ಧರ್ಮಸ್ಥಳ ಗ್ರಾ.ಯೋ. ಕೆಮ್ಮಿಂಜೆ ವಲಯದ ಪದಾಧಿಕಾರಿಗಳಿಗೆ ಕಲ್ಪಣೆಯಲ್ಲಿ ತರಬೇತಿ ಕಾರ್ಯಕ್ರಮ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು, ಕೆಮ್ಮಿಂಜೆ ವಲಯದ 10 ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಕಲ್ಪಣೆ ಸಮುದಾಯ ಭವನದಲ್ಲಿ ನಡೆಯಿತು.

ತರಬೇತಿಯನ್ನು ವಲಯ ಅಧ್ಯಕ್ಷ ಸುಂದರ ಬಲ್ಯಾಯ ಉದ್ಘಾಟಿಸಿದರು. ತರಬೇತಿಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಅವರು ಯೋಜನೆಯ ಹಿನ್ನೆಲೆ, ಕ್ಷೇತ್ರದ ಪರಿಚಯ, ಯೋಜನೆಯ ಕಾರ್ಯಕ್ರಮಗಳು, ಯೋಜನೆಯಿಂದ ಗ್ರಾಮ ಅಭಿವೃದ್ಧಿಯಾದ ಬಗ್ಗೆ, ಸುರಕ್ಷಾ, ಪಿಆರ್‌ಕೆ ಸಿಡ್‌ಬಿ ಸಾಲದ ಬಗ್ಗೆ, ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು. ವಲಯದ ಮಾಜಿ ಅಧ್ಯಕ್ಷ ರಾಮಚಂದ್ರ ಮತ್ತು ರಾಧಾಕೃಷ್ಣ ಹಾಗೂ 10 ಒಕ್ಕೂಟದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ರಬಂಧಕರಾದ ವಿಶ್ವನಾಥ ಅವರು ಬಡ್ಡಿ ಲೆಕ್ಕಾಚಾರದ ಬಗ್ಗೆ ಬಡ್ಡಿಯ ವಿಧದ ಬಗ್ಗೆ ಸಿಸಿ ಖಾತೆಯ ಬಗ್ಗೆ, ಎಸ್ ಬಿ ಖಾತೆಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ಒಕ್ಕೂಟದ ಮಹತ್ವ ಉದ್ದೇಶ ಉಪಸಮಿತಿಯ ಬಗ್ಗೆ, ಹಣ ಸಂಗ್ರಹಣೆಯ ಬಗ್ಗೆ ಗ್ರಾಹಕ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಯಶೋಧ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here