು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧೀನದಲ್ಲಿರುವ ಸಹಕಾರಿ ಸಂಘಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಸಂಘವೆಂಬ ಹೆಗ್ಗಳಿಕೆಗೆ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು ಪಾತ್ರವಾಗಿದೆ. ಅಲ್ಲದೇ, ಲೆಕ್ಕ ಪರಿಶೋಧನಾ ವರ್ಗೀಕರಣದಲ್ಲಿ ‘ಎ’ ತರಗತಿ ಸ್ಥಾನವನ್ನು ಪಡೆದುಕೊಂಡಿದ್ದು, ನಿರಂತರ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಸಂಘದ ಸದಸ್ಯರ, ಠೇವಣಿದಾರರ, ಗ್ರಾಹಕರ ಅತ್ಯಮೂಲ್ಯ ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಶ್ರಮ ಮತ್ತು ಎಲ್ಲಾ ಸಹಕಾರಿ ಬಂಧುಗಳ ಕೊಡುಗೆಯೇ ಕಾರಣ. ಅವರಿಗೆಲ್ಲಾ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ವರ್ಷಾಂತ್ಯಕ್ಕೆ 1636 ಎ ದರ್ಜೆ ಸದಸ್ಯರಿದ್ದು, 3515 ಸಿ ದರ್ಜೆಯ ಸದಸ್ಯರಿದ್ದಾರೆ. ವರ್ಷಾರಂಭಕ್ಕೆ 1,44,17,920.00 ರೂ. ಸದಸ್ಯ ಪಾಲು ಬಂಡವಾಳವಿದ್ದು, ವರದಿ ವರ್ಷದಲ್ಲಿ 7,46,050.00 ಸಂಗ್ರಹ ಮಾಡಿ 7,53,620.00 ರೂ.ವನ್ನು ಸದಸ್ಯರಿಗೆ ಹಿಂದಿರುಗಿಸಿದೆ. ವರ್ಷಾಂತ್ಯಕ್ಕೆ 25,47,72,832.16 ಠೇವಣಾತಿ ಇದ್ದು, ಶೇ. 16.04 ವೃದ್ಧಿಯಾಗಿರುತ್ತದೆ. ಸಾಲ ಮತ್ತು ಮಾರಾಟ ಜೋಡಣೆಯಂತೆ ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ವರದಿ ವರ್ಷದಲ್ಲಿ 6,02,06,605.00 ರೂ. ಮೌಲ್ಯದ 143 ಟನ್ ಅಡಿಕೆಯನ್ನು ಕ್ಯಾಂಪ್ಕೋ ಮುಖೇನ ವ್ಯವಹಾರ ನಡೆಸಿದ್ದು, ವರದಿ ವರ್ಷದಲ್ಲಿ 3,01,030.00 ಕಮಿಷನ್ ಬಂದಿರುತ್ತದೆ. ಸಂಘದ ಹಿತದೃಷ್ಟಿಯಿಂದ ಕೃಷಿ ಉದ್ದೇಶಗಳಿಗೆ ಪಡೆದ ಸಾಲಗಳನ್ನು ತಾವು ಬೆಳೆದ ಕೃಷಿ ಉತ್ಪನ್ನಗಳಿಂದ ಅಡವು ಸಾಲ ಪಡೆಯಲು ಸೌಲಭ್ಯ ಇದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.


ಸನ್ಮಾನ:
ಎಸೆಸ್ಸಲ್ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಪಿ. ಅಝ್ಮರುಲ್ ಮುಹೀಝ್, ಲತೀಕ್ಷಾ, ಮನ್ವೀತ್ ವಿ. ಗೌಡ, ಅಕ್ಷತಾ ಗಂಗಾ ಯು., ವರ್ಷಾ ಬಿ. ರಾವ್, ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಸುಮಂತ ಶೆಟ್ಟಿ, ಅಭಿಷೇಕ್ ಎಸ್. ಶೆಟ್ಟಿ, ಚೇತನ್ ಕುಮಾರ್ ಕೆ., ಪವಿತ್ರಾ ಪಿ., ಮೇಷಾ ಟಿ.ಎಚ್., ಯು. ಅಮೃತ ದೇವಿ, ಮೆಸ್ಕಾಂ ಪವರ್‌ಮೆನ್‌ಗಳಾದ ಮಹೇಶ್, ಮಹೇಶ್ ಮತ್ತು ಆಶಾ ಕಾರ್ಯಕರ್ತೆಯರಾದ ರೇವತಿ, ರೇವತಿ, ರೇಷ್ಮಾ, ಜಯಂತಿ, ಶಾಂತಾ, ಶಶಿಕಲಾ ಮತ್ತು ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ನಿರ್ದೇಶಕರಾದ ಡಾ. ರಾಜಗೋಪಾಲ್ ಶರ್ಮಾ, ನೀಲಪ್ಪ ಗೌಡ, ಲಕ್ಷ್ಮಣ ನಾಯ್ಕ, ಜಯಲಕ್ಷ್ಮೀ, ರೇವತಿ ಪಿ., ಸುನೀಲ್ ನೆಲ್ಸನ್ ಪಿಂಟೋ, ವಿಶ್ವನಾಥ ಶೆಟ್ಟಿ, ಬಶೀರ್ ಕೆ., ಮಹಮ್ಮದ್ ಶರೀಫ್, ಚೆನ್ನಕೇಶವ ಯಾನೆ ಚೆನ್ನ ಮೇರ, ಬೇಬಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಾ ಡಿ. ಸ್ವಾಗತಿಸಿದರು. ಉಪಾಧ್ಯಕ್ಷರಾದ ತನಿಯಪ್ಪ ಪೂಜಾರಿ ವಂದಿಸಿದರು.

ಕಡೇಶಿವಾಲಯದಿಂದ ಬೇರ್ಪಟ್ಟು 2006ರಲ್ಲಿ ಪೆರ್ನೆಯಲ್ಲಿ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು ಆರಂಭವಾಗಿದ್ದು, 18 ವರ್ಷಗಳಿಂದಲೂ ಯಸ್. ತೋಯಜಾಕ್ಷ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಂಘವು ಮುನ್ನಡೆಯುತ್ತಿದ್ದು, ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಲ್ಲಿ ಸತತ 18ನೇ ಬಾರಿಗೆ ಸಂಘವು ಶೇ.100 ವಸೂಲಾತಿಯ ಸಾಧನೆಯನ್ನು ಮಾಡಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಅವರ ಗುಣದಿಂದಾಗಿ ಈ ಸಂಘವು ನಿರಂತರ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಅಲ್ಲದೇ, ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.

LEAVE A REPLY

Please enter your comment!
Please enter your name here