ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಜಮಾಬಂಧಿ ಸಭೆ ಸೆ.6ರಂದು ಬೆಳಿಗ್ಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಅವರು ಜಮಾಬಂಧಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯತ್ನ ಲೆಕ್ಕಪತ್ರ ದಾಖಲೆ ಪುಸ್ತಕ ಪರಿಶೀಲನೆ ನಡೆಸಲಾಯಿತು. ಬಳ್ಪ ಗ್ರಾ.ಪಂ. ಪಿಡಿಒ ನಾರಾಯಣ ಗೌಡ ಅವರು ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಬಾಣಜಾಲು, ಉಪಾಧ್ಯಕ್ಷೆ ವನಿತಾ, ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ ಉಪಸ್ಥಿತರಿದ್ದರು. ಸದಸ್ಯರಾದ ಉದಯಕುಮಾರ್, ವಿಶ್ವನಾಥ ಗೌಡ, ಡೈಸಿ ವರ್ಗೀಸ್, ಪುಷ್ಪಾ, ಶೈಲ, ಸುಧಾಕರ ಜಿ., ಮಹೇಶ್ ಹಾಗೂ ಗ್ರಾಮಸ್ಥರು, ಗ್ರಾ.ಪಂ.ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಪಿಡಿಒ ದೇವಿಕಾ ಎಂ.ಸ್ವಾಗತಿಸಿ, ನಿರೂಪಿಸಿದರು. ಸಭೆಯ ಬಳಿಕ ೨೦೨೩-೨೪ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ನಿರ್ವಹಿಸಿದ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು.