ಸೆ.18-ಸೆ.23: ಪೋಳ್ಯದಲ್ಲಿ ದೇಶಿ ತಳಿಯ ಮನೆ ನಾಯಿಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ

0

ಪುತ್ತೂರು: ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಮಲ್ಪೆ ಮತ್ತು ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ಹಾಗು ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಯೋಗದೊಂದಿಗೆ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಶಿಬಿರ ಸೆ.18 ರಿಂದ ಸೆ.23ರ ತನಕ ಪೋಳ್ಯದಲ್ಲಿ ನಡೆಯಲಿದೆ ಎಂದು ಅನಿಮಲ್ ಕೇರ್ ಟ್ರಸ್ಟ್‌ನ ಮಮತಾ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ವಿಶೇಷವಾಗಿ ನಾಯಿಗಳ ಸಂತನೊತ್ಪತ್ತಿಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಶಿಬಿರದ ಆಯೋಜನೆ ಮಾಡಲಾಗಿದೆ. ಪುತ್ತೂರಿನಲ್ಲಿ ಮೂರನೇ ಬಾರಿ ಈ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಬೀದಿ ನಾಯಿಗಳು ಮತ್ತು ಬೆಕ್ಕುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಾಗಿ ಮನೆಯಿಂದ ಹೆಣ್ಣು ನಾಯಿ ಮರಿಯನ್ನು ಬೀದಿಗಳಲ್ಲಿ ಬಿಟ್ಟು ಹೋಗುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೀದಿ ನಾಯಿಗಳಿಂದ ರ‍್ಯಾಬೀಸ್ ಬರುವ ಸಾಧ್ಯತೆ ಹೆಚ್ಚು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿನ ದೇಶಿ ಸಾಕು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿದರೆ ಮತ್ತೆ ಅವರು ಮರಿಗಳನ್ನು ಬೀದಿಗೆ ಬೀಡುವ ಪ್ರಸಂಗ ಎದುರಾಗುವುದಿಲ್ಲ. ಹಾಗಾಗಿ ಮನೆಯಲ್ಲಿ ಸಾಕು ನಾಯಿಗಳಿದ್ದರೆ ಅದು ಹೆಣ್ಣಾಗಲಿ, ಗಂಡಾಗಲಿ ಅದಕ್ಕೆ ಸಂತಾನ ಹರಣ ಚಿಕಿತ್ಸೆ ಮಾಡಲಾಗುವುದು. 120 ನಾಯಿಗಳಿಗೆ ಈ ಶಿಬಿರದಲ್ಲಿ ಸಂತನಾ ಹರಣ ಚಿಕಿತ್ಸೆಯ ಗುರಿ ಹೊಂದಲಾಗಿದೆ. ಹಾಗಾಗಿ ನೋಂದಾವಣೆ ಮಾಡುವವರು ಮೊಬೈಲ್ ಸಂಖೆ 9902253064 ಅನ್ನು ಸಂಪರ್ಕಿಸಬಹುದು ಎಂದವರು ಹೇಳಿದರು.

ಸೆ.17ಕ್ಕೆ ವಿಶೇಷ ಮಾಹಿತಿ ಶಿಬಿರ:
ಬೀದಿ ನಾಯಿಗಳಿಂದಾಗುವ ಸಮಸ್ಯೆಗಳು ಮತ್ತು ಅದನ್ನು ನಿಯಂತ್ರಿಸುವ ಕುರಿತು ಹಾಗು ಸೆ.17ಕ್ಕೆ ಸಂಜೆ ಗಂಟೆ 7ಕ್ಕೆ ರೋಟರಿ ಮನೀಷಾ ಸಭಾಂಗಣದಲ್ಲಿ ಡಾ.ಇಲೋಅಟ್ಟರ್ ಅವರಿಂದ ವಿಶೇಷ ಮಾಹಿತಿ ಶಿಬಿರ ನಡೆಯಲಿದೆ ಎಂದು ರೋಟರಿ ಯುವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ರೋಟರಿ ಪುತ್ತೂರು ಪೂರ್ವ ಇದರ ಅಧ್ಯಕ್ಷ ಡಾ.ರವಿಪ್ರಕಾಶ್, ರೋಟರಿ ಬಿರುಮಲೆ ಹಿಲ್ಸ್ ಇದರ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ರೋಟರಿ ಪುತ್ತೂರು ಸಿಟಿ ಅಧ್ಯಕ್ಷ ಹಾಜಿ ಮೊಹಮ್ಮದ್, ರೋಟರಿ ಪೂರ್ವದ ಪೂರ್ವಾಧ್ಯಕ್ಷ ಕೃಷ್ಣನಾರಾಯಣ ಮುಳಿಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here